ಕಾಂತಾರ’ ಸಿನಿಮಾ (Kantara Movie) ತೆರೆಕಂಡ ಬಳಿಕ ರಿಷಬ್ ಶೆಟ್ಟಿ (Rishab Shetty) ಖ್ಯಾತಿ ಹೆಚ್ಚಿದೆ. ಅವರು ಸದ್ಯ ‘ಕಾಂತಾರ 2’ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಈ ಮಧ್ಯೆ ಅನೇಕ ಕಾರ್ಯಕ್ರಮಗಳಲ್ಲಿ ಅವರು ಭಾಗಿ ಆಗುತ್ತಿದ್ದಾರೆ. ಈಗ ಅವರು ಹೊಸ ಸರ್ಕಾರದ ಎದುರು ಬೇಡಿಕೆ ಒಂದನ್ನು ಇಟ್ಟಿದ್ದಾರೆ. ಫಿಲ್ಮ್ ಸಿಟಿ ಬೆಂಗಳೂರಿನಲ್ಲೇ ನಿರ್ಮಾಣ ಆಗಬೇಕು ಎಂದು ಅವರು ಕೋರಿದ್ದಾರೆ. ಅವರ ಕೋರಿಕೆಗೆ ಅನೇಕರು ಬೆಂಬಲ ಸೂಚಿಸಿದ್ದಾರೆ.
ಸ್ಯಾಂಡಲ್ವುಡ್ಗೆ ಒಂದು ಫಿಲ್ಮ್ ಸಿಟಿ ಬೇಕು ಎಂಬುದು ಹಳೆಯ ಬೇಡಿಕೆ. ಈ ಕೋರಿಕೆ ಇಲ್ಲಿಯವರೆಗೂ ಈಡೇರಿಲ್ಲ. ಇದರ ಜೊತೆಗೆ ಈ ಫಿಲ್ಮ್ ಸಿಟಿಯನ್ನು ಎಲ್ಲಿ ನಿರ್ಮಾಣ ಮಾಡಬೇಕು ಎನ್ನುವ ಬಗ್ಗೆಯೂ ಸಾಕಷ್ಟು ಚರ್ಚೆಗಳು ನಡೆದಿವೆ. ಕೆಲವರು ಬೆಂಗಳೂರಿನ ಹೆಸರನ್ನು ಸೂಚಿಸಿದರೆ, ಕೆಲವರು ಮೈಸೂರಿನ ಹೆಸರನ್ನು ಸೂಚಿಸಿದ್ದಾರೆ. ಈ ಫಿಲ್ಮ್ ಸಿಟಿ ಬೆಂಗಳೂರಿನಲ್ಲೇ ನಿರ್ಮಾಣ ಆಗಬೇಕು ಎಂಬುದು ರಿಷಬ್ ಶೆಟ್ಟಿ ಒತ್ತಾಯ.
ಬೆಂಗಳೂರಿನಲ್ಲಿ ನಡೆದ ಸುಶಾಸನ್ ಗರೀಬ್ ಕಲ್ಯಾಣ್ ರಾಷ್ಟ್ರೀಯ ಸಮಾವೇಶದಲ್ಲಿ ರಿಷಬ್ ಭಾಗಿ ಆಗಿದ್ದರು. ಈ ವೇಳೆ ಮಾತನಾಡಿದ ಅವರು, ‘ಪ್ರೇಕ್ಷಕರನ್ನು ತಲುಪುವುದು ಒಂದು ಸವಾಲಾಗಿದೆ. ಸರ್ಕಾರದಿಂದ ನಮಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಇದರ ಜೊತೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಆಗಬೇಕು ಎಂಬುದು ಸೇರಿ ಸರ್ಕಾರದ ಬಳಿ ಕೆಲವು ಮನವಿ ಇದೆ’ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಕೈ ಹಾಕಿದ ರಿಷಬ್ ಶೆಟ್ಟಿ; ಕನಸು ಹುಟ್ಟಿದ ಊರಿನ ಹೆಸರಿಟ್ಟ ನಟ
‘ಕಾಂತಾರ’ ಸಿನಿಮಾ 2022ರಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದ ಯಶಸ್ಸು ಪಡೆಯಿತು. ಈ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ 400 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿತು. ಸಣ್ಣ ಬಜೆಟ್ನಲ್ಲಿ ನಿರ್ಮಾಣ ಆದ ಈ ಸಿನಿಮಾ ಇಷ್ಟು ದೊಡ್ಡ ಮಟ್ಟದ ಗಳಿಕೆ ಮಾಡಿದ್ದರಿಂದ ಹೊಂಬಾಳೆ ಫಿಲ್ಮ್ಸ್ಗೆ ಒಳ್ಳೆಯ ಲಾಭ ಆಗಿದೆ. ‘ಕಾಂತಾರ 2’ ಬಗ್ಗೆ ಸದ್ಯ ಸಾಕಷ್ಟು ನಿರೀಕ್ಷೆ ಇದೆ. ಮಳೆಗಾಲದಲ್ಲಿ ಸಿನಿಮಾ ಶೂಟಿಂಗ್ ಆರಂಭ ಆಗುವ ನಿರೀಕ್ಷೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ