ಶಿವಣ್ಣಂಗೆ ಕುಂದಾಪುರ ಭಾಷೆ ಮೇಲೆ ಬಂತು ಪ್ರೀತಿ; ಹೇಗಿದೆ ನೋಡಿ ಅವರು ಹಾಡಿದ ಸಾಂಗ್

ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿ ಮೂಡಿ ಬಂದಿದ್ದ ‘ಕರಟಕ ಧಮನಕ’ ಸಿನಿಮಾದಲ್ಲಿ ನಟಿಸಿ ಶಿವಣ್ಣ ಗಮನ ಸೆಳೆದಿದ್ದರು. ಈಗ ಕುಂದಾಪುರ ಭಾಷೆಯಲ್ಲಿ ಹಾಡೊಂದು ಮೂಡಿ ಬಂದಿದೆ. ‘ಸಿಂಗಾರ್ ಹೂ’ ಅನ್ನೋದು ಹಾಡಿನ ಹೆಸರು. ಈ ಹಾಡಿಗೆ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸಾಹಿತ್ಯ ಕೂಡ ಅವರದ್ದೇ.

ಶಿವಣ್ಣಂಗೆ ಕುಂದಾಪುರ ಭಾಷೆ ಮೇಲೆ ಬಂತು ಪ್ರೀತಿ; ಹೇಗಿದೆ ನೋಡಿ ಅವರು ಹಾಡಿದ ಸಾಂಗ್
ಶಿವಣ್ಣ
Follow us
ರಾಜೇಶ್ ದುಗ್ಗುಮನೆ
|

Updated on:Aug 23, 2024 | 12:54 PM

ಶಿವರಾಜ್​ಕುಮಾರ್ ಅವರು ಟ್ಯಾಲೆಂಟೆಡ್ ಹೀರೋ. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರು ಕೇವಲ ನಟ ಮಾತ್ರ ಅಲ್ಲ, ಗಾಯಕ ಕೂಡ ಹೌದು. ಅವರ ಧ್ವನಿಯಲ್ಲಿ ಅನೇಕ ಹಾಡುಗಳು ಮೂಡಿ ಬಂದಿವೆ. ಅವರ ಧ್ವನಿಯಲ್ಲಿ ಕುಂದಾಪುರ ಭಾಷೆಯ ಹಾಡು ಮೂಡಿ ಬಂದರೆ? ಹೀಗೊಂದು ಪ್ರಯತ್ನವನ್ನು ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಮಾಡಿದ್ದಾರೆ. ಈ ಹಾಡು ವೈರಲ್ ಆಗುತ್ತಿದೆ.

ಶಿವರಾಜ್​ಕುಮಾರ್ ಅವರಿಗೆ ಕರ್ನಾಟಕದಲ್ಲಿ ಆಡುವ ಪ್ರತಿ ಭಾಷೆಯ ಮೇಲೂ ಗೌರವ ಇದೆ. ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿ ಮೂಡಿ ಬಂದಿದ್ದ ‘ಕರಟಕ ಧಮನಕ’ ಸಿನಿಮಾದಲ್ಲಿ ನಟಿಸಿ ಶಿವಣ್ಣ ಗಮನ ಸೆಳೆದಿದ್ದರು. ಈಗ ಅವರು ಕುಂದಾಪುರ ಭಾಷೆಯಲ್ಲಿ ಮೂಡಿ ಬಂದ ಹಾಡನ್ನು ಹಾಡಿದ್ದಾರೆ. ಈ ಹಾಡು ಗಮನ ಸೆಳೆಯುತ್ತಿದೆ.

‘ಸಿಂಗಾರ್ ಹೂ’ ಅನ್ನೋದು  ಹಾಡಿನ ಹೆಸರು. ಈ ಹಾಡಿಗೆ ರವಿ ಬಸ್ರೂರು ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದು, ಸಾಹಿತ್ಯ ಕೂಡ ಅವರದ್ದೇ. ಈ ಹಾಡನ್ನು ಶಿವರಾಜ್​ಕುಮಾರ್ ಹಾಗೂ ಸಂಗೀತಾ ರವೀಂದ್ರನಾಥ್ ಅವರು ಹಾಡಿದ್ದಾರೆ. ಈ ಹಾಡು ಗಮನ ಸೆಳೆಯುತ್ತಿದೆ. ಸಂಪೂರ್ಣ ಸಾಹಿತ್ಯ ಕುಂದಾಪುರ ಕನ್ನಡದಲ್ಲೇ ಇದೆ. ‘ಸುಬ್ಬಿ ನಿನ್ನ ಅಬ್ಬಿ ನನ್ನ, ಮಾಯಿಯಾದಂಗೆ. ಕನ್ಸ್ ಬಿತ್ತ್ ನಿಂಗೆ ನಾನ್, ತಾಳಿ ಕಟ್ದಂಗೆ’ ಎಂಬ ಸಾಹಿತ್ಯದೊಂದಿಗೆ ಈ ಹಾಡು ಆರಂಭ ಆಗುತ್ತದೆ. ಈ ಹಾಡು ಕೇಳೋಕೆ ಸುಮಧರುವಾಗಿದೆ. ಅದರಲ್ಲೂ ಶಿವರಾಜ್​ಕುಮಾರ್ ಅವರು ಈ ಸಾಹಿತ್ಯವನ್ನು ಇಷ್ಟಪಟ್ಟು ಕಲಿತು ಹಾಡಿದ್ದಾರೆ. ಈ ಕಾರಣಕ್ಕೆ ಹಾಡು ಮತ್ತಷ್ಟು ಗಮನ ಸೆಳೆದಿದೆ.

ಇದನ್ನೂ ಓದಿ: ‘ನಾನು ತಾಳ್ಮೆ ಕಳೆದುಕೊಂಡಾಗಲೆಲ್ಲ, ತುಂಬಾ ಜನ ತಲೆ ಕಳೆದುಕೊಂಡಿದ್ದಾರೆ’; ಮತ್ತೆ ಲಾಂಗ್ ಹಿಡಿದ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರು ಕನ್ನಡ ಚಿತ್ರರಂಗದ ಶ್ರೇಷ್ಠ ಹಾಗೂ ಬ್ಯುಸಿ ಹೀರೋಗಳಲ್ಲಿ ಒಬ್ಬರು. ಇವುಗಳ ಮಧ್ಯೆ ಅವರು ಹಾಡೋಕೆ ಬಿಡುವು ಮಾಡಿಕೊಂಡಿದ್ದಾರೆ ಅನ್ನೋದು ವಿಶೇಷ. ಇನ್ನು, ರವಿ ಬಸ್ರೂರು ಕೂಡ ಹಲವು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಇವುಗಳ ಮಧ್ಯೆ ಬಿಡುವು ಸಿಕ್ಕಾಗ ಅವರು ಕುಂದಾಪುರ ಕನ್ನಡ ಭಾಷೆಯ ಕಡೆ ಒಲವು ತೋರಿಸುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:53 pm, Fri, 23 August 24