KGF 2: ಕರ್ನಾಟಕದಲ್ಲಿ ‘ಕೆಜಿಎಫ್ 2’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ

Yash | Sanjay Dutt | KGF 2 Karnataka Booking: ಇಂದು ಮುಂಬೈನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿತ್ರ ತಂಡ ನಾಳೆಯಿಂದ (ಏ.7) ಉತ್ತರ ಭಾರತ, ಕೇರಳ ಹಾಗೂ ತಮಿಳುನಾಡಿನಲ್ಲಿ ಚಿತ್ರದ ಪ್ರಿ-ಬುಕ್ಕಿಂಗ್ ಆರಂಭವಾಗುವ ವಿಚಾರವನ್ನು ಘೋಷಿಸಿತ್ತು. ಇದನ್ನು ಗಮನಿಸಿದ ಯಶ್ ಅಭಿಮಾನಿಗಳು ಕರ್ನಾಟಕದಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಯಾವಾಗ ಎಂದು ಕುತೂಹಲದಿಂದ ಪ್ರಶ್ನಿಸಿದ್ದರು. ಇದೀಗ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ.

KGF 2: ಕರ್ನಾಟಕದಲ್ಲಿ ‘ಕೆಜಿಎಫ್ 2’ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಯಾವಾಗ ಆರಂಭ? ಅಭಿಮಾನಿಗಳ ಪ್ರಶ್ನೆಗೆ ಇಲ್ಲಿದೆ ಉತ್ತರ
‘ಕೆಜಿಎಫ್ 2’ ಚಿತ್ರದಲ್ಲಿ ಯಶ್
Updated By: shivaprasad.hs

Updated on: Apr 06, 2022 | 7:41 PM

‘ಕೆಜಿಎಫ್ 2’ (KGF Chapter 2) ಚಿತ್ರದ ರಿಲೀಸ್​ಗೆ ಅಭಿಮಾನಿಗಳು ದೀರ್ಘಕಾಲದಿಂದ ಕಾದಿದ್ದಾರೆ. ಇದೀಗ ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಚಿತ್ರತಂಡ ದೇಶಾದ್ಯಂತ ಭರ್ಜರಿಯಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ. ಇದರೊಂದಿಗೆ ಚಿತ್ರದ ರಿಲೀಸ್ ಬಗ್ಗೆ ಹೊಸ ಮಾಹಿತಿಗಳನ್ನು ನೀಡಲಾಗುತ್ತಿದೆ. ಇಂದು ಮುಂಬೈನಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಚಿತ್ರ ತಂಡ ನಾಳೆಯಿಂದ (ಏ.7) ಉತ್ತರ ಭಾರತ, ಕೇರಳ ಹಾಗೂ ತಮಿಳುನಾಡಿನಲ್ಲಿ ಚಿತ್ರದ ಪ್ರಿ-ಬುಕ್ಕಿಂಗ್ ಆರಂಭವಾಗುವ ವಿಚಾರವನ್ನು ಘೋಷಿಸಿತ್ತು. ಇದನ್ನು ಗಮನಿಸಿದ ಯಶ್ ಅಭಿಮಾನಿಗಳು ಕರ್ನಾಟಕದಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಯಾವಾಗ ಎಂದು ಕುತೂಹಲದಿಂದ ಪ್ರಶ್ನಿಸಿದ್ದರು. ಇದೀಗ ಚಿತ್ರತಂಡ ಈ ಬಗ್ಗೆ ಅಧಿಕೃತವಾಗಿ ಘೋಷಿಸಿದೆ. ಈ ಬಗ್ಗೆ ನಿರ್ಮಾಣ ಸಂಸ್ಥೆ ‘ಹೊಂಬಾಳೆ ಫಿಲ್ಮ್ಸ್’ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ. ಕರ್ನಾಟಕದಲ್ಲಿ ಏಪ್ರಿಲ್ 10ರಿಂದ ‘ಕೆಜಿಎಫ್ 2’ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಲಿದೆ. ಹೀಗಾಗಿ ಅಂದಿನಿಂದ ಅಭಿಮಾನಿಗಳು ಏಪ್ರಿಲ್ 14ರಂದು ತೆರೆಕಾಣಲಿರುವ ಚಿತ್ರಕ್ಕೆ ಟಿಕೆಟ್​ಗಳನ್ನು ಕಾಯ್ದಿರಿಸಬಹುದಾಗಿದೆ.

ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮುಂಗಡ ಬುಕ್ಕಿಂಗ್ ಯಾವಾಗ ಆರಂಭ?

ಆಂಧ್ರಪ್ರದೇಶ, ತೆಲಂಗಾಣದಲ್ಲೂ ಯಶ್​ಗೆ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಚಿತ್ರದ ರಿಲೀಸ್​ಗೆ ಬಹಳಷ್ಟು ಜನರು ಕಾದಿದ್ದಾರೆ. ಇದೀಗ ಅಲ್ಲಿ ಚಿತ್ರದ ಅಡ್ವಾನ್ಸ್ ಬುಕ್ಕಿಂಗ್ ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಚಿತ್ರತಂಡ ಘೋಷಿಸಿದೆ. ಏಪ್ರಿಲ್ 10ರಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿ ‘ಕೆಜಿಎಫ್ 2’ ಅಡ್ವಾನ್ಸ್ ಬುಕ್ಕಿಂಗ್ ಆರಂಭವಾಗಲಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್:

‘ಕೆಜಿಎಫ್ 2’ ಚಿತ್ರವನ್ನು ವಿಶ್ವಾದ್ಯಂತ ತಲುಪಿಸಲು ಚಿತ್ರತಂಡ ಪ್ರಯತ್ನಿಸುತ್ತಿದೆ. ಇದರ ಪರಿಣಾಮವಾಗಿ ಈಗಲೇ ಹಲವು ದಾಖಲೆಗಳನ್ನು ಚಿತ್ರ ಬರೆದಿದೆ. ಗ್ರೀಸ್​ನಲ್ಲಿ ರಿಲೀಸ್ ಆಗುತ್ತಿರುವ ಮೊದಲ ಚಿತ್ರ ‘ಕೆಜಿಎಫ್ 2’ ಆಗಿದೆ. ರಷ್ಯಾದಲ್ಲಿ ರಷ್ಯನ್ ಭಾಷೆಯ ಸಬ್​ಟೈಟಲ್ ಮೂಲಕ ಎಲ್ಲಾ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಬ್ರಿಟನ್​ನಲ್ಲಿ ಚಿತ್ರದ ಮುಂಗಡ ಬುಕ್ಕಿಂಗ್ ಆರಂಭವಾಗಿದ್ದು ದೊಡ್ಡ ಮಟ್ಟದಲ್ಲಿ ಜನರು ಟಿಕೆಟ್ ಕಾಯ್ದಿರಿಸುತ್ತಿದ್ದಾರೆ. ಭಾರತದ ಹಲವೆಡೆ ಗುರುವಾರದಿಂದ ಬುಕ್ಕಿಂಗ್ ಆರಂಭವಾಗಲಿರುವುದರಿಂದ ಮತ್ತಷ್ಟು ದಾಖಲೆಗಳು ಚಿತ್ರದ ಪಾಲಾಗುವ ನಿರೀಕ್ಷೆ ಇದೆ.

‘ಕೆಜಿಎಫ್​ 2’ ಸಿನಿಮಾದಲ್ಲಿ ದೊಡ್ಡ ತಾರಾಗಣವೇ ಇದ್ದು, ಸಂಜಯ್ ದತ್, ರವೀನಾ ಟಂಡನ್​, ಬಹುಭಾಷಾ ನಟ ಪ್ರಕಾಶ್ ರಾಜ್, ಅಚ್ಯುತ್ ಕುಮಾರ್ ಮೊದಲಾದವರು​ ಬಣ್ಣಹಚ್ಚಿದ್ದಾರೆ. ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ನೀಡಿದ್ದು, ಭುವನ್ ಗೌಡ ಛಾಯಾಗ್ರಹಣ ಮಾಡಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರಕ್ಕೆ ವಿಜಯ್ ಕಿರಗಂದೂರು ‘ಹೊಂಬಾಳೆ ಫಿಲ್ಮ್ಸ್’ ಬ್ಯಾನರ್​ನಲ್ಲಿ ಬಂಡವಾಳ ಹೂಡಿದ್ದಾರೆ. ಏಪ್ರಿಲ್ 14ರಂದು ವಿಶ್ವಾದ್ಯಂತ ಸಿನಿಮಾ ರಿಲೀಸ್ ಆಗುತ್ತಿದೆ.

ಇದನ್ನೂ ಓದಿ: KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್- ಇಲ್ಲಿವೆ ಫೋಟೋಗಳು

‘ನಾನು ದುಡ್ಡಿಗೋಸ್ಕರ ಸಿನಿಮಾ‌ ಮಾಡುವುದಿಲ್ಲ’; ವೃತ್ತಿ ಬದುಕಿನ ಕುರಿತು ಕುತೂಹಲಕಾರಿ ವಿಚಾರ ಹೇಳಿಕೊಂಡ‌ ಪ್ರೇಮಾ

Published On - 7:29 pm, Wed, 6 April 22