ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದೇಕೆ? ಇದರ ಹಿಂದಿದೆ ನೋವಿನ ಕಥೆ?

| Updated By: ರಾಜೇಶ್ ದುಗ್ಗುಮನೆ

Updated on: Jan 24, 2025 | 9:54 AM

2019ರಲ್ಲಿ ತೆರೆಕಂಡ ಸಿನಿಮಾಗಳಿಗೆ ಈಗ ರಾಜ್ಯ ಪ್ರಶಸ್ತಿ ಘೋಷಣೆ ಆಗಿದೆ. ಈ ಪಟ್ಟಿಯಲ್ಲಿ ಸುದೀಪ್ ಅವರು ‘ಅತ್ಯುತ್ತಮ ನಟ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಚ್ಚರಿ ಏನೆಂದರೆ, ಸುದೀಪ್ ಅವರಿಗೆ ಪ್ರಶಸ್ತಿ ಸ್ವೀಕರಿಸಲು ಇಷ್ಟವಿಲ್ಲ. ಕಿಚ್ಚ ಸುದೀಪ್ ಅವರು ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುತ್ತಿಲ್ಲ. ಇದಕ್ಕೆ ಕಾರಣ ಇಲ್ಲಿದೆ.

ಕಿಚ್ಚ ಸುದೀಪ್ ರಾಜ್ಯ ಪ್ರಶಸ್ತಿ ತಿರಸ್ಕರಿಸಿದ್ದೇಕೆ? ಇದರ ಹಿಂದಿದೆ ನೋವಿನ ಕಥೆ?
ಸುದೀಪ್
Follow us on

ಅನೇಕ ಸೆಲೆಬ್ರಿಟಿಗಳು ಪ್ರಶಸ್ತಿ ಸ್ವೀಕರಿಸುವುದಿಲ್ಲ. ಇದಕ್ಕೆ ಅವರದ್ದೇ ಆದ ಕಾರಣಗಳಿವೆ. ಆಮಿರ್ ಖಾನ್ ಅವರು ಯಾವುದೇ ಅವಾರ್ಡ್ ಕಾರ್ಯಕ್ರಮಗಳಿಗೂ ತೆರಳುವುದಿಲ್ಲ. ಕನ್ನಡದಲ್ಲಿ ಕಿಚ್ಚ ಸುದೀಪ್ ಕೂಡ ಇದೇ ನಿಯಮ ಪಾಲಿಸುತ್ತಿದ್ದಾರೆ. ಅವರು ಅವಾರ್ಡ್ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳಿದ್ದು ಇದೆ. ಆದರೆ, ಅವರು ಅವಾರ್ಡ್ ಸ್ವೀಕರಿಸುವುದನ್ನು ನಿಲ್ಲಿಸಿದ್ದಾರೆ. ‘ಪೈಲ್ವಾನ್’ ಚಿತ್ರಕ್ಕಾಗಿ ಸುದೀಪ್ ಅವರಿಗೆ ರಾಜ್ಯ ಪ್ರಶಸ್ತಿ ಬಂದಿತ್ತು. ಆದರೆ, ಇದನ್ನು ಅವರು ಸ್ವೀಕರಿಸಿಲ್ಲ. ಇದರ ಹಿಂದೆ ನೋವಿನ ಕಥೆ ಇದೆ ಎನ್ನಲಾಗಿದೆ.

ಇದರ ಹಿಂದಿದೆಯಾ ನೋವಿನ ಕಥೆ?

ಕಿಚ್ಚ ಸುದೀಪ್ ಕನ್ನಡದ ಸ್ಟಾರ್ ಹೀರೋ. ಅವರು ಹಲವು ಚಿತ್ರಗಳು ಯಶಸ್ಸು ಕಂಡಿವೆ. ಆದರೆ, ಕೆಲ ವರ್ಷಗಳಿಂದ ಪ್ರಶಸ್ತಿಗಳನ್ನು ಸುದೀಪ್ ನಿರಾಕರಿಸುತ್ತಾ ಬಂದಿದ್ದಾರೆ. ಈ ನಿರಾಕರಣೆಯ ಹಿಂದೆ ಅದರದ್ದೇ ಆದ ನೋವಿದೆ ಎಂದು ಹೇಳಲಾಗುತ್ತಿದೆ. ಆ ಎರಡು ಘಟನೆಗಳಿಂದ ಅವರಿಗೆ ಬೇಸರ ಆಗಿದೆ ಎನ್ನಲಾಗಿದೆ.

‘ರಂಗ ಎಸ್ಎಸ್ಎಲ್​ಸಿ’ (2004) ಮತ್ತು ‘ಮುಸ್ಸಂಜೆ ಮಾತು’ (2008) ಸಿನಿಮಾ ಮಾಡಿದಾಗ ಪ್ರಶಸ್ತಿ ಕಮಿಟಿಯಲ್ಲಿದ್ದವರೇ ಸುದೀಪ್‌ಗೆ ಕರೆ ಮಾಡಿ ನಿಮಗೆ ಅತ್ಯುತ್ತಮ ನಟ ಪ್ರಶಸ್ತಿ ಬಂದಿದೆ ಎಂದು ಹೇಳಿದ್ದರಂತೆ. ಚಿತ್ರರಂಗದಲ್ಲಿ ಗುರುತಿಸಿಕೊಳ್ಳುವಾಗ ಅವಾರ್ಡ್ ಬಂದಿದೆ ಎಂದರೆ ಖುಷಿ ಆಗಿಯೇ ಆಗುತ್ತದೆ. ಹೀಗಾಗಿ ಅವಾರ್ಡ್​ ಕಮಿಟಿಯವರ ಮಾತನ್ನು ಕೇಳಿ ಸುದೀಪ್ ಸಂಭ್ರಮಿಸಿದ್ದರಂತೆ.

ಆದರೆ, ರಾಜ್ಯ ಪ್ರಶಸ್ತಿ ಘೋಷಣೆ ಆದಾಗ ಮಾತ್ರ ಅಲ್ಲಿ ಅದು ಬೇರೆ ನಟರ ಪಾಲಾಗಿತ್ತು. ಈ ಎರಡು ಘಟನೆಯಿಂದಾಗಿ ಅವರು ಪ್ರಶಸ್ತಿಗಳನ್ನು ನಿರಾಕರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ. ಈ ಮೊದಲು ‘ಸೈಮಾ ಅವಾರ್ಡ್​’ ಸಮಾರಂಭಕ್ಕೆ ಗೆಸ್ಟ್ ಆಗಿ ಹೋಗಿದ್ದರು ಅಷ್ಟೇ. ಅದನ್ನು ಹೊರತುಪಡಿಸಿ ಅವರು ಅವಾರ್ಡ್ ಸ್ವೀಕರಿಸಿಲ್ಲ.

ಇದನ್ನೂ ಓದಿ: ‘ಅತ್ಯುತ್ತಮ ನಟ’ ರಾಜ್ಯ ಪ್ರಶಸ್ತಿ ನಿರಾಕರಿಸಿದ ಸುದೀಪ್; ಕಾರಣ ತಿಳಿಸಿ ಪತ್ರ ಬರೆದ ಕಿಚ್ಚ

ಕಿಚ್ಚ ಸುದೀಪ್ ಅವರಿಗೆ ‘ಪೈಲ್ವಾನ್’ ಚಿತ್ರದ ನಟನೆಗೆ ರಾಜ್ಯ ಸರ್ಕಾರ ‘ಅತ್ಯುತ್ತಮ ನಟ’ ಅವಾರ್ಡ್ ನೀಡಿ ಗೌರವಿಸಿತ್ತು. ಇದಕ್ಕೆ ಟ್ವೀಟ್ ಮಾಡಿದ್ದ ಸುದೀಪ್, ‘ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ. ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ನಾನು ಹಲವಾರು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ನಾನು ನಿರ್ಧರಿಸಿದ್ದೇನೆ. ಅದಕ್ಕೆ ವಿವಿಧ ವೈಯಕ್ತಿಕ ಕಾರಣಗಳಿವೆ’ ಎಂದು ಸುದೀಪ್ ಹೇಳಿದ್ದಾರೆ. ಈ ಮೂಲಕ ಅವಾರ್ಡ್ ಬೇಡ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:53 am, Fri, 24 January 25