AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1970ರ ಕಥೆ; ಬೆಂಗಳೂರು, ಶ್ರೀಲಂಕಾದಲ್ಲಿ ಶೂಟಿಂಗ್​; ‘ಟಾಕ್ಸಿಕ್​’ ಬಗ್ಗೆ ಹಲವು ಗುಸುಗುಸು

‘ಟಾಕ್ಸಿಕ್​’ ಚಿತ್ರಕ್ಕೆ ಕಲಾವಿದರ ಆಯ್ಕೆ ನಡೆಯುತ್ತಿದೆ. ಯಶ್​ ಜತೆ ಯಾರೆಲ್ಲ ನಟಿಸಲಿದ್ದಾರೆ ಎಂಬುದನ್ನು ತಿಳಿಯಲು ಫ್ಯಾನ್ಸ್​ ಕಾದಿದ್ದಾರೆ. ‘ಟಾಕ್ಸಿಕ್​’ ಚಿತ್ರತಂಡದಿಂದ ಅಧಿಕೃತ ಘೋಷಣೆ ಆಗುವುದಕ್ಕೂ ಮೊದಲೇ ಕೆಲವು ನಟಿಯರ ಹೆಸರು ಹರಿದಾಡುತ್ತಿವೆ. ಇನ್ನು, ಶೂಟಿಂಗ್​ ಯಾವಾಗ, ಎಲ್ಲಿ ಆರಂಭ ಆಗಲಿದೆ ಎಂಬ ಬಗ್ಗೆಯೂ ಕೆಲವು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟ ಆಗಿದೆ.

1970ರ ಕಥೆ; ಬೆಂಗಳೂರು, ಶ್ರೀಲಂಕಾದಲ್ಲಿ ಶೂಟಿಂಗ್​; ‘ಟಾಕ್ಸಿಕ್​’ ಬಗ್ಗೆ ಹಲವು ಗುಸುಗುಸು
ಯಶ್​, ಕರೀನಾ ಕಪೂರ್​ ಖಾನ್​, ಕಿಯಾರಾ ಅಡ್ವಾಣಿ
ಮದನ್​ ಕುಮಾರ್​
|

Updated on: Apr 02, 2024 | 10:44 PM

Share

ಬಹುನಿರೀಕ್ಷಿತ ‘ಟಾಕ್ಸಿಕ್​’ ಸಿನಿಮಾ (Toxic Movie) ಬಗ್ಗೆ ಪ್ರತಿದಿನವೂ ಒಂದಿಲ್ಲೊಂದು ಗಾಸಿಪ್ ಕೇಳಿಬರುತ್ತಲೇ ಇದೆ. ಈ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಮುಖ್ಯ ಪಾತ್ರದಲ್ಲಿ ಯಶ್​ (Yash) ನಟಿಸುತ್ತಾರೆ, ಗೀತು ಮೋಹನ್​ದಾಸ್​ ನಿರ್ದೇಶನ ಮಾಡ್ತಾರೆ, ‘ಕೆವಿಎನ್​ ಪ್ರೊಡಕ್ಷನ್ಸ್​’ ನಿರ್ಮಾಣ ಮಾಡಲಿದೆ ಎಂಬುದು ಬಿಟ್ಟರೆ ಬೇರೆ ಯಾವುದೇ ಮಾಹಿತಿ ಅಧಿಕೃತವಾಗಿಲ್ಲ. ಹಾಗಿದ್ದರೂ ಕೂಡ ಹಲವು ಬಗೆಯ ಗಾಳಿಸುದ್ದಿ ಹರಡಿದೆ. ಬೆಂಕಿ ಇಲ್ಲದೇ ಹೊಗೆ ಆಡುವುದಿಲ್ಲ ಎಂಬ ನಂಬಿಕೆಯ ಮೇಲೆ ಸಿನಿಪ್ರಿಯರು ಕೂಡ ಈ ಎಲ್ಲ ಸುದ್ದಿಗಳ ಮೇಲೆ ಕಣ್ಣು ಇಟ್ಟಿದ್ದಾರೆ. ‘ಟಾಕ್ಸಿಕ್​’ ಚಿತ್ರದ ಶೂಟಿಂಗ್ (Toxic Movie Shooting) ಬಗ್ಗೆ ಈಗ ಕೆಲವು ಗುಸುಗುಸು ಕೇಳಿಬಂದಿದೆ.

ಈಗಾಗಲೇ ‘ಟಾಕ್ಸಿಕ್​’ ತಂಡದವರು ಚಿತ್ರೀಕರಣಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, ಏಪ್ರಿಲ್​ 15ರಂದು ಈ ಸಿನಿಮಾದ ಚಿತ್ರೀಕರಣ ಆರಂಭ ಆಗಲಿದೆ. 1970ರ ಕಾಲಘಟ್ಟದ ಕಹಾನಿ ಈ ಸಿನಿಮಾದಲ್ಲಿ ಇರಲಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಸೆಟ್​ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಬೆಂಗಳೂರು, ಶ್ರೀಲಂಕಾ ಮುಂತಾದ ಕಡೆಗಳಲ್ಲಿ ‘ಟಾಕ್ಸಿಕ್​’ ಶೂಟಿಂಗ್ ನಡೆಯಲಿದೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.

ಇದನ್ನೂ ಓದಿ: ಪದೇ ಪದೇ ಪ್ರಶ್ನೆ ಕೇಳಿದವರಿಗೆ ಯಶ್​ ಉತ್ತರ; ಝಲಕ್ ತೋರಿಸಿದ ರಾಕಿ ಭಾಯ್​

‘ಟಾಕ್ಸಿಕ್​’ ಸಿನಿಮಾಗೆ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಯಶ್​ ಜೊತೆ ಯಾರೆಲ್ಲ ತೆರೆ ಹಂಚಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಚಿತ್ರತಂಡದಿಂದ ಅಧಿಕೃತವಾಗಿ ಘೋಷಣೆ ಆಗುವುದಕ್ಕೂ ಮುನ್ನವೇ ಕೆಲವು ನಟಿಯರ ಹೆಸರುಗಳು ಹರಿದಾಡುತ್ತಿವೆ. ಈ ಸಿನಿಮಾದಲ್ಲಿ ಕರೀನಾ ಕಪೂರ್​ ಖಾನ್​ ಅವರು ಯಶ್​ಗೆ ಸಹೋದರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಗಾಸಿಪ್​ ಹಬ್ಬಿದೆ.

ಇದನ್ನೂ ಓದಿ: ಹೊಸ ಸಿನಿಮಾದಲ್ಲಿ ಯಶ್​ಗೆ ಜೋಡಿ ಆಗ್ತಾರಾ 52 ವರ್ಷದ ನಟಿ ಸಾಕ್ಷಿ ತನ್ವರ್​?

ನಟಿ ಕಿಯಾರಾ ಅಡ್ವಾಣಿ ಕೂಡ ‘ಟಾಕ್ಸಿಕ್​’ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎಂಬ ಗಾಳಿಸುದ್ದಿ ಇದೆ. ಕಿಯಾರಾ ಅಡ್ವಾಣಿ ಅವರಿಗೆ ಬಾಲಿವುಡ್​ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೂ ಭಾರಿ ಬೇಡಿಕೆ ಇದೆ. ಆದರೆ ಅವರ ಆಯ್ಕೆಯ ಬಗ್ಗೆ ‘ಟಾಕ್ಸಿಕ್​’ ತಂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ‘ಕೆಜಿಎಫ್​: ಚಾಪ್ಟರ್ 2’ ಸಿನಿಮಾದ ಬಳಿಕ ಯಶ್​ ಅವರು ಒಪ್ಪಿಕೊಂಡ ಸಿನಿಮಾ ಎಂಬ ಕಾರಣದಿಂದ ‘ಟಾಕ್ಸಿಕ್​’ ಮೇಲೆ ಬೆಟ್ಟದಷ್ಟು ​ನಿರೀಕ್ಷೆ ಇದೆ. ಅದೇ ಕಾರಣಕ್ಕಾಗಿ ಹಲವು ಗಾಸಿಪ್​ಗಳು ಹುಟ್ಟಿಕೊಳ್ಳುತ್ತಿವೆ. ಗೋವಾದಲ್ಲಿ ನಡೆಯುವ ಡ್ರಗ್ಸ್​ ಮಾಫಿಯಾದ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗುವುದು ಎಂದು ಕೂಡ ಹೇಳಲಾಗುತ್ತಿದೆ. ಈ ಎಲ್ಲ ಅಂತೆ-ಕಂತೆಗಳಿಗೆ ಚಿತ್ರತಂಡ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಅಲ್ಮೋರಾದಲ್ಲಿ ಕಂದಕಕ್ಕೆ ಉರುಳಿದ ಬಸ್, 7 ಜನರ ದುರ್ಮರಣ
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ಆಭರಣದಂಗಡಿಗೆ ಕದಿಯಲೆಂದು ಹೋಗಿ ಫಜೀತಿಗೆ ಸಿಲುಕಿದ ಕಳ್ಳರು
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ನ್ಯಾಯ ಕೊಡಿಸಿ, ಇಲ್ಲದಿದ್ರೆ ಸಾಯ್ತೀನಿ: ಪತಿಗಾಗಿ ಪತ್ನಿ ಪ್ರೊಟೆಸ್ಟ್​​
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಿತ್ರದುರ್ಗದಲ್ಲೂ ಮೊಳಗಿದ ಜೆಸಿಬಿ ಗರ್ಜನೆ: ಗೂಡಂಗಡಿಗಳು ನೆಲಸಮ
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಚಳಿ ಎಂದು ಕ್ಯಾಬ್ ಚಾಲಕ ಕಾರಿನೊಳಗೆ ಮಾಡಿದ ಈ ತಪ್ಪಿನಿಂದ ಪ್ರಾಣವೇ ಹೋಯ್ತು
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಗಿಲ್ಲಿಯನ್ನು ಎದುರುಹಾಕಿಕೊಂಡಿದ್ದಕ್ಕೆ ಸತೀಶ್ ಪಾಡು ನೋಡಿ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ
ಮಾಳು ಎಲಿಮಿನೇಟ್ ಆಗಲು ರಕ್ಷಿತಾ ಕಾರಣ; ಕೇಳಿ ಬಂತು ಹೊಸ ಆರೋಪ