Yash: ‘ರಾಮಾಯಣ’ ಚಿತ್ರಕ್ಕೆ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ ಯಶ್?

| Updated By: ರಾಜೇಶ್ ದುಗ್ಗುಮನೆ

Updated on: Apr 10, 2024 | 7:55 AM

ಯಶ್ ಅವರು ಪ್ರತಿ ಚಿತ್ರಕ್ಕೆ ಸಂಭಾವನೆ ಫಿಕ್ಸ್ ಮಾಡಿ, ಅದನ್ನು ಪಡೆಯುತ್ತಿದ್ದರು. ಸಿನಿಮಾ ಹಿಟ್ ಆಗಲಿ ಸೋಲು ಕಾಣಲಿ ಅವರು ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿರಲಿಲ್ಲ. ಆದರೆ, ಈಗ ಅವರ ಸ್ಟಾರ್​ಡಂ ಹೆಚ್ಚಾಗಿದೆ. ಈ ಕಾರಣದಿಂದಲೇ ಯಶ್ ‘ರಾಮಾಯಣ’ ಸಿನಿಮಾ ಜೊತೆ ಬೇರೆಯದೇ ರೀತಿಯ ಡೀಲ್ ಮಾಡಿಕೊಂಡಿದ್ದಾರೆ.

Yash: ‘ರಾಮಾಯಣ’ ಚಿತ್ರಕ್ಕೆ ಸಂಭಾವನೆ ಬದಲು ಬೇರೆಯದ್ದನ್ನೇ ಕೇಳಿದ ಯಶ್?
ಯಶ್
Follow us on

ರಾಕಿಂಗ್ ಸ್ಟಾರ್ ಯಶ್ (Yash) ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ಅವರು ಪ್ಯಾನ್ ಇಂಡಿಯಾ ಹೀರೋ ಆಗಿದ್ದಾರೆ. ಅವರ ಬಗ್ಗೆ ನಿತ್ಯ ಹೊಸ ಹೊಸ ಸುದ್ದಿಗಳು ಹರಿದಾಡುತ್ತಾ ಇವೆ. ‘ಕೆಜಿಎಫ್ 2’ ಸಿನಿಮಾ ಬಳಿಕ ಅವರು ‘ಟಾಕ್ಸಿಕ್’ ಸಿನಿಮಾ ಶೂಟ್​ನಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದು ಕುಳಿತಿದ್ದಾರೆ. ಮುಂದಿನ ವರ್ಷ ಏಪ್ರಿಲ್​ ತಿಂಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಈ ಮಧ್ಯೆ ಅವರ ನಟನೆಯ ‘ರಾಮಾಯಣ’ ಸಿನಿಮಾ ಬಗ್ಗೆ ಹೊಸ ಅಪ್​ಡೇಟ್ ಒಂದು ಕೇಳಿ ಬಂದಿದೆ. ಈ ಚಿತ್ರಕ್ಕಾಗಿ ಅವರು ಸಂಭಾವನೆ ಪಡೆಯದೇ ಇರಲು ನಿರ್ಧರಿಸಿದ್ದಾರೆ. ಇದರ ಬದಲು ಅವರು ನಿರ್ಮಾಪಕರಾಗುತ್ತಿದ್ದಾರೆ!

ಇಷ್ಟು ವರ್ಷಗಳ ಕಾಲ ಯಶ್ ಅವರು ಪ್ರತಿ ಚಿತ್ರಕ್ಕೆ ಸಂಭಾವನೆ ಫಿಕ್ಸ್ ಮಾಡಿ, ಅದನ್ನು ಪಡೆಯುತ್ತಿದ್ದರು. ಸಿನಿಮಾ ಹಿಟ್ ಆಗಲಿ ಸೋಲು ಕಾಣಲಿ ಅವರು ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿರಲಿಲ್ಲ. ಆದರೆ, ಈಗ ಅವರ ಸ್ಟಾರ್​ಡಂ ಹೆಚ್ಚಾಗಿದೆ. ಈ ಕಾರಣದಿಂದಲೇ ಯಶ್ ‘ರಾಮಾಯಣ’ ಸಿನಿಮಾ ಜೊತೆ ಬೇರೆಯದೇ ರೀತಿಯ ಡೀಲ್ ಮಾಡಿಕೊಂಡಿದ್ದಾರೆ. ಇದರಿಂದ ಅವರು ದೊಡ್ಡ ಮಟ್ಟದ ಲಾಭ ಕಾಣೋದು ಪಕ್ಕಾ ಎನ್ನಲಾಗುತ್ತಿದೆ.

‘ರಾಮಾಯಣ’ ಸಿನಿಮಾಗಾಗಿ ಯಶ್ ಅವರು 80 ಕೋಟಿ ರೂಪಾಯಿ ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನು ನಿರ್ಮಾಪಕರು ಕೊಡಲು ಒಪ್ಪಿದ್ದಾರೆ. ಯಶ್ ಸಂಭಾವನೆ ತೆಗೆದುಕೊಂಡಿಲ್ಲ. ಬದಲಿಗೆ ಆ 80 ಕೋಟಿ ರೂಪಾಯಿನ ಸಿನಿಮಾ ಮೇಲೆ ಹೂಡಿಕೆ ಮಾಡುವಂತೆ ಕೋರಿದ್ದಾರೆ. ಈ ಮೂಲಕ ಸಿನಿಮಾದ ನಿರ್ಮಾಪಕರಲ್ಲಿ ತಾವೂ ಒಬ್ಬರಾಗಿದ್ದಾರೆ. ಸಿನಿಮಾ ಗೆದ್ದು ಒಳ್ಳೆಯ ಗಳಿಕೆ ಮಾಡಿದರೆ ಲಾಭದಲ್ಲಿ ಅವರಿಗೆ ಪಾಲು ಸಿಗಲಿದೆ. ಇದು ಹೆಚ್ಚು ಲಾಭದಾಯಕವಾಗಿದೆ.

ರಣಬೀರ್ ಕಪೂರ್ ಅವರು ಈಗಾಗಲೇ ತಮ್ಮ ಪಾಲಿನ ಸಂಭಾವನೆಯನ್ನು ಜೇಬಿಗೆ ಇಳಿಸಿಕೊಂಡಿದ್ದಾರೆ. ಅವರು ಈ ಚಿತ್ರಕ್ಕಾಗಿ 75 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.  ಈ ಮೊದಲು ಅವರು ಪ್ರತಿ ಸಿನಿಮಾಗೆ 30-35 ಕೋಟಿ ರೂಪಾಯಿ ಪಡೆಯುತ್ತಿದ್ದರು. ಆದರೆ, ‘ರಾಮಾಯಣ’ ಚಿತ್ರಕ್ಕಾಗಿ ಅವರು ಡಬಲ್ ಸಂಭಾವನೆ ಪಡೆದಿದ್ದಾರೆ. ಸಾಯಿ ಪಲ್ಲವಿ ಅವರು 6 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗುತ್ತಿದೆ.

ಸಂಭಾವನೆಯನ್ನು ಸಿನಿಮಾ ಮೇಲೆ ಹೂಡಿಕೆ ಮಾಡಿ ನಂತರ ಲಾಭದಲ್ಲಿ ಪಾಲು ಪಡೆಯುವುದು ಹೊಸದೇನು ಅಲ್ಲ. ಈ ಮೊದಲು ‘ಬ್ರಹ್ಮಾಸ್ತ್ರ’ ಸಿನಿಮಾದಲ್ಲಿ ರಣಬೀರ್ ಕಪೂರ್ ಅವರು ಸಂಭಾವನೆಯನ್ನು ಸಿನಿಮಾ ಮೇಲೆ ಹೂಡಿಕೆ ಮಾಡಿದ್ದರು. ಸಿನಿಮಾ ಗೆದ್ದ ಬಳಿಕ ಬಂದ ಲಾಭದಲ್ಲಿ ಪಾಲು ಪಡೆದಿದ್ದರು. ಒಂದೊಮ್ಮೆ ಸಿನಿಮಾ ಸೋತರೆ ಕಡಿಮೆ ಹಣ ಸಿಗುತ್ತದೆ. ಸಿನಿಮಾ ಗೆದ್ದರೆ ಕಲಾವಿದರು ಲಾಭ ಕಾಣಲಿದ್ದಾರೆ.

ಇದನ್ನೂ ಓದಿ: 1970ರ ಕಥೆ; ಬೆಂಗಳೂರು, ಶ್ರೀಲಂಕಾದಲ್ಲಿ ಶೂಟಿಂಗ್​; ‘ಟಾಕ್ಸಿಕ್​’ ಬಗ್ಗೆ ಹಲವು ಗುಸುಗುಸು

ಅಂದಹಾಗೆ, ‘ರಾಮಾಯಣ’ ಸಿನಿಮಾಗೆ ಈಗಾಗಲೇ ಶೂಟಿಂಗ್ ಆರಂಭ ಆಗಿದೆ. ಮುಂಬೈನ ಸ್ಟುಡಿಯೋ ಒಂದರಲ್ಲಿ ದೊಡ್ಡ ಸೆಟ್ ಹಾಕಿ ಶೂಟ್ ಮಾಡಲಾಗುತ್ತಿದೆ. ಸೆಟ್​ನ ಫೋಟೋಗಳು ಲೀಕ್ ಆಗಿವೆ. ಇದು ಚಿತ್ರತಂಡವನ್ನು ಹೆಚ್ಚು ಅಪ್ಸೆಟ್ ಮಾಡಿದೆ. ನಿತೇಶ್ ತಿವಾರಿ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ