ಈ ಶುಕ್ರವಾರ ದೊಡ್ಡ ಸಿನಿಮಾಗಳಿಲ್ಲ, ‘ಉಪೇಂದ್ರ’ನದ್ದಷ್ಟೆ ಅಬ್ಬರ

|

Updated on: Sep 19, 2024 | 6:01 PM

ಮತ್ತೊಂದು ಶುಕ್ರವಾರ ಬಂದಿದೆ. ಆದರೆ ಈ ವಾರ ತೀರ ಕುತೂಹಲ ಮೂಡಿಸಿರುವ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲ ಬದಲಿಗೆ ಬಹುತೇಕ ಸಣ್ಣ ಬಜೆಟ್​ನ ಸಿನಿಮಾಗಳೇ ತೆರೆಗೆ ಬರುತ್ತಿವೆ. ಇವುಗಳ ನಡುವೆ ನಟ ಉಪೇಂದ್ರ ಅವರ ಹಳೆಯ ಸಿನಿಮಾ ‘ಉಪೇಂದ್ರ’ ಮರು ಬಿಡುಗಡೆ ಆಗುತ್ತಿದೆ.

ಈ ಶುಕ್ರವಾರ ದೊಡ್ಡ ಸಿನಿಮಾಗಳಿಲ್ಲ, ‘ಉಪೇಂದ್ರ’ನದ್ದಷ್ಟೆ ಅಬ್ಬರ
Follow us on

ಮತ್ತೊಂದು ಶುಕ್ರವಾರ ಬಂದಿದೆ. ಆದರೆ ಈ ಶುಕ್ರವಾರ ಗಾಂಧಿ ನಗರದ ಪಾಲಿಗೆ ಅಷ್ಟೇನೂ ಉಲ್ಲಾಸದಾಯಕ ಅಲ್ಲ. ಸಿನಿಮಾ ಪ್ರೇಮಿಗಳಿಗೂ ಸಹ ಏಕೆಂದರೆ. ಯಾವುದೇ ದೊಡ್ಡ ಸಿನಿಮಾಗಳು ಈ ವಾರ ತೆರೆಗೆ ಬರುತ್ತಿಲ್ಲ. ಹಾಗೆಂದು ಸಿನಿಮಾ ಪ್ರೇಮಿಗಳು ತೀರಾ ನಿರಾಶೆಗೆ ಒಳಪಡಬೇಕಾಗಿಲ್ಲ. ಏಕೆಂದರೆ ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಸಿನಿಮಾ ಮರು ಬಿಡುಗಡೆ ಆಗಲಿದೆ. ಆದರೆ ‘ಉಪೇಂದ್ರ’ ಸಿನಿಮಾದ ಹೊರತಾಗಿ ಪ್ರೇಕ್ಷಕರನ್ನು ಸೆಳೆಯಬಹುದಾದ ಇನ್ಯಾವುದೇ ಸಿನಿಮಾ ಈ ವಾರ ತೆರೆಗೆ ಬರುತ್ತಿಲ್ಲ.

ಉಪೇಂದ್ರ ಮರು ಬಿಡುಗಡೆ

ಉಪೇಂದ್ರ ನಟಿಸಿ ನಿರ್ದೇಶನ ಮಾಡಿದ್ದ ‘ಉಪೇಂದ್ರ’ ಸಿನಿಮಾ 1999 ರಲ್ಲಿ ಮೊದಲ ಬಾರಿ ಬಿಡುಗಡೆ ಆಗಿತ್ತು. ಆಗ ಈ ಸಿನಿಮಾ ಹೊಸ ಅಲೆ ಎಬ್ಬಿಸಿತ್ತು. ಪ್ರೇಮಾ, ದಾಮಿನಿ, ರವೀನಾ ಟಂಡನ್ ಅವರುಗಳು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದೀಗ ಈ ಸಿನಿಮಾ ಸೆಪ್ಟೆಂಬರ್ 20ರ ಶುಕ್ರವಾರ ಮರು ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಫೋಟೋಶೂಟ್ ಓಕೆ ಬಟ್ ಹೊಸ ಸಿನಿಮಾ ಮಾಡೋದು ಯಾವಾಗ?

ಕರ್ಕಿ ನಾನು, ಬಿಎ, ಎಲ್​ಎಲ್​ಬಿ

ಪ್ರೀತಿ, ಜಾತಿ, ಹಣ ಅಂತಸ್ತುಗಳ ಸುತ್ತ ಹೆಣೆಯಲಾದ ಕಥಾವಸ್ತುವನ್ನು ಒಳಗೊಂಡಿರುವ ‘ಕರ್ಕಿ; ನಾನು ಬಿಎ, ಎಲ್​ಎಲ್​ಬಿ’ ಸಿನಿಮಾ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಸಿನಿಮಾದ ಟ್ರೈಲರ್ ನೋಡಿದರೆ ತಮಿಳಿನ ‘ಪರಿಯೇರುಮ್ ಪೆರುಮಾಳ್’ ಸಿನಿಮಾದ ರೀಮೇಕ್ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಸಿನಿಮಾದಲ್ಲಿ ಜಯಪ್ರಕಾಶ್ ರೆಡ್ಡಿ ನಾಯಕ, ಮೀನಾಕ್ಷಿ ದಿನೇಶ್ ನಾಯಕಿ. ಸಾಧು ಕೋಕಿಲ ಸಹ ಇದ್ದಾರೆ.

ಹಗ್ಗ

ನಟಿ ಅನುಪ್ರಭಾಕರ್ ನಟಿಸಿರುವ ಹಾರರ್ ಸಿನಿಮಾ ‘ಹಗ್ಗ’ ಇದೇ ಶುಕ್ರವಾರ ತೆರೆಗೆ ಬರುತ್ತಿದೆ. ಸಿನಿಮಾದಲ್ಲಿ ಅನು ಪ್ರಭಾಕರ್ ಜೊತೆಗೆ, ಹರ್ಷಿಕಾ ಪೂಣಚ್ಚ, ಅವಿನಾಶ್, ತಬಲ ನಾಣಿ, ಸುಧಾ ಬೆಳವಾಡಿ ಇನ್ನೂ ಕೆಲವು ಹಿರಿಯ ನಟರಿದ್ದಾರೆ. ಅವಿನಾಶ್ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಇನ್ನುಳಿದಂತೆ ಧ್ರುವತಾರೆ, ‘ದಿ ಜರ್ನಲಿಸ್ಟ್​’ ಸಿನಿಮಾಗಳು ಸಹ ಈ ವಾರ ತೆರೆಗೆ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:55 pm, Thu, 19 September 24