Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೈದರಾಬಾದ್​ನಲ್ಲಿ ಶಿವಣ್ಣ, ಪೆದ್ದಮ್ಮ ದೇವಾಲಯಕ್ಕೆ ಭೇಟಿ

Shiva Rajkumar: ಶಿವರಾಜ್ ಕುಮಾರ್ ಅವರು ಹೈದರಾಬಾದ್​ನಲ್ಲಿದ್ದಾರೆ. ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಶಿವಣ್ಣ ಹೈದರಾಬಾದ್​ಗೆ ಹೋಗಿದ್ದು ಅಲ್ಲಿ ಪೆದ್ದಮ್ಮ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಶಿವಣ್ಣ ಹೈದರಾಬಾದ್​ಗೆ ಹೋದಾಗಲೆಲ್ಲ ಪೆದ್ದಮ್ಮ ದೇವಾಲಯಕ್ಕೆ ಭೇಟಿ ನೀಡುವ ಪದ್ಧತಿ ಇಟ್ಟುಕೊಂಡಿದ್ದಾರೆ. ತೆಲುಗು ಸಿನಿಮಾ ಚಿತ್ರೀಕರಣಕ್ಕೆ ತೆರಳುವ ಮೊದಲು ಪೆದ್ದಮ್ಮ ದೇವಿಯ ಆಶೀರ್ವಾದ ಪಡೆದಿದ್ದಾರೆ ನಟ.

ಹೈದರಾಬಾದ್​ನಲ್ಲಿ ಶಿವಣ್ಣ, ಪೆದ್ದಮ್ಮ ದೇವಾಲಯಕ್ಕೆ ಭೇಟಿ
Shiva Rajkumar
Follow us
ಮಂಜುನಾಥ ಸಿ.
|

Updated on:Mar 23, 2025 | 12:15 PM

ಶಿವರಾಜ್ ಕುಮಾರ್ (Shiva Rajkumar) ಅವರು ಮತ್ತೆ ಸಿನಿಮಾ, ಪ್ರವಾಸ ಇನ್ನಿತರೆಗಳಲ್ಲಿ ಸಕ್ರಿಯಗೊಂಡಿದ್ದಾ. ಅನಾರೋಗ್ಯ, ಚಿಕಿತ್ಸೆ, ವಿಶ್ರಾಂತಿಗಾಗಿ ಸುಮಾರು ಮೂರು ತಿಂಗಳು ಕಳೆದ ಶಿವಣ್ಣ ಈಗ ಗುಣಮುಖರಾಗಿ ಮತ್ತೆ ಸಿನಿಮಾ ಚಿತ್ರೀಕರಣಗಳಲ್ಲಿ ತೊಡಗಿಕೊಂಡಿದ್ದಾರೆ. ಶಿವಣ್ಣ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಪ್ರಾರಂಭವಾಗಿ ಈಗಾಗಲೇ ಕೆಲ ವಾರಗಳಾಗಿವೆ. ಶಿವಣ್ಣ ಒಪ್ಪಿಕೊಂಡಿದ್ದ ತೆಲುಗು ಸಿನಿಮಾದ ನಿರ್ದೇಶಕರು ಸಹ ಮನೆಗೆ ಬಂದು ಶಿವಣ್ಣನ ಲುಕ್ ಟೆಸ್ಟ್ ಮಾಡಿ, ಓಕೆ ಮಾಡಿದ್ದರು. ಇದೀಗ ಇದೇ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಕೊಳ್ಳಲು ಶಿವಣ್ಣ ಹೈದರಾಬಾದ್​ಗೆ ತೆರಳಿದ್ದರು.

ರಾಮ್ ಚರಣ್, ಜಾನ್ಹಿವ ಕಪೂರ್ ನಟಿಸುತ್ತಿರುವ ಹೊಸ ಸಿನಿಮಾನಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಶಿವಣ್ಣ ಇದೀಗ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲೆಂದು ಹೈದರಾಬಾದ್​ಗೆ ಶಿವಣ್ಣ ತೆರಳಿದ್ದು, ಹೈದರಾಬಾದ್​ನ ಜ್ಯೂಬ್ಲ ಹಿಲ್ಸ್​​ ನಲ್ಲಿ ಪೆದ್ದಮ್ಮ ದೇವಾಲಯಕ್ಕೆ ಈ ಸಂದರ್ಭದಲ್ಲಿ ಭೇಟಿ ನೀಡಿದ್ದರು.

ಶಿವರಾಜ್ ಕುಮಾರ್ ಅವರು ಹೈದರಾಬಾದ್​ಗೆ ಹೋದಾಗಲೆಲ್ಲ ಪೆದ್ದಮ್ಮ ದೇವಾಲಯಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಹಿಂದೆ ಸಹ ಬೇರೊಂದು ಸಿನಿಮಾ ಕಾರ್ಯಕ್ರಮಕ್ಕಾಗಿ ಹೈದರಾಬಾದ್​ಗೆ ಹೋಗಿದ್ದಾಗ ಶಿವಣ್ಣ ಪೆದ್ದಮ್ಮೆ ದೇವಾಲಯಕ್ಕೆ ಭೇಟಿ ನೀಡಿದ್ದರು. ನಿನ್ನೆಯೂ ಸಹ ಶಿವಣ್ಣ ಅದೇ ದೇವಾಲಯಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಈ ವೇಳೆ ಅವರನ್ನು ಅಲ್ಲಿನ ಅಭಿಮಾನಿಗಳು ಮುತ್ತಿಕೊಂಡರು. ಹಲವಾರು ತೆಲುಗು ರಾಜ್ಯದ ಸಿನಿಮಾ ಪ್ರೇಮಿಗಳು ಶಿವರಾಜ್ ಕುಮಾರ್ ಅವರ ಜೊತೆಗೆ ಚಿತ್ರ ತೆಗೆಸಿಕೊಂಡಿದ್ದಾರೆ. ಶಿವಣ್ಣ, ಪೆದ್ದಮ್ಮ ದೇವಾಲಯಕ್ಕೆ ಭೇಟಿ ನೀಡಿದ ವಿಡಿಯೋ, ಚಿತ್ರಗಳು, ತೆಲುಗು ಮಾಧ್ಯಮಗಳಲ್ಲಿ ಸುದ್ದಿಯಾಗಿ ಹರಿದಾಡಿವೆ.

ಇದನ್ನೂ ಓದಿ:ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ: ಅಭಿಮಾನಿಗಳಿಂದ ವಿಶೇಷ ಪೂಜೆ

ರಾಮ್ ಚರಣ್, ಜಾನ್ಹವಿ ಸಿನಿಮಾ ಅನ್ನು ಬುಚ್ಚಿಬಾಬು ಸನಾ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಕ್ರಿಕೆಟ್ ಕುರಿತಾದ ಕತೆ ಹೊಂದಿರುವ ಸಿನಿಮಾ ಎನ್ನಲಾಗುತ್ತಿದೆ. ಸಿನಿಮಾದಲ್ಲಿ ಶಿವಣ್ಣ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಎಂಎಸ್ ಧೋನಿ, ರಾಮ್ ಚರಣ್ ಅವರ ಕೋಚ್​ನ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಚಿತ್ರೀಕರಣ ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈಗ ಹೈದರಾಬಾದ್​ನಲ್ಲಿ ಚಿತ್ರೀಕರಣ ಮುಂದುವರೆಯುತ್ತಿದೆ.

ಶಿವರಾಜ್ ಕುಮಾರ್ ಅವರು ಹಲವಾರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅವರ ನಟನೆಯ ‘45’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. 131ನೇ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಅದು ಮುಗಿಯುತ್ತಿದ್ದಂತೆ ‘ಭೈರವನ ಕೊನೆ ಪಾಠ’ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ಇದರ ಜೊತೆಗೆ ತಮಿಳಿನಲ್ಲಿ ಸೋಲೋ ಹೀರೋ ಸಿನಿಮಾ ಒಂದರಲ್ಲಿ ಶಿವಣ್ಣ ನಟಿಸಲಿದ್ದಾರೆ. ‘ಜೈಲರ್ 2’ ಸಿನಿಮಾದಲ್ಲಿಯೂ ಶಿವಣ್ಣ ನಟಿಸಲಿದ್ದಾರೆ. ದಿನಕರ್ ತೂಗುದೀಪ್ ನಿರ್ದೇಶನದ ಸಿನಿಮಾದಲ್ಲಿಯು ಶಿವಣ್ಣ ನಟನೆ ಮಾಡಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:15 pm, Sun, 23 March 25

ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ಹೇಳಿದ ಸತ್ಯವನ್ನು ಬಿಜೆಪಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ: ಶಿವಕುಮಾರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ರಾಜಣ್ಣ ನನಗೆ ದೂರು ನೀಡಲು ಬರಲ್ಲ, ಪೊಲೀಸ್ ಠಾಣೆಗೆ ನೀಡಬೇಕು: ಪರಮೇಶ್ವರ್
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಶಿವಕುಮಾರ್ ತಮಿಳುನಾಡುನಿಂದ ಒಪ್ಪಿಗೆ ತಂದರೆಂದು ಭಾವಿಸಿದ್ದೆ: ಸಿಟಿ ರವಿ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಮೀಸಲಾತಿ ಕುರಿತು ನಿತೀಶ್ ಕುಮಾರ್, ರಾಬ್ರಿ ದೇವಿ ನಡುವೆ ತೀವ್ರ ವಾಗ್ವಾದ
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ಹನಿಟ್ರ್ಯಾಪ್​: ರಾಜಣ್ಣ, ಪರಮೇಶ್ವರ್​ ದಿಢೀರ್ ಜಂಟಿ ಸುದ್ದಿಗೋಷ್ಠಿ ಲೈವ್​
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ವಿನಯ್-ರಜತ್ ಅವರ ಮಹಜರಿಗೆ ಕರೆತಂದ ಪೊಲೀಸರು: ವಿಡಿಯೋ
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಕೇವಲ ಒಬ್ಬ ಕಾರ್ಯಕರ್ತನ ಹಿಂದೆ ಹತ್ತಾರು ಪೊಲೀಸರು!
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ಹನಿಟ್ರ್ಯಾಪ್‌ನಲ್ಲಿ ನನ್ನದೂ ತಪ್ಪಿದೆ ಎಂದಿದ್ಯಾಕೆ ರಾಜಣ್ಣ..?
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ರಾಜಣ್ಣ ದೂರು ನೀಡಿದರೆ ಸರ್ಕಾರ ತನಿಖೆ ಮಾಡಿಸಲು ಸಿದ್ಧವಿದೆ: ಚಲುವರಾಯಸ್ವಾಮಿ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ
ಲಾಂಗ್ ಹಿಡಿದ ಪ್ರಕರಣ: ಮತ್ತೆ ಪೊಲೀಸ್ ಠಾಣೆಗೆ ರಜತ್, ವಿನಯ್ ಗೌಡ ಅಲೆದಾಟ