Kantara: ‘ಕಾಂತಾರ’ ವೇಷ ಹಾಕಿಕೊಂಡು ಬಂದ ತಹಶೀಲ್ದಾರ್​; ಜಿಲ್ಲಾಧಿಕಾರಿ ಅಚ್ಚರಿಯ ರಿಯಾಕ್ಷನ್​

| Updated By: ಮದನ್​ ಕುಮಾರ್​

Updated on: Nov 15, 2022 | 12:48 PM

ತಹಶೀಲ್ದಾರ್​ ಅವರು ‘ಕಾಂತಾರ’ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ, ಚಿತ್ರದ ಡೈಲಾಗ್ ಕೂಡ ಹೇಳಿದ್ದಾರೆ ಎಂದು ವರದಿ ಆಗಿದೆ.

Kantara: ‘ಕಾಂತಾರ’ ವೇಷ ಹಾಕಿಕೊಂಡು ಬಂದ ತಹಶೀಲ್ದಾರ್​; ಜಿಲ್ಲಾಧಿಕಾರಿ ಅಚ್ಚರಿಯ ರಿಯಾಕ್ಷನ್​
‘ಕಾಂತಾರ’ ಪೋಸ್ಟರ್​ - ವೇಷ ಹಾಕಿಕೊಂಡು ಬಂದ ತಹಶೀಲ್ದಾರ್
Follow us on

ಕನ್ನಡದ ‘ಕಾಂತಾರ’ (Kantara Movie) ಸಿನಿಮಾ ಯಾವ ಪರಿ ಮೋಡಿ ಮಾಡಿದೆ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಕರ್ನಾಟಕದಲ್ಲಿ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲೂ ಈ ಸಿನಿಮಾ ಸೂಪರ್​ ಹಿಟ್​ ಆಗಿದೆ. ತುಳುನಾಡಿನ ಪರಂಪರೆಯನ್ನು ಬಿಂಬಿಸುವ ಈ ಚಿತ್ರಕ್ಕೆ ರಿಷಬ್​ ಶೆಟ್ಟಿ (Rishab Shetty) ನಿರ್ದೇಶನ ಮಾಡಿದ್ದಾರೆ. ಹೀರೋ ಆಗಿಯೂ ಅವರು ನಟಿಸಿದ್ದಾರೆ. ತೆಲುಗಿಗೆ ಡಬ್​ ಆಗಿ ತೆರೆಕಂಡ ‘ಕಾಂತಾರ’ ಅಲ್ಲಿಯೂ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಷ್ಟೇ ಅಲ್ಲದೇ, ರಿಷಬ್​ ಶೆಟ್ಟಿ ಮಾಡಿರುವ ಈ ಪಾತ್ರ ತೆಲುಗು ರಾಜ್ಯದಲ್ಲಿ ಮನೆಮಾತಾಗಿದೆ. ಅದಕ್ಕೆ ಲೇಟೆಸ್ಟ್​ ಉದಾಹರಣೆ ಇಲ್ಲಿದೆ. ಅಲ್ಲಿನ ತಹಶೀಲ್ದಾರರೊಬ್ಬರು (Tahsildar) ‘ಕಾಂತಾರ’ ರೀತಿ ವೇಷ ಹಾಕಿಕೊಂಡು ಬಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಗುಂಟೂರಿನ ನಾಗಾರ್ಜುನ ಯೂನಿವರ್ಸಿಟಿಯಲ್ಲಿ ಆಂಧ್ರ ಪ್ರದೇಶ ತೆರಿಗೆ ಇಲಾಖೆಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದೆ. ಇದರಲ್ಲಿ ಹಲವು ಅಧಿಕಾರಿಗಳು ಭಾಗಿ ಆಗಿದ್ದಾರೆ. ಈ ವೇಳೆ ವಿಜಯನಗರಂ ಜಿಲ್ಲೆಯ ತಹಶೀಲ್ದಾರ್​ ಪ್ರಸಾದ್​ ರಾವ್​ ಅವರು ‘ಕಾಂತಾರ’ ಸಿನಿಮಾದ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ಈ ಅವತಾರದಲ್ಲಿ ಕಂಡು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಈ ವೇಳೆ ಅವರು ‘ಕಾಂತಾರ’ ಚಿತ್ರದ ಡೈಲಾಗ್ ಕೂಡ ಹೇಳಿದ್ದಾರೆ ಎನ್ನಲಾಗಿದೆ.

ತಹಶೀಲ್ದಾರ್​ ಪ್ರಸಾದ್​ ರಾವ್​ ಅವರಿಗೆ ಕಲೆಯಲ್ಲಿ ಹೆಚ್ಚು ಆಸಕ್ತಿ ಇದೆ. ಹಾಗಾಗಿ ಅವರು ಈ ಕಾರ್ಯಕ್ರಮಕ್ಕೆ ‘ಕಾಂತಾರ’ ಚಿತ್ರದ ರೀತಿ ವೇಷ ಹಾಕಿಕೊಂಡು ಬಂದಿದ್ದರು. ಅವರನ್ನು ನೋಡಿ ಜಿಲ್ಲಾಧಿಕಾರಿಗೂ ಅಚ್ಚರಿ ಆಗಿದೆ. ಅವರು ಕೂಡ ಇಂಪ್ರೆಸ್​ ಆಗಿದ್ದು, ತಹಶೀಲ್ದಾರ್​ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ
Rishab Shetty: ಪಂಚೆ ಧರಿಸಿದ ರಿಷಬ್​ ಶೆಟ್ಟಿ ಗತ್ತು ಹೇಗಿದೆ ನೋಡಿ; ಇಲ್ಲಿದೆ ‘ಕಾಂತಾರ’ ಹೀರೋ ಫೋಟೋ ಗ್ಯಾಲರಿ
Kantara: ಕರ್ನಾಟಕದಲ್ಲಿ ‘ಕಾಂತಾರ’ ಚಿತ್ರದ 1 ಕೋಟಿ ಟಿಕೆಟ್ಸ್​ ಮಾರಾಟ; ದಾಖಲೆಗೆ ಹಿಗ್ಗಿದ ‘ಹೊಂಬಾಳೆ ಫಿಲ್ಮ್ಸ್​’
Kantara: ಬೆಂಗಳೂರಿಗೆ ಕಾಲಿಡುತ್ತಲೇ ‘ಕಾಂತಾರ’ ಬಗ್ಗೆ ಮಾತಾಡಿದ ಎಬಿ ಡಿವಿಲಿಯರ್ಸ್; ರಿಷಬ್​ ಶೆಟ್ಟಿ ಹೇಳಿದ್ದೇನು?
Kantara: ‘ಕಾಂತಾರ’ ಸೂಪರ್​ ಹಿಟ್​ ಆದ್ಮೇಲೆ ರಿಷಬ್​ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್​ ಜೆಟ್​ ಏರಿದ ಶಿವ

‘ಕಾಂತಾರ’ ಸಿನಿಮಾದಲ್ಲಿನ ಕಥೆ ತುಳುನಾಡಿಗೆ ಸಂಬಂಧಿಸಿದ್ದಾದರೂ ಬೇರೆ ಬೇರೆ ಪ್ರದೇಶಗಳ ಜನರು ಈ ಸಿನಿಮಾವನ್ನು ಇಷ್ಟಪಟ್ಟಿದ್ದಾರೆ. ಇಂದಿಗೂ ಅನೇಕ ಕಡೆಗಳಲ್ಲಿ ಈ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ತೆಲುಗು ರಾಜ್ಯಗಳಲ್ಲಿ ಈ ಚಿತ್ರ ಬಂಗಾರದ ಬೆಳೆ ತೆಗೆದಿದೆ. ಪ್ರಭಾಸ್​, ಅನುಷ್ಕಾ ಶೆಟ್ಟಿ ಮುಂತಾದ ಟಾಲಿವುಡ್​ ಸೆಲೆಬ್ರಿಟಿಗಳು ಕೂಡ ‘ಕಾಂತಾರ’ ಸಿನಿಮಾ ನೋಡಿ ಫಿದಾ ಆಗಿದ್ದಾರೆ.

ಪ್ರತಿಷ್ಠಿತ ‘ಹೊಂಬಾಳೆ ಫಿಲ್ಮ್ಸ್​’ ಬ್ಯಾನರ್​ ಮೂಲಕ ನಿರ್ಮಾಣ ವಾದ ‘ಕಾಂತಾರ’ ಸಿನಿಮಾ ಹಿಂದಿಯಲ್ಲಿ 70 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್​ ಮಾಡಿದೆ. ಎಲ್ಲ ಭಾಷೆಗಳ ಕಲೆಕ್ಷನ್​ ಸೇರಿಸಿದರೆ 350 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಚಿತ್ರ ಒಟಿಟಿ ಅಂಗಳಕ್ಕೆ ಕಾಲಿಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.