ಹನಿಸಿಂಗ್ ಕಾನ್ಸರ್ಟ್​ನಲ್ಲಿ ಯಶ್, ಕನ್ನಡದಲ್ಲಿ ಹಾಡಿ ಎಂದ ರಾಕಿಂಗ್ ಸ್ಟಾರ್

|

Updated on: Mar 23, 2025 | 9:26 AM

Yash: ಹನಿ ಸಿಂಗ್​ ಅವರ ಲೈವ್ ಕಾನ್ಸರ್ಟ್​ನಲ್ಲಿ ಶೋ ಸ್ಟಾಪರ್ ರೀತಿ ಅದ್ಧೂರಿ ಎಂಟ್ರಿ ಕೊಟ್ಟ ನಟ ಯಶ್ ವೇದಿಕೆ ಮೇಲೆ ಕನ್ನಡದಿಲ್ಲಿಯೇ ಮಾತನಾಡಿ, ಗಾಯಕ ಹನಿ ಸಿಂಗ್ ಅವರಿಗೆ ಸ್ವಾಗತ ಕೋರಿದರು. ‘ಎಲ್ಲರಿಗೂ ನಮಸ್ಕಾರ, ಮೊದಲು ಇವರಿಗೆ ಸ್ವಾಗತ ಕೋರೋಣ, ನಿಮಗೆ ಬೆಂಗಳೂರಿಗೆ ಸ್ವಾಗತ’ ಎಂದು ಹನಿಸಿಂಗ್ ಅವರಿಗೆ ಸ್ವಾಗತ ಕೋರಿದರು.

ಹನಿಸಿಂಗ್ ಕಾನ್ಸರ್ಟ್​ನಲ್ಲಿ ಯಶ್, ಕನ್ನಡದಲ್ಲಿ ಹಾಡಿ ಎಂದ ರಾಕಿಂಗ್ ಸ್ಟಾರ್
Yash Honey Singh
Follow us on

ಲೈವ್ ಕಾನ್ಸರ್ಟ್​ಗಳು ಏಕಾ ಏಕಿ ಬೂಮ್ ಪಡೆದುಕೊಂಡಿವೆ ಭಾರತದಲ್ಲಿ. ದಿಲ್​ಜೀತ್ ದೊಸ್ಸಾಂಜ್ ಅವರಿಗೆ ದೊರೆತ ಅಭೂತಪೂರ್ವ ಯಶಸ್ಸಿನಿಂದ ಪ್ರೇರಿತರಾಗಿ ಹಲವಾರು ಸಂಗೀತ ನಿರ್ದೇಶಕರು, ಗಾಯಕರು, ರ್ಯಾಪರ್​ಗಳು ಒಂದರ ಹಿಂದೊಂದರಂತೆ ಅದ್ಧೂರಿಯಾಗಿ ಲೈವ್ ಕಾನ್ಸರ್ಟ್ ಮಾಡುತ್ತಿದ್ದಾರೆ. ಈ ಲೈವ್ ಕಾನ್ಸರ್ಟ್​ಗಳಿಗೆ ಖ್ಯಾತ ಸಿನಿಮಾ ನಟರನ್ನು ಅತಿಥಿಗಳಾಗಿ ವೇದಿಕೆಗೆ ಕರೆಸುವ ಪರಿಪಾಠವೂ ಇತ್ತೀಚೆಗೆ ಸೃಷ್ಟಿಯಾಗಿದೆ. ನಿನ್ನೆಯಷ್ಟೆ ಖ್ಯಾತ ರ್ಯಾಪರ್, ಗಾಯಕ ಹನಿಸಿಂಗ್ ಅವರ ಲೈವ್ ಕಾನ್ಸರ್ಟ್ ಬಲು ಅದ್ಧೂರಿಯಾಗಿ ಬೆಂಗಳೂರಿನಲ್ಲಿ ನಡೆಯಿತು. ಕಾನ್ಸರ್ಟ್​ನಲ್ಲಿ ಅತಿಥಿಯಾಗಿ ನಟ ಯಶ್ ಭಾಗವಹಿಸಿದ್ದರು.

ಹನಿ ಸಿಂಗ್​ ಅವರ ಲೈವ್ ಕಾನ್ಸರ್ಟ್​ನಲ್ಲಿ ಶೋ ಸ್ಟಾಪರ್ ರೀತಿ ಅದ್ಧೂರಿ ಎಂಟ್ರಿ ಕೊಟ್ಟ ನಟ ಯಶ್ ವೇದಿಕೆ ಮೇಲೆ ಕನ್ನಡದಿಲ್ಲಿಯೇ ಮಾತನಾಡಿ, ಗಾಯಕ ಹನಿ ಸಿಂಗ್ ಅವರಿಗೆ ಸ್ವಾಗತ ಕೋರಿದರು. ‘ಎಲ್ಲರಿಗೂ ನಮಸ್ಕಾರ, ಮೊದಲು ಇವರಿಗೆ ಸ್ವಾಗತ ಕೋರೋಣ, ನಿಮಗೆ ಬೆಂಗಳೂರಿಗೆ ಸ್ವಾಗತ’ ಎಂದು ಹನಿಸಿಂಗ್ ಅವರಿಗೆ ಸ್ವಾಗತ ಕೋರಿದರು. ಬಳಿಕ ಹನಿ ಸಿಂಗ್ ಅವರಿಗೆ, ‘ನೀವು ಕನ್ನಡದಲ್ಲಿಯೂ ಹಾಡು ಹಾಡಬೇಕು’ ಎಂದು ಒತ್ತಾಯಿಸಿದರು. ಅದಕ್ಕೆ ಹನಿ ಸಿಂಗ್, ‘ಮುಂದಿನ ದಿನಗಳಲ್ಲಿ ಕನ್ನಡದಲ್ಲಿಯೂ ಹಾಡು ಹಾಡುವುದಾಗಿ’ ಹೇಳಿದರು.

ಇದನ್ನೂ ಓದಿ:ಮೂವರ ಸ್ಫೋಟಕ ಅರ್ಧಶತಕ… ಪಂದ್ಯಶ್ರೇಷ್ಠ ಪ್ರಶಸ್ತಿ ಸಿಕ್ಕಿದ್ದು ಬೌಲರ್​ಗೆ..!

ನಟ ಯಶ್, ಅವರು ಹನಿ ಸಿಂಗ್ ಕಾನ್ಸರ್ಟ್​ಗೆ ಬಂದಿದ್ದು ಅಲ್ಲಿ ನೆರೆದಿದ್ದವರಿಗೆ ಅಚ್ಚರಿ ಮೂಡಿಸಿತು. ಯಶ್, ಹನಿ ಸಿಂಗ್ ಕಾನ್ಸರ್ಟ್​ನಲ್ಲಿ ಭಾಗಿ ಆಗುತ್ತಾರೆ ಎಂಬ ಯಾವುದೇ ಮುನ್ಸೂಚನೆ ಇರಲಿಲ್ಲ. ಈಗ ಯಶ್, ಅವರು ಹನಿಸಿಂಗ್ ಅವರ ಕಾನ್ಸರ್ಟ್​ಗೆ ನ ವೇದಿಕೆಗೆ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಹಿಂದಿ ಹಾಡುಗಳ ಕಾನ್ಸರ್ಟ್​ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಮಾತ್ರವಲ್ಲದೆ, ಗಾಯಕನನ್ನು ಕನ್ನಡದ ಹಾಡುಗಳನ್ನು ಹಾಡಿ ಎಂದು ಒತ್ತಾಯಿಸಿರುವ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಹನಿ ಸಿಂಗ್ ಸಹ ತಮ್ಮ ಇನ್​ಸ್ಟಾಗ್ರಾಂನಲ್ಲಿ ಯಶ್​ ಅವರ ಚಿತ್ರ, ವಿಡಿಯೋಗಳನ್ನು ಹಂಚಿಕೊಂಡಿದ್ದು, ‘ನನ್ನ ಬೆಂಗಳೂರು ಕಾನ್ಸರ್ಟ್​ಗೆ ಬಂದು ಹರಸಿದ್ದಕ್ಕೆ ನನ್ನ ಸಹೋದರ ಯಶ್​ಗೆ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ. ಈ ಹಿಂದೆ ದಿಲ್ಜೀತ್ ದೊಸ್ಸಾಂಜ್ ಬೆಂಗಳೂರಿನಲ್ಲಿ ಲೈವ್ ಕಾನ್ಸರ್ಟ್ ಮಾಡಿದಾಗ ದೀಪಿಕಾ ಪಡುಕೋಣೆಯನ್ನು ಸರ್ಪ್ರೈಸ್ ಅತಿಥಿಯಾಗಿ ಕರೆಸಿದ್ದರು. ದೀಪಿಕಾ ಸಹ ಅಂದು ದಿಲ್ಜೀತ್​ಗೆ ಕೆಲ ಕನ್ನಡ ಪದಗಳನ್ನು ಹೇಳಿಕೊಟ್ಟಿದ್ದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ