‘ಮಾದೇವ’ ಸಿನಿಮಾದ ಹೊಸ ಹಾಡಿನಲ್ಲಿ ವಿನೋದ್​ ಪ್ರಭಾಕರ್​, ಸೋನಲ್​ ಕೆಮಿಸ್ಟ್ರಿ

|

Updated on: Jun 04, 2024 | 8:20 PM

‘ನೈಜ ಘಟನೆಗಳಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ ಇದು. ಇದರ ಕಥೆ 1965, 1980 ಹಾಗೂ 1999ರ ಕಾಲಘಟ್ಟದಲ್ಲಿ ಸಾಗುತ್ತದೆ. ಈ ಮೊದಲು ಕಂಡಿರದಂತಹ ರಿಫರೆಂಟ್​ ಲುಕ್‌ನಲ್ಲಿ ವಿನೋದ್ ಪ್ರಭಾಕರ್ ಕಾಣಿಸಿಕೊಳ್ಳಲಿದ್ದಾರೆ’ ಎಂದು ‘ಮಾದೇವ’ ಚಿತ್ರತಂಡದವರು ಹೇಳಿದ್ದಾರೆ. ಶ್ರೀನಗರ ಕಿಟ್ಟಿ ಅವರು ಈ ಸಿನಿಮಾದಲ್ಲಿ ವಿಲನ್​ ಆಗಿರುವುದು ವಿಶೇಷ. ಶ್ರುತಿ, ಕಾಕ್ರೋಚ್ ಸುಧಿ, ಅಚ್ಯುತ್ ಕುಮಾರ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

‘ಮಾದೇವ’ ಸಿನಿಮಾದ ಹೊಸ ಹಾಡಿನಲ್ಲಿ ವಿನೋದ್​ ಪ್ರಭಾಕರ್​, ಸೋನಲ್​ ಕೆಮಿಸ್ಟ್ರಿ
ವಿನೋದ್​ ಪ್ರಭಾಕರ್​, ಸೋನಲ್​ ಮಾಂಥೆರೋ
Follow us on

ಕನ್ನಡ ಚಿತ್ರರಂಗದಲ್ಲಿ ‘ಮರಿ ಟೈಗರ್’ ಎಂದು ಖ್ಯಾತಿ ಪಡೆದ ನಟ ವಿನೋದ್ ಪ್ರಭಾಕರ್ (Vinod Prabhakar) ಅಭಿನಯದ ಹೊಸ ಸಿನಿಮಾ ‘ಮಾದೇವ’ (Maadeva) ಬಗ್ಗೆ ಹೊಸದೊಂದು ಅಪ್‌ಡೇಟ್‌ ಹೊರಬಂದಿದೆ. ಈಗಾಗಲೇ ಮಾಸ್ ಟೀಸರ್ ಮೂಲಕ ಜನರಲ್ಲಿ ನಿರೀಕ್ಷೆ ಹೆಚ್ಚಿಸಿದ ಈ ಸಿನಿಮಾದಿಂದ ಮೊದಲ ಹಾಡು ಬಿಡುಗಡೆ ಆಗಿದೆ. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸಾಂಗ್​ ರಿಲೀಸ್​ ಕಾರ್ಯಕ್ರಮ ನಡೆಯಿತು. ಅದರಲ್ಲಿ ವಿನೋದ್ ಪ್ರಭಾಕರ್, ಸೋನಲ್ ಮೊಂಥೆರೋ (Sonal Monteiro), ನಿರ್ದೇಶಕ ನವೀನ್ ರೆಡ್ಡಿ ಮುಂತಾದವರು ಭಾಗಿ ಆಗಿದ್ದರು. ಆ ಕುರಿತು ಇಲ್ಲಿದೆ ಮಾಹಿತಿ..

‘ಇದು ನನ್ನ ವೃತ್ತಿಜೀವನದ ಅತ್ಯುತ್ತಮ ಸಿನಿಮಾ’ ಎಂದಿದ್ದಾರೆ ವಿನೋದ್ ಪ್ರಭಾಕರ್. ‘ಚಿತ್ರದಲ್ಲಿ ಒಬ್ಬ ನಟನಾಗಿ ಗುರುತಿಸಿಕೊಳ್ಳಲು ಸಾಕಷ್ಟಿದೆ. ಈ ಸಿನಿಮಾ ಖಂಡಿತಾ ಹಿಟ್ ಆಗುತ್ತದೆ ಎಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ಕೊನೇ 40 ನಿಮಿಷ ಪ್ರತಿಯೊಬ್ಬರೂ ಮಾದೇವನಾಗಿ ಸಿನಿಮಾ ನೋಡ್ತಾರೆ. ನಾನೇ ಇಂಥ ಸಿನಿಮಾವನ್ನು ಮತ್ತೆ ಮಾಡಲು ಆಗಲ್ಲ. ಈ ಕಥೆ ಸಾಕಷ್ಟು ಜನರನ್ನು ಒಳಗೆ ಕರೆದುಕೊಂಡು ಬಂದಿದೆ. ಈ ಸಿನಿಮಾ ಸಲುವಾಗಿ ಬಹಳ ತಯಾರಿ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

‘ಮಾದೇವ’ ಸಿನಿಮಾದಲ್ಲಿ ನಟಿ ಸೋನಲ್ ಮೊಂಥೆರೋ ಅವರು ವಿನೋದ್​ ಪ್ರಭಾಕರ್​ಗೆ ಜೋಡಿ ಆಗಿದ್ದಾರೆ. ‘ನಾನು ಕಲಾವಿದೆಯಾಗಿ ಮಾತ್ರವಲ್ಲ, ಪ್ರೇಕ್ಷಕಿಯಾಗಿ ಈ ಸಿನಿಮಾ ನೋಡಲು ಕಾದಿದ್ದೇನೆ. ನಾನು ಮಾಡಿದ ಸಿನಿಮಾಗಳ ಪೈಕಿ ಇದು ನನ್ನ ಮನಸ್ಸಿಗೆ ಹೆಚ್ಚು ಹತ್ತಿರವಾಗಿದೆ. ನಾನು ಈ ರೀತಿ ಪಾತ್ರದಲ್ಲಿ ಹಿಂದೆಂದೂ ನಟಿಸಿಲ್ಲ. ಇದೇ ಮೊದಲ ಬಾರಿಗೆ ಹಳ್ಳಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ನನ್ನ ಮತ್ತು ವಿನೋದ್ ಪ್ರಭಾಕರ್​ ಅವರ ಕೆಮಿಸ್ಟ್ರಿ ಬಹಳ ಚೆನ್ನಾಗಿದೆ. ಪ್ರತಿಯೊಬ್ಬ ಪ್ರೇಕ್ಷಕರೂ ಈ ಸಿನಿಮಾ ನೋಡಿ ಎಂಜಾಯ್ ಮಾಡ್ತಾರೆ’ ಎಂದು ಸೋನ್​ ಹೇಳಿದ್ದಾರೆ.

‘ಆರ್‌ಆರ್‌ಆರ್’, ‘ಬಾಹುಬಲಿ’ ಸಿನಿಮಾಗಳ ಛಾಯಾಗ್ರಾಹಕ ಸೆಂಥಿಲ್‌ ಕುಮಾರ್ ಬಳಿ ಸಹಾಯಕರಾಗಿ ಕೆಲಸ ಮಾಡಿದ ಬಾಲಕೃಷ್ಣ ತೋಟ ಅವರು ‘ಮಾದೇವ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿಜಯ್ ಎಂ. ಕುಮಾರ್ ಅವರು ಸಂಕಲನ ಮಾಡಿದ್ದಾರೆ. ಪ್ರದ್ಯೋತ್ತನ್ ಅವರು ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಧಾಕೃಷ್ಣ ಬ್ಯಾನರ್ ಮೂಲಕ ಆರ್.ಆರ್. ಕೇಶವ ದೇವಸಂದ್ರ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಕಡಲ ತೀರದಲ್ಲಿ ಖುಷಿ ಖುಷಿಯಾಗಿ ಕಾಲ ಕಳೆದ ಸೋನಲ್​ ಮಂಥೆರೋ

ಬಿಡುಗಡೆ ಆಗಿರುವ ‘ಎದೆಯಲ್ಲಿ ತಂಗಾಳಿ..’ ಎಂಬ ಡ್ಯುಯೆಟ್​ ಸಾಂಗ್​ಗೆ ಪ್ರಸನ್ನ ಕುಮಾರ್ ಎಂ. ಅವರು ಸಾಹಿತ್ಯ ಬರೆದಿದ್ದಾರೆ. ಅನನ್ಯಾ ಭಟ್ ಕಂಠಯಲ್ಲಿ ಹಾಡು ಮೂಡಿಬಂದಿದೆ. ಈ ಸಾಂಗ್​ನಲ್ಲಿ ಸೋನಲ್ ಮತ್ತು ವಿನೋದ್ ಪ್ರಭಾಕರ್ ಜೋಡಿಯಾಗಿದ್ದಾರೆ. ‘ಖಾಕಿ’ ಸಿನಿಮಾಗೆ ನಿರ್ದೇಶನ ಮಾಡಿದ್ದ ನವೀನ್ ರೆಡ್ಡಿ ಅವರು ಈಗ ‘ಮಾದೇವ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.