Yash: ವಿಜಯ್​ನ ಮಗುವಂತೆ ಸಂತೈಸಿದ ರಾಕಿಂಗ್ ಸ್ಟಾರ್ ಯಶ್; ಇಲ್ಲಿದೆ ಭಾವುಕ ಕ್ಷಣ

| Updated By: ರಾಜೇಶ್ ದುಗ್ಗುಮನೆ

Updated on: Aug 09, 2023 | 12:36 PM

ಯಶ್ ಹಾಗೂ ವಿಜಯ್ ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರು ಭೇಟಿ ಆಗಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ಗೆಳೆಯನ ಸಂತೈಸಲು ಯಶ್ ಅವರು ಆಗಮಿಸಿದ್ದಾರೆ.

Yash: ವಿಜಯ್​ನ ಮಗುವಂತೆ ಸಂತೈಸಿದ ರಾಕಿಂಗ್ ಸ್ಟಾರ್ ಯಶ್; ಇಲ್ಲಿದೆ ಭಾವುಕ ಕ್ಷಣ
ಯಶ್-ವಿಜಯ್
Follow us on

ಸ್ಪಂದನಾ ಅವರನ್ನು ಕಳೆದುಕೊಂಡು ವಿಜಯ್ ರಾಘವೇಂದ್ರ (Vijay Raghavendra) ಅವರು ಕುಗ್ಗಿದ್ದಾರೆ. ಅವರ ಮನಸ್ಸಲ್ಲಿ ನೋವು ತುಂಬಿದೆ. ವಿಜಯ್ ಅವರನ್ನು ಎಲ್ಲರೂ ಸಮಾಧಾನ ಪಡಿಸುತ್ತಿದ್ದಾರೆ. ಯಶ್ ಆಗಮಿಸಿ ವಿಜಯ್ ಅವರನ್ನು ಸಂತೈಸಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ವಿಜಯ್ ಅವರಿಗೆ ಯಶ್ ಅವರು ಧೈರ್ಯ ತುಂಬಿದ್ದಾರೆ. ಧೈರ್ಯದಿಂದ ಮುನ್ನಡೆಯುವಂತೆ ವಿಜಯ್ ಅವರನ್ನು ಹುರಿದುಂಬಿಸಿದ್ದಾರೆ. ಆಗಸ್ಟ್ 6ರ ರಾತ್ರಿ ಸ್ಪಂದನಾ (Spandana) ಮೃತಪಟ್ಟರು. ಇಂದು (ಆಗಸ್ಟ್​ 9) ಅವರ ಅಂತ್ಯಕ್ರಿಯೆ ಬೆಂಗಳೂರಿನ ಹರೀಶ್ಚಂದ್ರ ಘಾಟ್​​ನಲ್ಲಿ ನಡೆಯಲಿದೆ.

ಯಶ್ ಹಾಗೂ ವಿಜಯ್ ಇಬ್ಬರೂ ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅನೇಕ ಸಂದರ್ಭಗಳಲ್ಲಿ ಇವರು ಭೇಟಿ ಆಗಿದ್ದಾರೆ. ಈ ಕಾರಣಕ್ಕೆ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. ಈ ಕಾರಣಕ್ಕೆ ಗೆಳೆಯನ ಸಂತೈಸಲು ಯಶ್ ಅವರು ಆಗಮಿಸಿದ್ದಾರೆ. ಈ ವೇಳೆ ಅವರು ವಿಜಯ್ ಜೊತೆ ನಡೆದುಕೊಂಡ ರೀತಿಯ ಬಗ್ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.


ಯಶ್ ನೇರವಾಗಿ ಸ್ಪಂದನಾ ಪಾರ್ಥಿವ ಶರೀರ ಇಟ್ಟ ಜಾಗಕ್ಕೆ ಆಗಮಿಸಿದರು. ಅಲ್ಲಿ ಕೈ ಮುಗಿದು ಅವರು ವಿಜಯ್ ರಾಘವೇಂದ್ರ ಬಳಿ ತೆರಳಿದರು. ಅಲ್ಲಿ ವಿಜಯ್​​ನ ತಬ್ಬಿ ಸಂತೈಸಿದರು. ವಿಜಯ್​ಗೆ ಧೈರ್ಯ ತುಂಬುವ ಕೆಲಸವನ್ನು ಮಾಡಿದರು. ಬಳಿಕ ಅಲ್ಲಿಂದ ನಡೆದರು.

ಇದನ್ನೂ ಓದಿ: ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್​ನ ಮೀರಿಸಿದ ಆಯ್ರಾ ಯಶ್

ಯಶ್ ಅವರ 19ನೇ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಆದರೆ, ಇಲ್ಲಿಯವರೆಗೆ ಅವರ ಹೊಸ ಸಿನಿಮಾ ಯಾವುದು ಎಂಬುದು ಇಲ್ಲಿಯವರೆಗೆ ಘೋಷಣೆ ಆಗಿಲ್ಲ. ಕಳೆದ ಒಂದೂವರೆ ವರ್ಷಗಳಿಂದ ಈ ಸಿನಿಮಾ ಕೆಲಸದ ಮೇಲೆ ಅವರು ತಮ್ಮ ಗಮನವನ್ನು ಕೇಂದ್ರೀಕರಿಸಿದ್ದಾರೆ. ಶೀಘ್ರವೇ ಈ ಬಗ್ಗೆ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ