Radhika Pandit: ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್​ನ ಮೀರಿಸಿದ ಆಯ್ರಾ ಯಶ್

ರಾಧಿಕಾ ಪಂಡಿತ್ ಅವರು ಗಲ್ಲದ ಮೇಲೆ ಕೈ ಇಟ್ಟುಕೊಂಡು ಪೋಸ್ ನೀಡಿದ್ದಾರೆ. ಆಯ್ರಾ ಕೂಡ ಇದೇ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾಳೆ.

Radhika Pandit: ಪೋಸ್ ಕೊಡೋದ್ರಲ್ಲಿ ರಾಧಿಕಾ ಪಂಡಿತ್​ನ ಮೀರಿಸಿದ ಆಯ್ರಾ ಯಶ್
ರಾಧಿಕಾ-ಆಯ್ರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Aug 03, 2023 | 12:51 PM

ಸೆಲೆಬ್ರಿಟಿಗಳ ಮಕ್ಕಳ ಮೇಲೆ ಸಹಜವಾಗಿಯೇ ಎಲ್ಲರ ಗಮನ ಇರುತ್ತದೆ. ನೆಚ್ಚಿನ ನಟ/ನಟಿ ಮಕ್ಕಳು ಏನು ಮಾಡುತ್ತಾರೆ? ಅವರ ಇಷ್ಟ ಏನು? ಅವರ ವಯಸ್ಸೆಷ್ಟು ಎಂಬಿತ್ಯಾದಿ ವಿಚಾರಗಳ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಇರುತ್ತದೆ. ಈ ಕಾರಣದಿಂದಲೇ ನಟಿ ರಾಧಿಕಾ ಪಂಡಿತ್ (Radhika Pandit) ಅವರು ಮಕ್ಕಳ ಫೋಟೋಗಳನ್ನು ಹಂಚಿಕೊಳ್ಳುತ್ತಾ ಇರುತ್ತಾರೆ. ಈಗ ಅವರು ಮಗಳು ಆಯ್ರಾ (Ayra Yash) ಜೊತೆ ಇರುವ ಫೋಟೋ ಹಂಚಿಕೊಂಡಿದ್ದಾರೆ. ಈ ಕ್ಯೂಟ್ ಫೋಟೋ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅಭಿಮಾನಿಗಳಿಗೆ ಈ ಫೋಟೋ ಸಾಕಷ್ಟು ಇಷ್ಟವಾಗಿದೆ.

ಆಯ್ರಾ ಯಶ್​ಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವಳಿಗಿನ್ನೂ ಸಣ್ಣ ವಯಸ್ಸು. ಹಾಗಿದ್ದರೂ ಆಗಲೇ ಆಯ್ರಾ ದೊಡ್ಡ ಮಟ್ಟದ ಜನಪ್ರಿಯತೆ ಪಡೆದಿದ್ದಾಳೆ. ರಾಧಿಕಾ ಹಾಗೂ ಯಶ್ ಇಬ್ಬರೂ ಮಕ್ಕಳ ವಿಡಿಯೋ, ಫೋಟೋ ಹಂಚಿಕೊಳ್ಳುತ್ತಾ ಇರುತ್ತಾರೆ. ಈ ಕಾರಣದಿಂದಲೂ ಆಯ್ರಾಗೆ ಸಿಕ್ಕಾಪಟ್ಟೆ ಜನಪ್ರಿಯತೆ ಸಿಕ್ಕಿದೆ. ಈಗ ರಾಧಿಕಾ ಹಂಚಿಕೊಂಡಿರೋ ಫೋಟೋ ಗಮನ ಸೆಳೆಯುವಂತಿದೆ.

ರಾಧಿಕಾ ಪಂಡಿತ್ ಅವರು ಗಲ್ಲದ ಮೇಲೆ ಕೈ ಇಟ್ಟುಕೊಂಡು ಪೋಸ್ ನೀಡಿದ್ದಾರೆ. ಆಯ್ರಾ ಕೂಡ ಇದೇ ಮಾದರಿಯಲ್ಲಿ ಪೋಸ್ ಕೊಟ್ಟಿದ್ದಾಳೆ. ಪೋಸ್ ಕೊಡುವುದರಲ್ಲಿ ರಾಧಿಕಾ ಅವರನ್ನು ಆಯ್ರಾ ಮೀರಿಸಿದ್ದಾಳೆ. ಅವಳ ಕ್ಯೂಟ್​ನೆಸ್​ ಸಾಕಷ್ಟು ಜನರ ಗಮನ ಸೆಳೆದಿದೆ. ಈ ಫೋಟೋ ಪೋಸ್ಟ್ ಮಾಡಿದ ಗಂಟೆ ಒಳಗೆ ಲಕ್ಷ ಲೈಕ್ಸ್ ಪಡೆದಿದೆ. ಇದು ಆಯ್ರಾ ಜನಪ್ರಿಯತೆ ಎಷ್ಟಿದೆ ಎಂಬುದಕ್ಕೆ ಸಾಕ್ಷಿ.

ರಾಧಿಕಾ ಪಂಡಿತ್ ಹಂಚಿಕೊಂಡಿರುವ ಫೋಟೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸಿಕ್ಕಿದೆ. ವಿವಿಧ ರೀತಿಯ ಕಮೆಂಟ್​ಗಳು ಇದಕ್ಕೆ ಬಂದಿವೆ. ‘ಆಹಾ ಇಬ್ಬರೂ ಎಷ್ಟೊಂದು ಕ್ಯೂಟ್’ ಎಂದು ಕೆಲವರು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ‘ಅಮ್ಮ-ಮಗಳು ಒಂದೇ ರೀತಿ ಕಾಣುತ್ತಿದ್ದೀರಿ. ಆಯ್ರಾ ನೀವು ಅಮ್ಮನ ಮಗಳು’ ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಯಶ್ ಅವರ 19ನೇ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ.

ಇದನ್ನೂ ಓದಿ: ‘ರೈಟ್​ ಹ್ಯಾಂಡ್​​ನಲ್ಲಿ ಹಾಕಬೇಕು ಮಗಳೇ..’: ಮುದ್ದಿನ ಪುತ್ರಿ ಆಯ್ರಾಗೆ ಯಶ್​ ಬುದ್ಧಿಮಾತು

ಆಯ್ರಾ ಹಾಗೂ ಯಥರ್ವ್ ಜನಿಸಿದ ಬಳಿಕ ರಾಧಿಕಾ ಪಂಡಿತ್​ ಕುಟುಂಬದ ಆರೈಕೆಯಲ್ಲಿ ಬ್ಯುಸಿ ಆಗಿಬಿಟ್ಟರು. ಅವರು ಮತ್ತೆ ನಟನೆಗೆ ಕಂಬ್ಯಾಕ್ ಮಾಡಲೇ ಇಲ್ಲ. ಸದ್ಯ ಅವರು ಪತಿಯ ವೃತ್ತಿಜೀವನಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇನ್ನು ಯಶ್ ಅವರು ತಮ್ಮ 19ನೇ ಸಿನಿಮಾ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದ ಬಗ್ಗೆ ಇನ್ನು ಯಾವುದೇ ಅಪ್​ಡೇಟ್ ಸಿಕ್ಕಿಲ್ಲ. ನಿತ್ಯ ಯಶ್ ಅವರು ಈ ಚಿತ್ರದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ದೊಡ್ಡ ಮಟ್ಟದಲ್ಲಿ ಈ ಚಿತ್ರ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಆದರೆ, ಈವರೆಗೂ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಲೀಕ್ ಆಗಿಲ್ಲ. ರಾಧಿಕಾ ಕೂಡ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಲಿ ಎಂಬುದು ಫ್ಯಾನ್ಸ್ ಕೋರಿಕೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:50 pm, Thu, 3 August 23