ವಿಷ್ಣುವರ್ಧನ್ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ; ಹೀಗಿದೆ ಕಾರ್ಯಕ್ರಮದ ರೂಪುರೇಷೆ

ವಿಷ್ಣುವರ್ಧನ್ ಅವರ 75ನೇ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ ಆಗಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಮೂರು ದಿನಗಳ ಕಾರ್ಯಕ್ರಮವನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ. ಕನ್ನಡ ಮತ್ತು ಪರಭಾಷಾ ಕಲಾವಿದರು, ಅಭಿಮಾನಿಗಳು ಭಾಗವಹಿಸಲಿದ್ದಾರೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಮತ್ತು ಪದ್ಮಭೂಷಣ ಪ್ರಶಸ್ತಿ ನೀಡುವಂತೆ ಒತ್ತಾಯಿಸಲು ನಿರ್ಧರಿಸಲಾಗಿದೆ.

ವಿಷ್ಣುವರ್ಧನ್ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಣೆ; ಹೀಗಿದೆ ಕಾರ್ಯಕ್ರಮದ ರೂಪುರೇಷೆ
ವಿಷ್ಣು

Updated on: Jun 24, 2025 | 7:01 AM

ವಿಷ್ಣುವರ್ಧನ್ (Vishnuvardhan) ಅವರ ಜನ್ಮದಿನಕ್ಕೆ ಇನ್ನೂ ಮೂರು ತಿಂಗಳು ಬಾಕಿ ಇದೆ. ಸೆಪ್ಟೆಂಬರ್ 18 ಅವರ ಜನ್ಮದಿನ. ಅವರು ನಮ್ಮನ್ನು ಅಗಲಿ ಹೋದರೂ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಈಗಲೂ ಆಗುತ್ತಿದೆ. ಜನಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಅವರು ಸ್ಫೂರ್ತಿದಾಯಕ ವ್ಯಕ್ತಿ. ಈಗ ವಿಷ್ಣುವರ್ಧನ್ ಅವರ ಈ ವರ್ಷ ಜನ್ಮದಿನವನ್ನು ‘ಯಜಮಾನರ ಅಮೃತ ಮಹೋತ್ಸವ’ ಆಗಿ ಆಚರಿಸಲು ನಿರ್ಧರಿಸಲಾಗಿದೆ. ಅವರು ಬದುಕಿದ್ದರೆ ಇಂದಿಗೆ ಅವರಿಗೆ 75 ವರ್ಷ ತುಂಬುತ್ತಿತ್ತು. ಹೀಗಾಗಿ, ಈ ನಿರ್ಧಾರ ಮಾಡಲಾಗಿದೆ.

ಇತ್ತೀಚೆಗೆ ಈ ಮಹೋತ್ಸವ ಆಚರಣೆಗೆ ಸಂಬಂಧಿಸಿದಂತೆ ಸಭೆ ಕರೆಯಲಾಗಿತ್ತು. ವಿಷ್ಣುವರ್ಧನ್ ಅಭಿಮಾನಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಡಾ. ವಿಷ್ಣುವರ್ಧನ್ ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ಕೂಡ ಸಭೆಯಲ್ಲಿ ಇದ್ದರು. ಅವರು ವಿಷ್ಣು ಜನ್ಮದಿನಕ್ಕೆ ಸಂಬಂಧಿಸಿದಂತೆ ಒಂದಷ್ಟು ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.

ವಿಷ್ಣು ಜನ್ಮದಿನದ ಸಂದರ್ಭದಲ್ಲಿ 3 ದಿನಗಳ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ ಸೇರಿದಂತೆ ಚಿತ್ರರಂಗದ ಎಲ್ಲ ಅಂಗ ಸಂಸ್ಥೆಗಳು, ವಿಷ್ಣುವರ್ಧನ್ ಕುಟುಂಬ, ಅಭಿಮಾನಿಗಳು ಹೀಗೆ ಎಲ್ಲರೂ ಸೇರಿ ಜನ್ಮದಿನವನ್ನು ಸಂಭ್ರಮಿಸಲಿದ್ದಾರೆ.

ಇದನ್ನೂ ಓದಿ
ಸಲ್ಮಾನ್ ಖಾನ್​ಗೆ ನಿಜಕ್ಕೂ ಇದ್ದ ಗೆಳತಿಯರೆಷ್ಟು? ಲೆಕ್ಕ ಕೊಟ್ಟ ಸಲ್ಲು
ಬಾಕ್ಸ್ ಆಫೀಸ್​ನಲ್ಲಿ ಜಾಕ್​ಪಾಟ್ ಹೊಡೆದ ‘ಕುಬೇರ’ ಹಾಗೂ ‘ಸಿತಾರೆ ಜಮೀನ್ ಪರ್
ಸಲ್ಮಾನ್ ಖಾನ್​ಗೆ ಮೆದುಳು ಸಂಬಂಧಿ ರೋಗ; ಕಾಡುತ್ತಿದೆ ಸ್ಟ್ರೋಕ್ ಆಗೋ ಭಯ
ನಿಜವಾದ ವಿಷಕಾರಿ ಜಂತುಗಳ ಜೊತೆ ರಾಜ್​ಕುಮಾರ್ ಶೂಟ್; ಇದಕ್ಕೆ ಗುಂಡಿಗೆ ಬೇಕು

ವಿಷ್ಣುವರ್ಧನ್ ಜೊತೆ ನಟಿಸಿದ ಪರಭಾಷಾ ಕಲಾವಿದರೂ ಇದ್ದಾರೆ. ಅವರನ್ನು ವೇದಿಕೆ ಮೇಲೆ ಕರೆಯುವ ಕೆಲಸ ಆಗಲಿದೆ. ಈ ರೀತಿಯಲ್ಲಿ ವಿಷ್ಣುವರ್ಧನ್ ಅವರ ಜನ್ಮದಿನ ಆಚರಣೆ ಆಗಲಿದೆ. ಕನ್ನಡದ ಅನೇಕ ಸೆಲೆಬ್ರಿಟಿಗಳು ಕೂಡ ಇದರಲ್ಲಿ ಭಾಗಿ ಆಗಲಿದ್ದಾರೆ. ವಿಷ್ಣುವರ್ಧನ್ ಅವರಿಗೆ, ಕರ್ನಾಟಕ ರತ್ನ ಹಾಗೂ ಪದ್ಮಭೂಷಣ ಕೊಡಿಸಬೇಕು ಎನ್ನುವ ಒತ್ತಾಯವನ್ನು ಮಾಡಲು ಈ ಸಮಿತಿ ನಿರ್ಧರಿಸಿದೆ.

ಇದನ್ನೂ ಓದಿ: ಸುದೀಪ್ ವಿರುದ್ಧ ಏಕವಚನ ಬಳಸಿದರೇ ಡಿಸಿಎಂ ಡಿಕೆಶಿ: ವಿಡಿಯೋ ನೋಡಿ

‘ಕಿಚ್ಚ ಸುದೀಪ್ ಬಳಿ ಮಾತನಾಡಿದ್ದೇವೆ. ಮುಂದಿನ ಮೂರು ತಿಂಗಳಲ್ಲಿ ಯಜಮಾನರ ಪುಣ್ಯಭೂಮಿಗೆ ತಾರ್ಕಿಕ ಅಂತ್ಯ ಕಾಣಿಸಬೇಕು ಎಂದು ನಿರ್ಧರಿಸಿದ್ದೇವೆ. 18ರಂದು ನಾವು ಎಂದಿನಂತೆ ಆಚರಿಸುತ್ತೇವೆ. ಒಟ್ಟೂ ಮೂರು ದಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ನಡೆಯಲಿದೆ. ಭಾರತೀಯ ಚಲನಚಿತ್ರರಂಗದ ಅನೇಕರು ಇದರಲ್ಲಿ ಭಾಗಿ ಆಗಲಿದ್ದಾರೆ. ಎಸ್ ನಾರಾಯಣ್ ಅವರು ಇಡೀ ಕಾರ್ಯಕ್ರಮದ ನೇತೃತ್ವ ಪಡೆದುಕೊಂಡಿದ್ದಾರೆ. ಮೂರು ತಿಂಗಳು ಮೊದಲೇ ಕಾರ್ಯಕ್ರಮ ಆಯೋಜನೆ ಮಾಡುತ್ತಿದ್ದೇವೆ. ಇದಕ್ಕೆ ಒಪ್ಪಿಗೆ ತೆಗೆದುಕೊಳ್ಳಬೇಕು. ನಾವು ಸೂಕ್ತ ಒಪ್ಪಿಗೆ ತೆಗೆದುಕೊಂಡು ಮುಂದುವರಿಯುತ್ತೇವೆ’ ಎಂದಿದ್ದಾರೆ ಶ್ರೀನಿವಾಸ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.