Vinay Rajkumar: ವಿನಯ್ ರಾಜ್​ಕುಮಾರ್ ನಟನೆಯ ಪೆಪೆ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್

Vinay Rajkumar: ‘ಒಂದು ಸರಳ ಪ್ರೇಮ ಕತೆ’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟ ವಿನಯ್ ರಾಜ್​ಕುಮಾರ್, ಇದೀಗ ‘ಪೆಪೆ’ ಸಿನಿಮಾ ಮೂಲಕ ರಗಡ್ ಅವತಾರದಲ್ಲಿ ಬರುತ್ತಿದ್ದಾರೆ. ‘ಪೆಪೆ’ ಸಿನಿಮಾ ಸೆನ್ಸಾರ್ ಪಾಸ್ ಆಗಿದ್ದು ಸಿನಿಮಾ ‘ಎ’ ರೇಟಿಂಗ್ ದೊರೆತಿದೆ. ಪಕ್ಕಾ ವೈಯಲೆಂಟ್ ಸಿನಿಮಾ ಇದಾಗಿದೆ.

Vinay Rajkumar: ವಿನಯ್ ರಾಜ್​ಕುಮಾರ್ ನಟನೆಯ ಪೆಪೆ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್

Updated on: Jul 28, 2024 | 9:23 AM

ವಿನಯ್ ರಾಜ್​ಕುಮಾರ್ ನಟನೆಯ ‘ಒಂದು ಸರಳ ಪ್ರೇಮ ಕತೆ’ ಸಿನಿಮಾ ಕೆಲವು ತಿಂಗಳ ಹಿಂದಷ್ಟೆ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿದೆ. ಸಿಂಪಲ್ ಸುನಿ ನಿರ್ದೇಶನ ಮಾಡಿದ್ದ ಈ ಸಿನಿಮಾಕ್ಕೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ದೊರಕಿತ್ತು. ಇದೇ ಖುಷಿಯಲ್ಲಿ ವಿನಯ್ ರಾಜ್​ಕುಮಾರ್ ನಟನೆಯ ಹೊಸ ಸಿನಿಮಾ ಒಂದು ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾದ ಸೆನ್ಸಾರ್ ಮುಗಿದಿದ್ದು, ಸಿನಿಮಾಕ್ಕೆ ‘ಎ’ ಸರ್ಟಿಫಿಕೇಶನ್ ದೊರೆತಿದೆ. ಇದಕ್ಕೆ ಕಾರಣ ಸಿನಿಮಾದಲ್ಲಿರುವ ಕಚ್ಚಾತನ ಎನ್ನಲಾಗುತ್ತಿದೆ.

ವಿನಯ್ ರಾಜ್​ಕುಮಾರ್ ನಟನೆಯ ‘ಪೆಪೆ’ ಸಿನಿಮಾಕ್ಕೆ ಇದೀಗ ಸೆನ್ಸಾರ್ ಮಂಡಳಿ ‘ಎ’ ಸರ್ಟಿಫಿಕೇಷನ್ ನೀಡಿದೆ. ಸಿನಿಮಾವನ್ನು ವಯಸ್ಕರು ಮಾತ್ರವೇ ನೋಡಬೇಕಿದೆ. ಸಿನಿಮಾದಲ್ಲಿರುವ ಕಚ್ಚಾತನ, ಹಿಂಸೆಯಿಂದ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಷನ್ ದೊರೆತಿದೆ. ತಮ್ಮ ಹಿಂದಿನ ಸಿನಿಮಾ ‘ಒಂದು ಸರಳ ಪ್ರೇಮಕಥೆ’ ಸಿನಿಮಾದಲ್ಲಿ ಲವರ್ ಬಾಯ್ ಆಗಿ, ಸರಳ ಯುವಕನಾಗಿ ಗಮನ ಸೆಳೆದಿದ್ದ ನಟ ವಿನಯ್ ರಾಜ್​ಕುಮಾರ್, ಈಗ ‘ಪೆಪೆ’ ಸಿನಿಮಾದಲ್ಲಿ ರಗಡ್ ಆಗಿ ಅಬ್ಬರಿಸಲಿದ್ದಾರೆ.

‘ಪೆಪೆ’ ಸಿನಿಮಾವು ಹಳ್ಳಿಗಾಡಿನ ಯುವಕನೊಬ್ಬನ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ವಿನಯ್ ರಾಜ್​ಕುಮಾರ್ ಸಖತ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವು ಕ್ರೈಂ ಥ್ರಿಲ್ಲರ್ ಆಗಿದ್ದು, ಸಿನಿಮಾದ ಮೇಕಿಂಗ್ ಭಿನ್ನವಾಗಿದೆ. ಸಿನಿಮಾದಲ್ಲಿ ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಮೇದಿನಿ ಕೆಳಮನೆ, ಮಯೂರ್ ಪಟೇಲ್, ಬಲ ರಾಜವಾಡಿ, ಅರುಣಾ ಬಾಲರಾಜ್, ನವೀನ್ ಡಿ ಪಡೀಲ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾವನ್ನು ಯುವ ನಿರ್ದೇಶಕ ಬಿಎಂ ಶ್ರೀರಾಮ್ ನಿರ್ದೇಶನ ಮಾಡಿದ್ದು, ನಿರ್ಮಾಣವನ್ನು ಉದಯ ಶಂಕರ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ:ಸೈಲೆಂಟ್ ಆಗಿ ಮದುವೆ ಆದ್ರಾ ವಿನಯ್ ರಾಜ್​ಕುಮಾರ್? ಅಸಲಿ ವಿಷಯ ಬೇರೆಯೇ ಇದೆ

ವಿನಯ್ ರಾಜ್​ಕುಮಾರ್ ನಟನೆಯ ‘ಗ್ರಾಮಾಯಣ’ ಸಿನಿಮಾ ಸಹ ಸಖತ್ ಕುತೂಹಲ ಮೂಡಿಸಿದೆ. ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಬಹಳ ಸಮಯವಾಗಿದೆ ಆದರೆ ಈ ವರೆಗೆ ಸಿನಿಮಾ ಬಿಡುಗಡೆ ಆಗಿಲ್ಲ. ‘ಗ್ರಾಮಾಯಣ’ ಸಿನಿಮಾ ಸಹ ‘ಪೆಪೆ’ ರೀತಿಯಲ್ಲಿಯೇ ತನ್ನ ಟಐಟಲ್ ಹಾಗೂ ಟೀಸರ್​ನಿಂದ ಬಹಳ ಗಮನ ಸೆಳೆಯುತ್ತಿದೆ. ಈ ಸಿನಿಮಾ ತಮ್ಮ ಪೋಸ್ಟ್ ಪ್ರೊಡಕ್ಷನ್ ಮತ್ತೆ ಪ್ರಾರಂಭಿಸಿದ್ದು, ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ನಟಿ ಅಪರ್ಣಾ ನಟನೆಯ ಕೊನೆಯ ಸಿನಿಮಾ ‘ಗ್ರಾಮಾಯಣ’.

ವಿನಯ್ ರಾಜ್​ಕುಮಾರ್ ತಮ್ಮ ಕತೆ ಪ್ರಧಾನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸಮಕಾಲೀನ ಇತರೆ ಯುವ ನಟರಂತೆ ಮಾಸ್, ಕಮರ್ಶಿಯಲ್ ಸಿನಿಮಾಗಳ ಕಡೆಗೆ ವಾಲದೆ ತಮ್ಮದೇ ಹಾದಿಯಲ್ಲಿ ನಡೆಯುತ್ತಾ ಭರವಸೆ ಮೂಡಿಸುತ್ತಿದ್ದಾರೆ. ಕತಾ ಪ್ರಧಾನ ಸಿನಿಮಾಗಳನ್ನಷ್ಟೆ ಆಯ್ಕೆ ಮಾಡಿಕೊಳ್ಳುವ ಮೂಲಕ ಒಳ್ಳೆಯ ಸಿನಿಮಾಗಳನ್ನು ಪ್ರೇಕ್ಷಕರಿಗೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ