‘ಜೋಗ್​ 101’ ಚಿತ್ರದ ಹಾಡಿನಲ್ಲಿ ವಿಜಯ್​ ರಾಘವೇಂದ್ರ ಜೊತೆ ರಘು ದೀಕ್ಷಿತ್​ ಮಿಂಚಿಂಗ್​

|

Updated on: Feb 14, 2024 | 5:19 PM

ಒಂದು ಪಯಣದ ರೀತಿ ‘ಮುಂಜಾನೆ ಮಂಜನ್ನು..’ ಸಾಂಗ್​ ಮೂಡಿಬಂದಿದೆ. ರಘು ದೀಕ್ಷಿತ್​ ಅವರು ಈ ಗೀತೆಗೆ ಧ್ವನಿ ನೀಡಿದ್ದು ಮಾತ್ರವಲ್ಲದೇ, ಒಂದು ವಿಶೇಷ ಗೆಟಪ್​ನಲ್ಲೂ ಅವರು ಕಾಣಿಸಿಕೊಂಡಿದ್ದಾರೆ. ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿದ್ದು, ಅವಿನಾಶ್ ಆರ್. ಬಾಸೂತ್ಕರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಮಲೆನಾಡಿನ ಸುಂದರ ಸ್ಥಳಗಳಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ.

‘ಜೋಗ್​ 101’ ಚಿತ್ರದ ಹಾಡಿನಲ್ಲಿ ವಿಜಯ್​ ರಾಘವೇಂದ್ರ ಜೊತೆ ರಘು ದೀಕ್ಷಿತ್​ ಮಿಂಚಿಂಗ್​
ವಿಜಯ್​ ರಾಘವೇಂದ್ರ, ರಘು ದೀಕ್ಷಿತ್​
Follow us on

ಅನುಭವಿ ನಟ ವಿಜಯ್ ರಾಘವೇಂದ್ರ (Vijay Raghavendra) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅವುಗಳಲ್ಲಿ ‘ಜೋಗ್​ 101’ ಸಿನಿಮಾ (Jog 101 Movie) ವಿಶೇಷವಾಗಿ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಶೀರ್ಷಿಕೆಯೇ ಡಿಫರೆಂಟ್​ ಆಗಿದೆ. ನಿರ್ಮಾಪಕ ಹಾಗೂ ಕ್ರಿಯೇಟಿವ್ ಡೈರೆಕ್ಟರ್ ರಾಘು ಅವರ ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಅಭಿಮಾನಿಗಳ ಪ್ರೀತಿಯ ‘ಚಿನ್ನಾರಿಮುತ್ತ’ ವಿಜಯ್ ರಾಘವೇಂದ್ರ ಅವರು ಈ ಸಿನಿಮಾದಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈಗ ‘ಜೋಗ್​ 101’ ಚಿತ್ರದ ಮೊದಲ ಹಾಡಿನ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿದೆ.

‘ಜೋಗ್ 101’ ಚಿತ್ರದ ಮೊದಲನೇ ಗೀತೆ ‘ಮುಂಜಾನೆ ಮಂಜನ್ನು..’ ರಿಲೀಸ್​ ಆಗಿದೆ. ‘ಸೆವೆನ್ ಸ್ಟಾರ್ ಪಿಕ್ಚರ್ಸ್’ ಯೂಟ್ಯೂಬ್ ಚಾನೆಲ್ ಮೂಲಕ ಲಿರಿಕಲ್ ವಿಡಿಯೋ ಅನಾವರಣ ಆಗಿದೆ. ಅವಿನಾಶ್ ಆರ್. ಬಾಸೂತ್ಕರ್ ಅವರು ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಗೀತೆಗೆ ವಿ. ನಾಗೇಂದ್ರ ಪ್ರಸಾದ್ ಅವರು ಸಾಹಿತ್ಯ ಬರೆದಿದ್ದಾರೆ. ಜನಪ್ರಿಯ ಸಿಂಗರ್​ ರಘು ದೀಕ್ಷಿತ್ ಅವರು ‘ಮುಂಜಾನೆ ಮಂಜನ್ನು..’ ಗೀತೆಗೆ ಧ್ವನಿಯಾಗಿದ್ದಾರೆ. ಸುಮನ್ ಜಾದೂಗಾರ್ ಅವರು ಈ ಸಾಂಗ್​ನ ಇಂಗ್ಲಿಷ್​ ಭಾಷಾಂತರ ಮಾಡಿದ್ದಾರೆ.

‘ಮುಂಜಾನೆ ಮಂಜನ್ನು..’ ಲಿರಿಕಲ್ ವಿಡಿಯೋ:

ವಿಜಯ್ ರಾಘವೇಂದ್ರ ಜೊತೆ ಈ ಸಿನಿಮಾದ ಪಾತ್ರವರ್ಗದಲ್ಲಿ ಅನೇಕರು ನಟಿಸಿದ್ದಾರೆ. ವಿಜಯ ರಾಘವೇಂದ್ರ ಅವರಿಗೆ ಜೋಡಿಯಾಗಿ ತೇಜಸ್ವಿನಿ ಶೇಖರ್ ಅವರು ಅಭಿನಯಿಸಿದ್ದಾರೆ. ಕಡಿಪುಡಿ ಚಂದ್ರು, ಗೋವಿಂದೇ ಗೌಡ, ತಿಲಕ್, ರಾಜೇಶ್ ನಟರಂಗ, ನಿರಂಜನ್ ದೇಶಪಾಂಡೆ, ಪ್ರಸನ್ನ, ಶಶಿಧರ್, ಸುಂದರಶ್ರೀ, ಹರ್ಷಿತಾ ಗೌಡ ಮುಂತಾದವರು ನಟಿಸಿದ್ದಾರೆ. ‘ಜೋಗ್ 101’ ಸಿನಿಮಾಗೆ ಸುನೀತ್ ಹಲಗೇರಿ ಛಾಯಾಗ್ರಹಣ ಮಾಡಿದ್ದಾರೆ. ಮೋಹನ್ ರಂಗಕಹಳೆ ಅವರು ಸಂಕಲನ ಮಾಡಿದ್ದಾರೆ. ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನ, ಕಲೈ ಮಾಸ್ಟರ್ ಅವರ ನೃತ್ಯ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ‘ಸ್ಪಂದನಾ ಇದನ್ನೆಲ್ಲಾ ನೋಡುತ್ತಿದ್ದಾಳೆ’; ಭಾವುಕರಾಗಿ ಮಾತನಾಡಿದ ವಿಜಯ್ ರಾಘವೇಂದ್ರ

ಒಂದು ಜರ್ನಿ ಸಾಂಗ್​ ರೀತಿಯಲ್ಲಿ ‘ಮುಂಜಾನೆ ಮಂಜನ್ನು..’ ಗೀತೆ ಮೂಡಿದೆ. ಹಾಡಿಗೆ ಧ್ವನಿ ನೀಡುವುದರ ಜೊತೆಗೆ ವಿಶೇಷ ಗೆಟಪ್​ ಮೂಲಕ ಕ್ಯಾಮೆರಾ ಎದುರು ಬಂದಿದ್ದಾರೆ ರಘು ದೀಕ್ಷಿತ್​. ಪ್ರಕೃತಿಯಲ್ಲಿ ಅಡಗಿರುವ ಪರಮಾತ್ಮನ ಲೀಲೆಯನ್ನು ವರ್ಣಿಸುವಂತಿದೆ ನಾಗೇಂದ್ರ ಪ್ರಸಾದ್​ ಅವರ ಸಾಹಿತ್ಯ. ಮಲೆನಾಡಿನ ವಿಶೇಷ ಲೊಕೇಷನ್​ಗಳಲ್ಲಿ ಇದರ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಟೈಟಲ್​ಗೆ ತಕ್ಕಂತೆ ಕಣ್ಮನ ಸೆಳೆಯುವ ಜೋಗ ಜಲಪಾತದ ದೃಶ್ಯಗಳ ಝಲಕ್​ ಕೂಡ ಈ ಲಿರಿಕಲ್​ ವಿಡಿಯೋನಲ್ಲಿ ಕಾಣಿಸಿದೆ. ಈ ಸಿನಿಮಾದ ಬಿಡುಗಡೆಯಾಗಿ ವಿಜಯ್​ ರಾಘವೇಂದ್ರ ಅವರ ಫ್ಯಾನ್ಸ್​ ಕಾದಿದ್ದಾರೆ.