ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ

| Updated By: ರಾಜೇಶ್ ದುಗ್ಗುಮನೆ

Updated on: Aug 23, 2024 | 9:54 AM

ನಿರ್ದೇಶಕ ಎಚ್​ ಆರ್​ ಭಾರ್ಗವ್ ಹಾಗೂ ವಿಷ್ಣುವರ್ಧನ್ ಅವರು 23 ಸಿನಿಮಾಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಕಾರಣಕ್ಕೆ ವಿಷ್ಣು ಅವರನ್ನು ಭಾರ್ಗವ್ ಹತ್ತಿರದಿಂದ ಕಂಡಿದ್ದರು. ಅವರ ಆಹಾರದ ಕ್ರಮದ ಬಗ್ಗೆ ಭಾರ್ಗವ್ ಅವರು ಮಾತನಾಡಿದ್ದಾರೆ.

ವಿಷ್ಣುವರ್ಧನ್ ಸಸ್ಯಹಾರಿಯೋ, ಮಾಂಸಾಹಾರಿಯೋ? ಅಚ್ಚರಿಯ ವಿಚಾರ ತಿಳಿಸಿದ ಹಿರಿಯ ನಿರ್ದೇಶಕ
ವಿಷ್ಣುವರ್ಧನ್
Follow us on

ಎಚ್​.ಆರ್​ ಭಾರ್ಗವ್ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕರಲ್ಲಿ ಒಬ್ಬರು. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಕನ್ನಡದ ಖ್ಯಾತ ನಾಮರ ಜೊತೆ ಅವರು ಸಿನಿಮಾ ಮಾಡಿದ್ದಾರೆ. ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ‘ಭಾಗ್ಯವಂತರು’. ಮೊದಲ ಚಿತ್ರದಲ್ಲಿ ರಾಜ್​ಕುಮಾರ್ ಅವರಿಗೆ ನಿರ್ದೇಶನ ಮಾಡುವ ಅವಕಾಶ ಭಾರ್ಗವ್ ಅವರಿ​ಗೆ ಸಿಕ್ಕಿತ್ತು. ಮೊದಲ ಸಿನಿಮಾದಲ್ಲೇ ಗೆದ್ದು ಬೀಗಿದರು. ಅವರು ವಿಷ್ಣುವರ್ಧನ್ ಜೊತೆ ಒಳ್ಳೆಯ ಒಡನಾಟ ಹೊಂದಿದ್ದರು. ಭಾರ್ಗವ್​ ಅವರು ವಿಷ್ಣುವರ್ಧನ್ ಬಗ್ಗೆ ‘ಕಲಾ ಮಾಧ್ಯಮ’ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.

‘ಭಾಗ್ಯವಂತರು’, ‘ಗುರು ಶಿಷ್ಯರು’ ರೀತಿಯ ಹಿಟ್ ಚಿತ್ರಗಳನ್ನು ಭಾರ್ಗವ್ ಅವರು ನೀಡಿದ್ದಾರೆ. ‘ಜೀವನ ಚಕ್ರ’, ‘ಕರ್ಣ’, ‘ಕೃಷ್ಣ ನೀ ಬೇಗನೆ ಬಾರೋ’, ‘ಕರುಣಾಮಯಿ’, ‘ಸೌಭಾಗ್ಯ ಲಕ್ಷ್ಮಿ’, ‘ಗುರು ಶಿಷ್ಯರು’ ‘ಶುಭ ಮಿಲನ’, ‘ಕೃಷ್ಣ ರುಕ್ಮಿಣಿ, ‘ಜನ ನಾಯಕ’, ‘ನಮ್ಮೂರ ರಾಜ’, ‘ಹೃದಯ ಗೀತೆ’, ‘ಶಿವಶಂಕರ್’, ‘ಮತ್ತೆ ಹಾಡಿತು ಕೋಗಿಲೆ’, ‘ಜಗದೇಕ ವೀರ’, ‘ರಾಜಾಧಿ ರಾಜ’ ಸೇರಿ ವಿಷ್ಣುವರ್ಧನ್ ನಟನೆಯ 23 ಸಿನಿಮಾಗಳನ್ನು ಭಾರ್ಗವ್​ ನಿರ್ದೇಶನ ಮಾಡಿದ್ದರು ಅನ್ನೋದು ವಿಶೇಷ. ಈ ಕಾರಣಕ್ಕೆ ಇಬ್ಬರ ಮಧ್ಯೆ ಒಳ್ಳೆಯ ಒಡನಾಟ ಇತ್ತು. ಅವರು ವಿಷ್ಣುವರ್ಧನ್ ಬಗ್ಗೆ ಮಾತನಾಡಿದ್ದಾರೆ.

‘ನಾನು ನನ್ನ ನಿರ್ಮಾಣ ಸಂಸ್ಥೆಗೆ ಕಲಾಕೃತಿ ಎಂದು ಹೆಸರು ಇಟ್ಟಿದ್ದೆ. ಕಲಾವಿದರಿಗೆ, ತಂತ್ರಜ್ಞರಿಗೆ ಬುಧವಾರ ಹಾಗೂ ಭಾನುವಾರ ನಾನ್​ವೆಜ್ ಮಾಡಿಸುತ್ತಿದ್ದೆ. ಸಸ್ಯಾಹಾರಿಗಳಿಗೆ ಕೇಸರಿಬಾತ್ ಮಾಡಿಸುತ್ತಿದ್ದೆ. ಮೊಸರನ್ನ ರಿಚ್ ಆಗಿ ಮಾಡಿಸುತ್ತಿದ್ದೆ. ಇದು ನನ್ನ ಪಾಲಿಸಿ ಆಗಿತ್ತು’ ಎಂದಿದ್ದರು ಅವರು.

‘ವಿಷ್ಣುವರ್ಧನ್ ಮೂಡಿ ಆಗಿದ್ದ. ಆರು ತಿಂಗಳು ನಾನ್​ ವೆಜ್​ ಬಿಡ್ತಿದ್ದ, ಸಿಗರೇಟ್ ಬಿಡ್ತಿದ್ದ. ಯಾವಾಗಲೋ ಸಿಗರೇಟ್ ಸೆದುತ್ತಿದ್ದ, ಇನ್ಯಾವಗೋ ಬಿಟ್ಟಿರುತ್ತಿದ್ದ. ಕಾಫಿ ಬಗ್ಗೆ ಅತಿಯಾದ ಪ್ರೇಮ ಇತ್ತು. ವಿಷ್ಣು ಬೇಗ ಬೇಗ ಊಟ ಮಾಡುತ್ತಿದ್ದ. ಊಟದ ಬಳಿಕ ಐದು ನಿಮಿಷ ಕಣ್ಣು ಮುಚ್ಚುತ್ತಿದ್ದ. ಆ ಬಳಿಕ ಟೀ ಕುಡಿಯುತ್ತಿದ್ದ. ಅವನ ಜೊತೆ ಸೇರಿ ನಮಗೂ ಊಟದ ಬಳಿಕ ಟೀ ಕುಡಿಯೋ ಅಭ್ಯಾಸ ಆಯಿತು’ ಎಂದಿದ್ದಾರೆ ಭಾರ್ಗವ್.

ಇದನ್ನೂ ಓದಿ: ವದಂತಿ ನಂಬಿ ವಿಷ್ಣುವರ್ಧನ್ ಜೊತೆಗಿನ ಗೆಳೆತನ ಹಾಳು ಮಾಡಿಕೊಂಡಿದ್ದ ದ್ವಾರಕೀಶ್

‘ಅವನು ಹುಟ್ಟಾ ಸಸ್ಯಾಹಾರಿ. ಕೇಳಿದ್ರೆ ನಮ್ಮ ತಾತನ ಮನೆಯಲ್ಲಿ ಮುಸ್ಲಿಂ ಅಡಿಗೆಯವನು ಇದ್ದ ಅನ್ನುತ್ತಿದ್ದ. ನೀನು ಬ್ರಾಹ್ಮಣ ಕಣೋ ಎಂದರೆ ಅದನ್ನೆಲ್ಲ ನೆನಪು ಮಾಡಬೇಡ ಎನ್ನುತ್ತಿದ್ದ. ಕ್ರಿಕೆಟ್​ ಮ್ಯಾಚ್ ನಡೆವಾಗ ನಾವೆಲ್ಲ ಭಾರತದ ಪರ ಇದ್ರೆ ಆತ ಪಾಕಿಸ್ತಾನದ ಪರ ಇರುತ್ತಿದ್ದ. ಈ ವಿಚಾರಕ್ಕೆ ಜಗಳ ಆಗುತ್ತಿತ್ತು. ಸಖತ್ ಫನ್ ಆಗಿ ಇರುತ್ತಿತ್ತು’ ಎಂದಿದ್ದಾರೆ ಭಾರ್ಗವ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.