Updated on: Jul 03, 2021 | 5:27 PM
ಸರ್ಜಾ ಕುಟುಂಬ ಆಂಜನೇಯ ಸ್ವಾಮಿಯ ಭಕ್ತರು. ಸಿನಿಮಾಗಳಲ್ಲಿ ಮಾತ್ರವಲ್ಲದೆ ರಿಯಲ್ ಲೈಫ್ನಲ್ಲಿಯೂ ಪವನಪುತ್ರ ಹನುಮಂತನ ಬಗ್ಗೆ ಅಪಾರವಾದ ಭಕ್ತಿ ಹೊಂದಿದ್ದಾರೆ.
ಇತ್ತೀಚೆಗೆ ಆಂಜನೇಯ ದೇವಸ್ಥಾನ ನಿರ್ಮಿಸಿ, ಅದರ ಕಾರ್ಯಗಳನ್ನು ಅರ್ಜುನ್ ಸರ್ಜಾ ನೆರವೇರಿಸಿದ್ದರು. ವಿನಯ್ ಗುರೂಜಿ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದ್ದರು.
ಇದಾದ ಬೆನ್ನಲ್ಲೇ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರು ಪತ್ನಿ ಜತೆ ಇಂದು (ಜುಲೈ 3) ವಿನಯ್ ಗುರೂಜಿ ಅವರನ್ನು ಭೇಟಿ ಮಾಡಿದ್ದಾರೆ.
ಚೊಚ್ಚಲ ಭೇಟಿಯಲ್ಲೇ ಧ್ರುವ ಅವರಿಗೆ ವಿನಯ್ ಗುರೂಜಿ ಹನುಮನ ವಿಗ್ರಹವನ್ನು ನೀಡಿದ್ದಾರೆ.
ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Published On - 5:26 pm, Sat, 3 July 21