ವಿಕ್ರಾಂತ್ ರೋಣದ ಹಿಂದಿ ಡಬ್ಬಿಂಗ್ ಮುಗಿಸಿ ಸಂತಸ ಹಂಚಿಕೊಂಡ ನೀತಾ ಅಶೋಕ್; ಆದರೆ ಫ್ಯಾನ್ಸ್​​ಗೆ ಅಚ್ಚರಿ ನೀಡಿದ ವಿಷಯವೇ ಬೇರೆ!

ವಿಕ್ರಾಂತ್ ರೋಣ ಕುರಿತ ಮಹತ್ವದ ಅಪ್ಡೇಟ್ ಒಂದು ಲಭ್ಯವಾಗಿದೆ. ನಟಿ ನೀತಾ ಅಶೋಕ್ ಕನ್ನಡದೊಂದಿಗೆ ಹಿಂದಿಗೂ ಧ್ವನಿ ನೀಡಿದ್ದಾರೆ. ಈ ಸಂತಸವನ್ನು ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅಭಿಮಾನಿಗಳಿಗೆ ಇದಕ್ಕಿಂತ ಮತ್ತೊಂದು ಅಂಶ ಕುತೂಹಲ ಕೆರಳಿಸಿದೆ.

ವಿಕ್ರಾಂತ್ ರೋಣದ ಹಿಂದಿ ಡಬ್ಬಿಂಗ್ ಮುಗಿಸಿ ಸಂತಸ ಹಂಚಿಕೊಂಡ ನೀತಾ ಅಶೋಕ್; ಆದರೆ ಫ್ಯಾನ್ಸ್​​ಗೆ ಅಚ್ಚರಿ ನೀಡಿದ ವಿಷಯವೇ ಬೇರೆ!
ನಟಿ ನೀತಾ ಅಶೋಕ್ ಹಂಚಿಕೊಂಡಿರುವ ಚಿತ್ರ (Credits: Neetha Ashok/ Twitter)
Edited By:

Updated on: Oct 13, 2021 | 1:31 PM

ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ ಚಿತ್ರಗಳಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಮೊದಲ ಸಾಲಿನಲ್ಲಿದೆ. ಚಿತ್ರದ ಡಬ್ಬಿಂಗ್ ಕೆಲಸಗಳು ನಡೆಯುತ್ತಿವೆ ಎಂದು ಇತ್ತೀಚೆಗಷ್ಟೇ ಸುದೀಪ್ ತಿಳಿಸಿದ್ದರು. ಇದೀಗ ಚಿತ್ರತಂಡದಿಂದ ಮತ್ತೊಂದು ಅಪ್ಡೇಟ್ ಬಂದಿದ್ದು, ಫ್ಯಾನ್ಸ್ ಖುಷಿಯಾಗಿದ್ದಾರೆ. ‘ವಿಕ್ರಾಂತ್ ರೋಣ’ದ ಬೆಡಗಿ ನೀತಾ ಅಶೋಕ್, ‘ವಿಕ್ರಾಂತ್ ರೋಣ’ದ ಹಿಂದಿ ಅವತರಣಿಕೆಗೂ ಸ್ವತಃ ಅವರೇ ಧ್ವನಿ ನೀಡಿದ್ದಾರೆ. ಸದ್ಯ ಅವರ ಪಾತ್ರದ ಹಿಂದಿ ಡಬ್ಬಿಂಗ್ ಮುಕ್ತಾಯವಾಗಿದ್ದು, ಸಾಮಾಜಿಕ ಜಾಲತಾಣದ ಮುಖಾಂತರ ಸಂತಸ ಹಂಚಿಕೊಂಡಿದ್ದಾರೆ.

ಟ್ವಿಟರ್​ನಲ್ಲಿ ಪೋಸ್ಟರ್​ ಹಂಚಿಕೊಂಡಿರುವ ನೀತಾ ಅಶೋಕ್, ‘ವಿಕ್ರಾಂತ್ ರೋಣ’ದ ಹಿಂದಿ ಡಬ್ಬಿಂಗ್ ಮುಗಿಸಿದ್ದಕ್ಕೆ ಬಹಳ ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದರೊಂದಿಗೆ ಅವರು ಕನ್ನಡದೊಂದಿಗೆ ಹಿಂದಿಗೂ ಸ್ವತಃ ತಾವೇ ಧ್ವನಿ  ನೀಡಿದ್ದು, ಸಖತ್ ಥ್ರಿಲ್ ನೀಡಿತು ಎಂದು ಟ್ವೀಟ್ ಮಾಡಿದ್ದಾರೆ. ನೀತಾ ಹಂಚಿಕೊಂಡ ಚಿತ್ರದಲ್ಲಿ ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಕೂಡ ಇದ್ದಾರೆ.

ನಟಿ ನೀತಾ ಅಶೋಕ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:

ಅಭಿಮಾನಿಗಳ ಅಚ್ಚರಿಗೆ ಕಾರಣವೇನು?
ನೀತಾ ಅಶೋಕ್ ಹಂಚಿಕೊಂಡಿರುವ ಚಿತ್ರದಲ್ಲಿ ಅಭಿಮಾನಿಗಳು ಕುತೂಹಲಕರ ಅಂಶವೊಂದನ್ನು ಪತ್ತೆ ಹಚ್ಚಿದ್ದಾರೆ. ಚಿತ್ರದಲ್ಲಿರುವ ಟಿವಿ ಸ್ಕ್ರೀನ್​ನಲ್ಲಿ ನೀತಾ ಅವರು ಸಿನಿಮಾದಲ್ಲಿನ ಲುಕ್ ಕಾಣಿಸುವಂತಿದ್ದು, ಅದನ್ನು ನೋಡಿದ ಅಭಿಮಾನಿಗಳು ಚಿತ್ರದ ಗುಣಮಟ್ಟವನ್ನು ಹೊಗಳುತ್ತಿದ್ದಾರೆ. ಚಿತ್ರದ ಕಲರ್ ಗ್ರೇಡಿಂಗ್ ಹಾಗೂ ಮೇಕಿಂಗ್ ಹಾಲಿವುಡ್ ಶೈಲಿಯಲ್ಲಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದರೊಂದಿಗೆ ಚಿತ್ರದಲ್ಲಿನ ನೀತಾ ಅಶೋಕ್​ ಲುಕ್​ಗೂ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಒಟ್ಟಿನಲ್ಲಿ ವಿಕ್ರಾಂತ್ ರೋಣದ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಫ್ಯಾನ್ಸ್ ಕಾತರದಿಂದ ಕಾಯುವಂತೆ ಮಾಡಿದೆ.

ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥೆಮ್’:

ವಿಕ್ರಾಂತ್ ರೋಣ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡುತ್ತಿದ್ದು, ಅನೂಪ್ ಭಂಡಾರಿ ನಿರ್ದೇಶಿಸಿದ್ದಾರೆ. ತಾರಾಗಣದಿಂದಲೂ ಈ ಚಿತ್ರ ಕುತೂಹಲ ಕೆರಳಿಸಿದ್ದು, ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್, ನಿರೂಪ್ ಭಂಡಾರಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್ ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:

Vikrant Rona: ವಿಕ್ರಾಂತ್ ರೋಣದ ‘ಡೆಡ್ ಮ್ಯಾನ್ಸ್ ಆಂಥಮ್’ ರಿಲೀಸ್; ಕಿಚ್ಚನ ನೂತನ ಅವತಾರಕ್ಕೆ ಅಭಿಮಾನಿಗಳು ಫಿದಾ

Yash: ದುಬೈನಲ್ಲಿ ಮಿಂಚುತ್ತಿದ್ದಾರೆ ರಾಕಿಂಗ್ ಸ್ಟಾರ್ ಯಶ್ ದಂಪತಿ; ಏನು ವಿಶೇಷ?

ಕನ್ನಡ ಚಿತ್ರಗಳಿಗೆ ಹೆಚ್ಚಾಯ್ತು ಪೈರಸಿ ಸಮಸ್ಯೆ; ದೂರು ನೀಡಿದ ‘ಶಾರ್ದೂಲ’ ನಿರ್ಮಾಪಕ ರೋಹಿತ್