ತಂದೆ ಹೇಳಿದ ಆ ಒಂದು ಮಾತಿನಿಂದ ಧರ್ಮಸ್ಥಳಕ್ಕೆ ಭೇಟಿ ಕೊಟ್ಟ ಯಶ್

| Updated By: ರಾಜೇಶ್ ದುಗ್ಗುಮನೆ

Updated on: Aug 07, 2024 | 8:14 AM

ಯಶ ಅವರು ಧರ್ಮಸ್ಥಳಕ್ಕೆ ತೆರಳಿದ್ದಾರೆ. ಅಲ್ಲಿ ಮಂಜುನಾಥನ ದರ್ಶನ ಪಡೆದು ಬಂದಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರ ತಂದೆ ಈ ಮೊದಲು ನೀಡಿದ ಹೇಳಿಕೆ ಎಂದು ಹೇಳಲಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಯಶ್ ಫ್ಯಾನ್ಸ್ ಇದನ್ನು ವೈರಲ್ ಮಾಡಿದ್ದಾರೆ.

ತಂದೆ ಹೇಳಿದ ಆ ಒಂದು ಮಾತಿನಿಂದ ಧರ್ಮಸ್ಥಳಕ್ಕೆ ಭೇಟಿ ಕೊಟ್ಟ ಯಶ್
ಯಶ್
Follow us on

ಯಶ್ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಬಂದ ವಿಡಿಯೋ ಹಾಗೂ ಫೋಟೋಗಳು ಎಲ್ಲಡೆ ವೈರಲ್ ಆಗುತ್ತಿವೆ. ಪತ್ನಿ ರಾಧಿಕಾ ಪಂಡಿತ್, ನಿರ್ಮಾಪಕ ವೆಂಕಟ್​ ನಾರಾಯಣ್ ಮೊದಲಾದವರು ಯಶ್​ಗೆ ಜೊತೆಯಾಗಿದ್ದಾರೆ. ಯಶ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಲು ಒಂದು ಪ್ರಮುಖ ಕಾರಣ ಇದೆ ಎನ್ನಲಾಗಿದೆ. ಆ ಕಾರಣ ಏನು ಎಂಬುದನ್ನು ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆ ಬಗ್ಗೆ ಈ ಸ್ಟೋರಿಯಲ್ಲಿ ಉತ್ತರ ಇದೆ.

ಯಶ್ ಅವರು ‘ಕೆಜಿಎಫ್ 2’ ಚಿತ್ರದ ಮೂಲಕ ಯಶಸ್ಸು ಕಂಡರು. ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಸಿಕ್ಕಿದೆ. ಈಗ ಯಶ್ ಅವರ ಸಂಪೂರ್ಣ ಗಮನ ‘ಟಾಕ್ಸಿಕ್’ ಚಿತ್ರದ ಮೇಲೆ ಇದೆ. ಈ ಸಿನಿಮಾದ ಶೂಟಿಂಗ್ ಆಗಸ್ಟ್ 8ರಂದು ಆರಂಭ ಆಗಲಿದೆ ಎಂದು ವರದಿ ಆಗಿದೆ. ಅದಕ್ಕೂ ಮೊದಲು ಯಶ್ ಅವರು ಧರ್ಮಸ್ಥಳಕ್ಕೆ ತೆರಳಿ ಮಂಜುನಾಥನ ದರ್ಶನ ಪಡೆದಿದ್ದಾರೆ. ಅಷ್ಟೇ ಅಲ್ಲ, ಅಲ್ಲಿ ಪ್ರಸಾದ ರೂಪದಲ್ಲಿ ನೀಡುವ ಊಟವನ್ನು ಮಾಡಿ ಬಂದಿದ್ದಾರೆ. ಸಿನಿಮಾ ಕೆಲಸಗಳು ಆರಂಭ ಆಗುವ ಸನಿಹದಲ್ಲಿ ಇರುವ ಕಾರಣದಿಂದಲೇ ಯಶ್ ಅವರು ಅಲ್ಲಿಗೆ ತೆರಳಿದ್ದಾರೆ ಎಂದು ವರದಿ ಆಗಿದೆ.

ಯಶ್ ಅವರು ಧರ್ಮಸ್ಥಳಕ್ಕೆ ಸಾಕಷ್ಟು ಬಾರಿ ತೆರಳಿದ್ದಾರೆ. ಇದಕ್ಕೆ ಕಾರಣ ಆಗಿರೋದು ಅವರು ತಂದೆ ನೀಡಿದ ಹೇಳಿಕೆ ಎಂದು ಹೇಳಲಾಗುತ್ತಿದೆ. ಯಶ್ ಅವರು ಈ ಮೊದಲು ನೀಡಿದ್ದ ಹೇಳಿಕೆಯನ್ನು ಯಶ್ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಯಶ್ ಅವರು ಅಂದು ಹೇಳಿದ್ದು ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

‘ನಮ್ಮ ಅಪ್ಪ ಯಾವಾಗಲೂ ಹೇಳುತ್ತಾ ಇರುತ್ತಾರೆ. ಧರ್ಮಸ್ಥಳ ಮಂಜುನಾಥನ ಬೇಡಿಕೋ ಎಲ್ಲದೂ ಆಗುತ್ತದೆ. ಆ ನಂಬಿಕೆಯಲ್ಲಿ ಬೆಳೆದು ಬಂದವರು ನಾವು. ಸಂಪೂರ್ಣ ಕರ್ನಾಟಕ ಆ ನಂಬಿಕೆಯಲ್ಲಿ ಬದುಕುತ್ತಾ ಇದೆ. ನನಗೆ ಇದ್ದಿದ್ದು ಒಂದೇ ನಂಬಿಕೆ ಎಂದರೆ ಮಂಜುನಾಥ ಸ್ವಾಮಿ ಕೈ ಬಿಡಲ್ಲ ಎಂದು’ ಎಂದು ಯಶ್ ಅವರು ಈ ಮೊದಲು ಹೇಳಿಕೊಂಡಿದ್ದರು. ಈಗ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಆರಂಭ ಆಗುತ್ತಿರುವುದರಿಂದ ಅವರು ಧರ್ಮಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಇದನ್ನೂ ಓದಿ: ಲಕ್ಕಿ ನಂಬರ್ ಡೇಟ್​ನಿಂದ ‘ಟಾಕ್ಸಿಕ್’ ಸಿನಿಮಾ ಶೂಟಿಂಗ್ ಆರಂಭಿಸಲಿದ್ದಾರೆ ಯಶ್

‘ಟಾಕ್ಸಿಕ್’ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್​ ಇದನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರ ಮುಂದಿನ ವರ್ಷ ರಿಲೀಸ್ ಆಗುವ ನಿರೀಕ್ಷೆ ಇದೆ. ಆದರೆ, ಈ ಬಗ್ಗೆ ಇನ್ನಷ್ಟೇ ಮಾಹಿತಿ ಸಿಗಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.