ಯಶ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್

|

Updated on: Jan 05, 2024 | 7:01 PM

Yash: ಜನವರಿ 8ರಂದು ನಟ ಯಶ್ ಹುಟ್ಟುಹಬ್ಬ, ಇದೇ ಸಂದರ್ಭದಲ್ಲಿ ಯಶ್​ರ ಹುಟ್ಟುಹಬ್ಬದ ಕಾಮನ್ ಡಿಪಿಯನ್ನು ನಟ ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ.

ಯಶ್ ಹುಟ್ಟುಹಬ್ಬದ ಕಾಮನ್ ಡಿಪಿ ಬಿಡುಗಡೆ ಮಾಡಿದ ಶಿವರಾಜ್ ಕುಮಾರ್
Follow us on

ರಾಕಿಂಗ್ ಸ್ಟಾರ್ ಯಶ್ (Yash) ಅವರ ಹುಟ್ಟುಹಬ್ಬವನ್ನು ಜನವರಿ 8ಕ್ಕೆ ಅದ್ಧೂರಿಯಾಗಿ ಆಚರಿಸಲು ಅಭಿಮಾನಿಗಳು ನಿರೀಕ್ಷೆಯಿಂದಿದ್ದರು. ಆದರೆ ನಿನ್ನೆಯಷ್ಟೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಯಶ್, ಈ ವರ್ಷವೂ ತಾವು ಹುಟ್ಟುಹಬ್ಬದಂದು ಲಭ್ಯವಿರುವುದಿಲ್ಲ ಎಂದಿದ್ದಾರೆ. ಆದರೆ ಅಭಿಮಾನಿಗಳ ಜೋಷ್ ಕಡಿಮೆ ಏನೂ ಆಗಿಲ್ಲ. ಹಿಂದಿನ ಕೆಲ ವರ್ಷಗಳಂತೆ ಯಶ್ ಅನುಪಸ್ಥಿತಿಯಲ್ಲಿಯೂ ಅವರ ಹುಟ್ಟುಹಬ್ಬವನ್ನು ಆಚರಿಸಲು ಸಿದ್ಧವಾಗಿದ್ದು, ಕಾಮನ್ ಡಿಪಿಯನ್ನು ಇಂದು ಅನಾವರಣ ಮಾಡಲಾಗಿದೆ.

ಯಶ್​ರನ್ನು ಸಹೋದರ ಸಮಾನರಂತೆ ಕಾಣುವ ನಟ ಶಿವರಾಜ್ ಕುಮಾರ್ ಅವರು ಯಶ್​ರ ಹುಟ್ಟುಹಬ್ಬಕ್ಕೆ ವಿಶೇಷ ಸಿಡಿಪಿ (ಕಾಮನ್ ಡಿಪಿ) ಬಿಡುಗಡೆ ಮಾಡಿದ್ದಾರೆ. ‘ಕೆಜಿಎಫ್’ ಸಿನಿಮಾದ ರಾಕಿಭಾಯ್ ಪಾತ್ರವನ್ನು ಸಿಡಿಪಿಯಲ್ಲಿ ಬಳಸಿಕೊಳ್ಳಲಾಗಿದೆ. ಸ್ಟೈಲ್ ಆಗಿ ಕಾರಿನ ಮೇಲೆ ಕೂತು, ಸಿಗರೇಟು ಸೇದುತ್ತಿರುವ ಯಶ್ ಚಿತ್ರವನ್ನು ಸಿಡಿಪಿ ಒಳಗೊಂಡಿದೆ. ಹಿಂಬದಿಯಲ್ಲಿ ಅಭಿಮಾನಿಗಳು ಸಂಭ್ರಮಿಸುತ್ತಿರುವ ಚಿತ್ರವೂ ಇದೆ. ‘ಟಾಕ್ಸಿಕ್’ ಪೋಸ್ಟರ್​ನಲ್ಲಿ ಯಶ್​ರ ಕೈಯಲ್ಲಿರುವ ಬಂದೂಕಿನ ಮಾದರಿಯ ಹಲವು ಬಂದೂಕುಗಳು ಸಿಡಿಪಿಯಲ್ಲಿ ಇವೆ. ಯಶ್​ರ ಈ ಸಿಡಿಪಿ ಬಿಡುಗಡೆ ಮಾಡಿರುವ ನಟ ಶಿವರಾಜ್ ಕುಮಾರ್, ‘ಯಶ್ ಹಾಗೂ ಅವರ ಎಲ್ಲಾ ಅಭಿಮಾನಿಗಳಿಗೂ ಶುಭಾಶಯಗಳು. ಸಿಡಿಪಿ ತುಂಬಾ ಚೆನ್ನಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಈ ಬಾರಿಯೂ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಕೈಗೆ ಸಿಗಲ್ಲ ಯಶ್

ಯಶ್​ರ ಈ ಸಿಡಿಪಿಯನ್ನು ಯಶ್​ರ ಅಭಿಮಾನಿಗಳೆಲ್ಲರೂ ಜನವರಿ 8ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಿದ್ದಾರೆ. ಆ ಮೂಲಕ ಯಶ್​ರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಲಿದ್ದಾರೆ. ಇದೇ ಸಿಡಿಪಿಯನ್ನೇ ಫ್ಲೆಕ್ಸ್​ಗಳಲ್ಲಿಯೂ ಅಭಿಮಾನಿಗಳು ಬಳಸಲಿದ್ದಾರೆ. ಯಾವುದೇ ನಟನ ಹುಟ್ಟುಹಬ್ಬಕ್ಕೆ ಈ ರೀತಿ ಸಿಡಿಪಿ ಬಿಡುಗಡೆ ಮಾಡುವ ಅದನ್ನು ಅಭಿಮಾನಿಗಳೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ.

ಜನವರಿ 8 ರಂದು ಯಶ್​ರ ಹುಟ್ಟುಹಬ್ಬ. ಯಶ್ ಪ್ರಸ್ತುತ ‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಕಾರಣ, ಅಂದು ತಾವು ಲಭ್ಯವಿರುವುದಿಲ್ಲ ಎಂದು ಹೇಳಿದ್ದಾರೆ. ಆದರೂ ಸಹ ಯಶ್​ರ ಅಭಿಮಾನಿಗಳು, ತಮ್ಮ ಮೆಚ್ಚಿನ ನಟನ ಹುಟ್ಟುಹಬ್ಬದ ಸಂದರ್ಭ ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಾರೆ.

ಸಿನಿಮಾ ಸುದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:01 pm, Fri, 5 January 24