AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚೆನ್ನೈನಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಈವೆಂಟ್; ತಮಿಳುನಾಡಿನಲ್ಲೂ ಯಶ್ ಹವಾ

ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾದ ಚೆನ್ನೈ ಪ್ರೀ-ರಿಲೀಸ್ ಈವೆಂಟ್ ಆಗಸ್ಟ್ 24ಕ್ಕೆ ಮರುನಿಗದಿಯಾಗಿದೆ. ಜವಾಹರಲಾಲ್ ನೆಹರೂ ಇಂಡೋರ್ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಯಶ್ ಭಾಗವಹಿಸಲಿದ್ದು, ಈ ಹಿಂದೆ ತಮಿಳಿನಲ್ಲಿ ಸರಾಗವಾಗಿ ಮಾತನಾಡಿ ಸೃಷ್ಟಿಸಿದ್ದ ಕ್ರೇಜ್ ಈವೆಂಟ್‌ನ ಯಶಸ್ಸಿಗೆ ಮತ್ತು ಚಿತ್ರದ ಪ್ರಚಾರಕ್ಕೆ ಭಾರಿ ನೆರವಾಗಲಿದೆ.

ಚೆನ್ನೈನಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಈವೆಂಟ್; ತಮಿಳುನಾಡಿನಲ್ಲೂ ಯಶ್ ಹವಾ
ಯಶ್
ರಾಜೇಶ್ ದುಗ್ಗುಮನೆ
|

Updated on:Aug 24, 2026 | 10:59 AM

Share

ಮುಖ್ಯಾಂಶಗಳು

  • ಚೆನ್ನೈನಲ್ಲಿ ‘ಟಾಕ್ಸಿಕ್’ ಹವಾ
  • ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ಮಾಸ್ ಈವೆಂಟ್
  • ಆಗಸ್ಟ್ 24ಕ್ಕೆ ಈವೆಂಟ್ ಮರುನಿಗದಿ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ತಮಿಳು ಪ್ರೀ-ರಿಲೀಸ್ ಈವೆಂಟ್ ಇಂದು (ಆಗಸ್ಟ್ 24) ಚೆನ್ನೈನ ಪ್ರತಿಷ್ಠಿತ ಜವಾಹರಲಾಲ್ ನೆಹರೂ ಇಂಡೋರ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಮೊದಲು ಆಗಸ್ಟ್ 23ರಂದು ಈವೆಂಟ್ ನಡೆಯಬೇಕಿತ್ತು. ಕೊನೆಯ ಕ್ಷಣದಲ್ಲಿ ದಿನಾಂಕದಲ್ಲಿ ಬದಲಾವಣೆಯಾಗಿದೆ. ಈ ಹಿಂದೆ ನೋಂದಾಯಿಸಿಕೊಂಡಿದ್ದ ಅಭಿಮಾನಿಗಳ ಉಚಿತ ಪಾಸ್‌ಗಳು ಹಾಗೂ ಟಿಕೆಟ್‌ಗಳು ಮರುದಿನಕ್ಕೂ ಮಾನ್ಯವಾಗಿರಲಿವೆ.

ತಮಿಳುನಾಡಿನಲ್ಲಿ ಈ ಸಮಾರಂಭವು ಅತ್ಯಂತ ವಿಜೃಂಭಣೆಯಿಂದ ನೆರವೇರಲಿದ್ದು, ಕಾಲಿವುಡ್‌ನ ಪ್ರಮುಖ ಗಣ್ಯರು ಹಾಗೂ ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ.ತೆಲುಗಿನಲ್ಲಿ ಶನಿವಾರ (ಆಗಸ್ಟ್ 22) ‘ಟಾಕ್ಸಿಕ್’ ಈವೆಂಟ್ ನಡೆದಿದೆ. ಈ ವೇಳೆ ಸಾವಿರಾರು ಅಭಿಮಾನಿಗಳು ನೆರೆದಿದ್ದರು. ಸ್ಪೀಕರ್ ಬಿದ್ದು ಸಣ್ಣ ಅವಘಡ ಸಂಭವಿಸಿತ್ತು. ಅದು ಚೆನ್ನೈನಲ್ಲಿ ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.

ಈ ಹಿಂದೆ ‘ಕೆಜಿಎಫ್ 2’ ಸಿನಿಮಾಗಳ ಪ್ರಚಾರ ಹಾಗೂ ಸಂದರ್ಶನಗಳ ಸಮಯದಲ್ಲಿ ಯಶ್ ಅವರು ಅತ್ಯಂತ ಸರಾಗವಾಗಿ ತಮಿಳು ಭಾಷೆಯಲ್ಲಿ ಮಾತನಾಡಿ ತಮಿಳು ಪ್ರೇಕ್ಷಕರ ಮನ ಗೆದ್ದಿದ್ದರು. ಅವರ ಈ ಭಾಷಾ ಪ್ರೌಢಿಮೆ ಮತ್ತು ಜನಪ್ರಿಯತೆ ಚೆನ್ನೈನಲ್ಲಿ ನಡೆಯಲಿರುವ ಈವೆಂಟ್ ಯಶಸ್ಸಿಗೆ ಹಾಗೂ ಅಲ್ಲಿನ ಮಾರುಕಟ್ಟೆಯಲ್ಲಿ ‘ಟಾಕ್ಸಿಕ್’ ಸಿನಿಮಾದ ಕ್ರೇಜ್ ಮತ್ತಷ್ಟು ಹೆಚ್ಚಿಸಲು ದೊಡ್ಡ ಮಟ್ಟದಲ್ಲಿ ಸಹಕಾರಿಯಾಗಲಿದೆ.

ಇದನ್ನೂ ಓದಿ: ತೆಲುಗು ರಾಜ್ಯಗಳಲ್ಲಿ ‘ಟಾಕ್ಸಿಕ್’ ಬುಕಿಂಗ್ ಓಪನ್ ಆಗಿಲ್ಲ ಏಕೆ? ಇಲ್ಲಿದೆ ಕಾರಣ

‘ಟಾಕ್ಸಿಕ್’ ಚಿತ್ರ ಆಗಸ್ಟ್ 26ಕ್ಕೆ ಕನ್ನಡ, ತಮಿಳು, ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಈ ಸಿನಿಮಾ ನೋಡಲು ಫ್ಯಾನ್ಸ್ ಕಾದಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ. ಹಿಂದಿ ಹಾಗೂ ಕನ್ನಡ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯಶ್ ಅವರ ದ್ವಿಪಾತ್ರ ಸಿನಿಮಾದ ಹೈಲೈಟ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:54 am, Mon, 24 August 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More