ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ; ಈ ಬಾರಿಯ ವಿಶೇಷತೆಗಳು ಏನು?
14ನೇ ಬೆಂಗಳೂರು ಅಂತರರಾಷ್ಟ್ರೀಯ ಕಿರುಚಿತ್ರೋತ್ಸವ ಗುರುವಾರದಿಂದ (ಆ.8) ಆಗಸ್ಟ್ 18ರ ವರೆಗೆ ನಡೆಯಲಿದೆ. ಕಿರುಚಿತ್ರೋತ್ಸವವೊಂದಕ್ಕೆ ಆಸ್ಕರ್ ಮಾನ್ಯತೆ ದೊರೆತಿರುವುದು ಈ ಕಿರುಚಿತ್ರೋತ್ಸವದ ಹೆಗ್ಗಳಿಕೆಯಾಗಿದೆ. ಹಲವು ವಿಭಾಗಗಳಲ್ಲಿ ಕಿರುಚಿತ್ರ ಪ್ರಸಾರ ಕಾಣಲಿದೆ.
ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ (BISFF) ಆಗಸ್ಟ್ 8ರಿಂದ 18ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. 94 ದೇಶಗಳಿಂದ 3,213 ಜನರು ಸಬ್ಮಿಷನ್ಗಳು ಬಂದಿವೆ. ಈ ಪೈಕಿ 266 ಕಿರು ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿವಿಧ ವಿಭಾಗಗಳಲ್ಲಿ ಕಿರುಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಫಿಲ್ಮ್ಫೆಸ್ಟಿವಲ್ ಕಿರುಚಿತ್ರಗಳು ಆನ್ಲೈನ್ನಲ್ಲಿ ಪ್ರಸಾರ ಕಾಣಲಿವೆ.
ಕಳೆದ ವರ್ಷದಂತೆ ಈ ಬಾರಿಯೂ ಚಿತ್ರೋತ್ಸವ ಹೈಬ್ರಿಡ್ ಮಾದರಿಯಲ್ಲಿ ನಡೆಯುತ್ತಿದೆ. ಆಸಕ್ತರು www.bisff.in ತಾಣಕ್ಕೆ ಲಾಗಿನ್ ಆಗಿ ನಾಮನಿರ್ದೇಶನಗೊಂಡ ಕಿರುಚಿತ್ರಗಳನ್ನು ನೋಡಬಹುದಾಗಿದೆ. ಆ.15ರಿಂದ 18ವರೆಗೆ ಸುಚಿತ್ರ ಫಿಲ್ಮ್ ಸೊಸೈಟಿ ಹಾಗೂ ಗೋತೆ ಇನ್‌ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನದಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಶ್ರೀಹರಿ ಖೋಡೆ ಆಡಿಟೋರಿಯಂನಲ್ಲಿ ಸ್ಪರ್ಧಾ ವಿಭಾಗದಲ್ಲಿನ ಕಿರುಚಿತ್ರಗಳ ಪ್ರದರ್ಶನ ನಡೆಯಲಿದೆ.
ಈ ಬಾರಿ ಹೊಸ ವಿಭಾಗವನ್ನು ಸೇರ್ಪಡೆ ಮಾಡಲಾಗಿದೆ. ಅದುವೇ ‘Queer Qorner’. LGBTQIA ಸಮುಯಾದವರ ವಿಚಾರವನ್ನು ಇಲ್ಲಿ ಪ್ರಮುಖವಾಗಿ ಫೋಕಸ್ ಮಾಡಲಾಗುತ್ತಿದೆ. ಇದರ ಜೊತೆಗೆ ‘ಲೆಟ್ಸ್ ಇನ್ಕ್ಲ್ಯೂಡ್’ ಕ್ಯಾಟಗರಿ ಕೂಡ ಇದ್ದು ಇದರ ಅಡಿಯಲ್ಲಿ ಮಾನಸಿಕವಾಗಿ, ಹಾಗೂ ದೈಹಿಕವಾಗಿ ವೈವಿಧ್ಯತೆ ಹೊಂದಿರುವವರ ಬಗ್ಗೆ ಕಿರುಚಿತ್ರ ಮಾಡಲು ಅವಕಾಶ ಇದೆ. ಅಂತಾರಾಷ್ಟ್ರೀಯ, ಭಾರತ, ಕರ್ನಾಟಕ ಸೇರಿ ಅನೇಕ ವಿಭಾಗಗಳು ಇರಲಿವೆ.
ಇದನ್ನೂ ಓದಿ: ಎಲ್ಲ ರೀತಿಯ ಚಲನಚಿತ್ರಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರದ ಚಿಂತನೆ: ಪ್ರಕಾಶ್ ಜಾವಡೇಕರ್
ಸಿನಿಮೋತ್ಸವದಲ್ಲಿ ರಾಮಕೃಷ್ಣ ಕಣ್ಣರ್ಪಾಡಿ ಅವರ ಮೇಕಪ್ ವರ್ಕ್ಶಾಪ್ ಇರಲಿದೆ. ಅನೇಕರು ಮೇಕಪ್ನ ಕಡೆಗಣಿಸುತ್ತಾರೆ. ಆ ರೀತಿ ಆಗಬಾರದು ಅನ್ನೋದು ಈ ಸಿನಿಮೋತ್ಸವದ ಉದ್ದೇಶ. ಈ ಕಾರಣದಿಂದಲೇ ಮೇಕಪ್ ವರ್ಕ್ಶಾಪ್ ಇರಲಿದೆ. ಎಡಿಟಿಂಗ್ ವರ್ಕ್ಶಾಪ್ ಕೂಡ ಇರಲಿದೆ. ಈ ಬಾರಿ ಶಶಾಂಕ್ ಸೋಗಲ್ (ಡೇರ್ಡೆವಿಲ್ ಮುಸ್ತಫಾ ನಿರ್ದೇಶಕ), ಅದ್ವೈಥ ಗುರುಮೂರ್ತಿ (ಛಾಯಾಗ್ರಾಹಕ), ‘ಕೆಂಪ ರಾಜು (ಎಡಿಟರ್), ಸನಾ ರವಿ ಕುಮಾರ್ (ಛಾಯಾಗ್ರಾಹಕ), ಸಂಯುಕ್ತ ಹೊರನಾಡು (ನಟಿ), ಗೌರಿ ನಾಯರ್ (ನಟಿ), ಪಲ್ಲವಿ ರಾವ್ (ಚಿತ್ರಕಥೆ ಬರಹಗಾರ್ತಿ) ಮೊದಲಾದವರು ಜೂರಿ ವಿಭಾಗದಲ್ಲಿ ಇದಾರೆ. ಪಾಸ್ನ ಬೆಲೆ 399 ರೂಪಾಯಿ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.