Yash: ಯಶ್ ಅವರ ದೇವಸ್ಥಾನ ಭೇಟಿ ಹಿಂದೆ ಹಲವು ಕಾರಣ ಊಹಿಸಿದ ಫ್ಯಾನ್ಸ್..

|

Updated on: Jun 22, 2023 | 6:30 AM

ಯಶ್ ಹೊಸ ಸಿನಿಮಾ ಕುರಿತು ಒಂದಿಲ್ಲೊಂದು ಸುದ್ದಿ ಹುಟ್ಟಿಕೊಳ್ಳುತ್ತಲೇ ಇದೆ. ಈಗ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿದ ಹಿಂದೆ ಸಿನಿಮಾ ಕಾರಣ ಇರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

Yash: ಯಶ್ ಅವರ ದೇವಸ್ಥಾನ ಭೇಟಿ ಹಿಂದೆ ಹಲವು ಕಾರಣ ಊಹಿಸಿದ ಫ್ಯಾನ್ಸ್..
ಯಶ್​
Follow us on

ರಾಕಿಂಗ್ ಸ್ಟಾರ್ ಯಶ್ (Yash) ಅವರ ನಟನೆಯ ‘ಕೆಜಿಎಫ್ 2’ ಸಿನಿಮಾ ರಿಲೀಸ್ ಆಗಿ ವರ್ಷಗಳ ಮೇಲಾಗಿದೆ. ಅವರ 19ನೇ ಸಿನಿಮಾ ಬಗ್ಗೆ ಈವರೆಗೆ ಅಪ್​ಡೇಟ್​ ಸಿಕ್ಕಿಲ್ಲ. Yash19 ಬಗ್ಗೆ ಹುಟ್ಟಿಕೊಂಡ ಅಂತೆಕಂತೆಗಳೂ ಒಂದೆರಡಲ್ಲ. ಆದರೆ, ಯಶ್ ಇದಕ್ಕೆಲ್ಲ ತಲೆಕೆಡಿಸಿಕೊಂಡಿಲ್ಲ. ಇದಕ್ಕೆ ಸ್ಪಷ್ಟನೆ ನೀಡುವ ಗೋಜಿಗೂ ಹೋಗಿಲ್ಲ. ಸದ್ಯ ಯಶ್ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಬುಧವಾರ (ಜೂನ್ 21) ಯಶ್ ಅವರು ಪತ್ನಿ ರಾಧಿಕಾ ಪಂಡಿತ್, ಮಕ್ಕಳಾದ ಆಯ್ರಾ ಹಾಗೂ ಯಥರ್ವ್​ ಜೊತೆ ಮೈಸೂರಿನ ನಂಜನಗೂಡಿಗೆ ಭೇಟಿ ನೀಡಿದ್ದಾರೆ. ಶ್ರೀಕಂಠೇಶ್ವರನ ದರ್ಶನ ಪಡೆದಿದ್ದಾರೆ. ಇದಕ್ಕೆ ಸಾಕಷ್ಟು ಕಾರಣಗಳನ್ನು ಹುಡುಕಲಾಗುತ್ತಿದೆ.

ಹೊಸ ಸಿನಿಮಾ ಘೋಷಣೆಗೂ ಮೊದಲು ಪೂಜೆ ಮಾಡಿಸಿದ್ರಾ ಯಶ್?

ಯಶ್ ನಟನೆಯ ‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ 14ರಂದು ತೆರೆಗೆ ಬಂತು. ಈ ಚಿತ್ರ ರಿಲೀಸ್ ಆಗಿ ಒಂದು ವರ್ಷದ ಮೇಲಾಗಿದೆ. ಅಂದಿನಿಂದ ಇಂದಿನವರೆಗೂ ಯಶ್ ಹೊಸ ಸಿನಿಮಾ ಕುರಿತು ಒಂದಿಲ್ಲೊಂದು ಸುದ್ದಿ ಹುಟ್ಟಿಕೊಳ್ಳುತ್ತಲೇ ಇದೆ. ಆದರೆ, ಯಾವುದೂ ಅಂತಿಮವಾಗಿಲ್ಲ. ಈಗ ಯಶ್ ದೇವಸ್ಥಾನಕ್ಕೆ ಭೇಟಿ ನೀಡಿದ ಹಿಂದೆ ಸಿನಿಮಾ ಕಾರಣ ಇರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

ಯಶ್ ಅವರು 19ನೇ ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ಘೋಷಣೆ ಆಗಲಿದೆ ಎನ್ನಲಾಗುತ್ತಿದೆ. ಇದರ ಸಿದ್ಧತೆಯಲ್ಲಿ ಯಶ್ ಬ್ಯುಸಿ ಇದ್ದಾರೆ. ಅದಕ್ಕೂ ಮೊದಲು ಅವರು ದೇವರ ದರ್ಶನ ಪಡೆದಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ, ಇದಕ್ಕೆ ಯಶ್ ಕಡೆಯಿಂದ ಸ್ಪಷ್ಟನೆ ಸಿಕ್ಕಿಲ್ಲ.

ಹೊಸ ಕಾರಿಗೆ ಪೂಜೆ?

ಯಶ್​ ಮನೆಗೆ ಇತ್ತೀಚೆಗೆ ಹೊಸ ಐಷಾರಾಮಿ ಕಾರು ಬಂದಿದೆ. ರೇಂಜ್​ ರೋವರ್​ ಕಾರನ್ನು ಯಶ್​ ಕೊಂಡುಕೊಂಡಿದ್ದರು. ಈ ಕಾರಿನ ಬೆಲೆ ನಾಲ್ಕು ಕೋಟಿ ರೂಪಾಯಿ ಎನ್ನಲಾಗಿದೆ. ಈ ಕಾರಿನ ಪೂಜೆಗೆ ಅವರು ನಂಜನಗೂಡಿಗೆ ಬಂದರಾ ಎನ್ನುವ ಪ್ರಶ್ನೆಯೂ ಮೂಡಿದೆ.

ಇದನ್ನೂ ಓದಿ: ‘ಜನರು ಫ್ರೀ ಆಗಿ ನೋಡೋದಾಗಿದ್ರೆ ಮನಬಂದಂತೆ ಸಿನಿಮಾ ಮಾಡ್ತಿದ್ದೆ’; ‘Yash19’ ವಿಳಂಬಕ್ಕೆ ಕಾರಣ ಕೊಟ್ಟ ಯಶ್

ಯಶ್ ಹೇಳಿದ್ದೇನು?

‘ಜನ ನನಗೆ ಆಶೀರ್ವಾದ ಮಾಡಿ ಕಳುಹಿಸಿದ್ದಾರೆ. ಅವರು ಕೊಡುವ ಹಣಕ್ಕೆ ಬೆಲೆ ಇರಬೇಕು. ಇಡೀ ದೇಶ, ಜಗತ್ತು ನೋಡುತ್ತಾ ಇದೆ. ಬಹಳ ದಿನಗಳಿಂದ ಕೆಲಸ ಮಾಡುತ್ತಾ ಇದ್ದೇವೆ. ನಾನು ಒಂದು ದಿನ, ಒಂದು ಕ್ಷಣಾನೂ ವೇಸ್ಟ್ ಮಾಡ್ತಾ ಇಲ್ಲ. ಆದಷ್ಟು ಬೇಗ ಬರ್ತೀವಿ’ ಎಂದು ಯಶ್ ದೇವಸ್ಥಾನದ ಆವರಣದಲ್ಲಿ ಹೇಳಿದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ