ಅನೇಕ ಪ್ರೀಮಿಯರ್ ಲೀಗ್ಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಲೀಗ್ಗಳು ಜನಪ್ರಿಯತೆ ಪಡೆದಿವೆ. ಈಗ ‘ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್’ನ (ಕೆಡಬ್ಲ್ಯೂಪಿಎಲ್) ಮೂರನೇ ಸೀಸನ್ ನಡೆಯುತ್ತಿದೆ. ಈ ಟ್ರೋಫಿಯ ಅನಾವರಣ ಬೆಂಗಳೂರಿನ ಮಲ್ಲೇಶ್ವರದಲ್ಲಿ ನಡೆದಿದೆ. ಬಿಜೆಪಿ ಶಾಸಕ ಡಾ. ಸಿ. ಎನ್ ಅಶ್ವತ್ಥನಾರಾಯಣ ಅನಾವರಣಗೊಳಿಸಿದರು. ಮುಖ್ಯ ಅತಿಥಿಯಾಗಿ ವಿಜಯ್ ರಾಘವೇಂದ್ರ ಭಾಗಿ ಆಗಿದ್ದರು.
ಕರ್ನಾಟಕ ವೀಲ್‌ಚೇರ್ ಪ್ರೀಮಿಯರ್ ಲೀಗ್ ಈ ಮೊದಲು ಎರಡು ಸೀಸನ್ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಕೆಡಬ್ಲ್ಯೂಪಿಎಲ್ ಹಿಂದಿನ ಎರಡು ಸೀಸನ್‌ಗಳಿಗಿಂತ ಗ್ರ್ಯಾಂಡ್ ಆಗಿ ನಡೆಯಲಿದೆ. ಈ ಸೀಸನ್‌ನಲ್ಲಿ ಸ್ಥಳೀಯ ಪ್ರತಿಭೆಗಳು ಮಾತ್ರವಲ್ಲದೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಆಟಗಾರರು ಭಾಗವಹಿಸಲಿದ್ದಾರೆ ಅನ್ನೋದು ವಿಶೇಷ.
ವಿಜಯ್ ರಾಘವೇಂದ್ರ ಅವರು ಈ ಲೀಗ್ಗೆ ಬೆಂಬಲವಾಗಿ ನಿಂತಿದ್ದಾರೆ. ಲೀಗ್ ಪಂದ್ಯಾವಳಿಯ ಸಮಯದಲ್ಲಿಯೂ ಮಾತ್ರವಲ್ಲದೆ, ಟೂರ್ನಮೆಂಟ್ ಸಮಯದಲ್ಲೂ ಜೊತೆಗಿರೋದಾಗಿ ಮಾತನಾಡಿದ್ದಾರೆ. ಐಪಿಎಲ್‌ನಂತಹ ವೃತ್ತಿಪರ ಕ್ರಿಕೆಟ್ ಲೀಗ್‌ಗಳಂತೆ KWPLನಲ್ಲೂ ಆಟಗಾರರ ಹರಾಜು ನಡೆಯಲಿದೆ ಅನ್ನೋದು ವಿಶೇಷ. ವಿಶೇಷ ಚೇತನರು ಇದರ ಭಾಗವಾಗಲಿದ್ದಾರೆ. ಶಾಸಕ ಡಾ. ಸಿ. ಎನ್ ಅಶ್ವತ್ಥನಾರಾಯಣ ಕೂಡ ಈ ಲೀಗ್ಗೆ ವಿಶ್ ಮಾಡಿದ್ದಾರೆ.
ಇದನ್ನೂ ಓದಿ: ‘ಚಿನ್ನಾರಿಮುತ್ತ’ನಿಗೆ 31 ವರ್ಷ, ನೆನಪಿನ ಬುತ್ತಿ ತೆರೆದಿಟ್ಟ ವಿಜಯ್ ರಾಘವೇಂದ್ರ
ವಿಜಯ್ ರಾಘವೇಂದ್ರ ಅವರು ಕಳೆದ ವರ್ಷ ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡರು. ಇದಾದ ಬಳಿಕ ಅವರು ಬ್ರೇಕ್ ತೆಗೆದುಕೊಂಡಿದ್ದರು. ಆ ಬಳಿಕ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಮೂಲಕ ನೋವನ್ನು ಮರೆಯಲು ಪ್ರಯತ್ನಿಸುತ್ತಿದ್ದಾರೆ. ಈ ವರ್ಷ ಅವರ ನಟನೆಯ ‘ಕೇಸ್ ಆಫ್ ಕೊಂಡಾಣ’, ‘ಜೋಗ್ 101’, ‘ಗ್ರೇ ಗೇಮ್ಸ್’ ಸಿನಿಮಾಗಳು ರಿಲೀಸ್ ಆಗಿ ಮೆಚ್ಚುಗೆ ಪಡೆದಿವೆ. ‘ರಿಪ್ಪನ್ ಸ್ವಾಮಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಅವರು ಪತ್ನಿ ಬಗ್ಗೆ ಭಾವನಾತ್ಮಕವಾಗಿ ವಿಡಿಯೋ ಹಂಚಿಕೊಂಡಿದ್ದರು. ಇದರಲ್ಲಿ ಸ್ಪಂದನಾ ಬಗ್ಗೆ ಮಾತನಾಡಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.