ಶಾಕಿಂಗ್ ಆಗಿತ್ತು ಪ್ರಭುದೇವ-ನಯನತಾರಾ ಲವ್ ಅಫೇರ್ ವಿಚಾರ; ಏನಿದು ಪ್ರಕರಣ?

1995ರಲ್ಲಿ ಪ್ರಭುದೇವ ಅವರು ರಾಮಲತಾ ಅವರನ್ನು ಮದುವೆ ಆದರು. ಅವರ ಮಗ ಕ್ಯಾನ್ಸರ್​ನಿಂದ ನಿಧನ ಹೊಂದಿದ. ಇದು ಪ್ರಭುದೇವ ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಕಾಡಿತ್ತು. ಲತಾ ಅವರನ್ನು ಮದುವೆ ಆದ ಹೊರತಾಗಿಯೂ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ.

ಶಾಕಿಂಗ್ ಆಗಿತ್ತು ಪ್ರಭುದೇವ-ನಯನತಾರಾ ಲವ್ ಅಫೇರ್ ವಿಚಾರ; ಏನಿದು ಪ್ರಕರಣ?
ಪ್ರಭುದೇವ-ನಯನತಾರಾ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Apr 03, 2024 | 7:39 AM

ಚಿತ್ರರಂಗದಲ್ಲಿ ಮದುವೆ, ವಿಚ್ಛೇದನ ಸಖತ್ ಕಾಮನ್. ಪತ್ನಿಯ ಜೊತೆ ಹಾಯಾಗಿ ಸಂಸಾರ ನಡೆಸುತ್ತಿರುವಾಗಲೇ ಲವ್​ ಅಫೇರ್ ಇಟ್ಟುಕೊಂಡ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಈ ಸಾಲಿನಲ್ಲಿ ಭಾರತದ ಮೈಕಲ್ ಜಾಕ್ಸನ್ (Michael Jackson) ಎಂದು ಫೇಮಸ್ ಆಗಿರೋ ಪ್ರಭುದೇವ ಕೂಡ ಇದ್ದಾರೆ. ಪ್ರಭುದೇವ ಡ್ಯಾನ್ಸಿಂಗ್ ಸ್ಕಿಲ್ ನೋಡಿ ಫಿದಾ ಆದವರ ಸಂಖ್ಯೆ ದೊಡ್ಡದಿದೆ. 90ರ ದಶಕದಲ್ಲಿ ಅವರನ್ನು ಎಲ್ಲರೂ ಮೈಕಲ್ ಜಾಕ್ಸನ್​ಗೆ ಹೋಲಿಕೆ ಮಾಡುತ್ತಿದ್ದರು. ಅವರ ಲವ್ ವಿಚಾರ ಅನೇಕರಿಗೆ ಶಾಕಿಂಗ್ ಎನಿಸಿದೆ.

ಪ್ರಭುದೇವ ಅವರಿಗೆ ಇಂದು (ಏಪ್ರಿಲ್ 3) ಬರ್ತ್​ಡೇ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಪ್ರಭುದೇವ ಅವರು ಸಾಕಷ್ಟು ಹಾಡುಗಳಿಗೆ ಡ್ಯಾನ್ಸ್ ಕೋರಿಯೋಗ್ರಫಿ ಮಾಡಿದ್ದಾರೆ. ಅವರು ‘ರೌಡಿ ರಾಥೋಡ್​’ ಸೇರಿ ಅನೇಕ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಅವರು ಕನ್ನಡದ ‘ಕರಟಕ ಧಮನಕ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅವರಿಗೆ ಶಿವರಾಜ್​ಕುಮಾರ್ ಜೊತೆ ಆಗಿದ್ದರು. ಪ್ರಭುದೇವ ಅವರು 2008ರಲ್ಲಿ ಲವ್​ ಅಫೇರ್ ವಿಚಾರಕ್ಕೆ ಸುದ್ದಿ ಆಗಿದ್ದರು.

1995ರಲ್ಲಿ ಪ್ರಭುದೇವ ಅವರು ರಾಮಲತಾ ಅವರನ್ನು ಮದುವೆ ಆದರು. ಈ ದಂಪತಿಗೆ ಓರ್ವ ಮಗ ಇದ್ದ. ಅವನಿಗೆ 13 ವರ್ಷ ಆಗಿತ್ತು. ಆಗಲೇ ಅವನು ಕ್ಯಾನ್ಸರ್​ನಿಂದ ನಿಧನ ಹೊಂದಿದ. ಇದು ಪ್ರಭುದೇವ ಅವರಿಗೆ ಭಾವನಾತ್ಮಕವಾಗಿ ಸಾಕಷ್ಟು ಕಾಡಿತ್ತು. ಲತಾ ಅವರನ್ನು ಮದುವೆ ಆದ ಹೊರತಾಗಿಯೂ ನಯನತಾರಾ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು ಪ್ರಭುದೇವ. ಇದನ್ನು ರಾಮಲತಾ ಅವರು ಸಹಿಸಿಲ್ಲ.

ಪ್ರಭುದೇವ ಹಾಗೂ ನಯನತಾರಾ ಪ್ರೀತಿ ವಿಚಾರ ಮದುವೆ ಹಂತಕ್ಕೆ ಹೋಗಿತ್ತು. ಆದರೆ, ಇದಕ್ಕೆ ರಾಮಲತಾ ಅವಕಾಶ ನೀಡಲೇ ಇಲ್ಲ. ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿತು. ರಾಮಲತಾ ಹಾಗೂ ಪ್ರಭುದೇವ ಮತ್ತೆ ಒಂದಾಗುವಂತೆ ಜಡ್ಜ್​ ಸೂಚಿಸಿದರು. ನಯನತಾರಾ ಅವರಿಂದ ದೂರವೇ ಇರಲು ಪ್ರಭುದೇವ ಅವರಿಗೆ ಸೂಚನೆ ನೀಡಾಯಿತು. ಹೀಗಿರುವಾಗಲೇ ನಯನತಾರಾ ಹಾಗೂ ಪ್ರಭುದೇವ ಮುದುವೆ ಆದರೆ ತಾವು ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಬೆದರಿಕೆ ಹಾಕಿದರು ರಾಮಲತಾ.

ಪ್ರಭುದೇವ ಅವರಿಂದ ನಯನತಾರಾ ದೂರ ಆದರು. ಇದೇ ವೇಳೆ ಪ್ರಭುದೇವ ಹಾಗೂ ರಾಮಲತಾ ವಿಚ್ಛೇದನ ಪಡೆದರು. ಇದರಿಂದ ಅವರು ಸಾಕಷ್ಟು ತೊಂದರೆ ಅನುಭವಿಸಿದರು. ಸದ್ಯ ಹಲವು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

ಇದನ್ನೂ ಓದಿ: ‘ಕರಟಕ ದಮನಕ’: ಪರಸ್ಪರರ ಬಗ್ಗೆ ಶಿವಣ್ಣ-ಪ್ರಭುದೇವ ಮಾತು

ಪ್ರಭುದೇವ ಅವರು 2020ರಲ್ಲಿ ಹಿಮಾನಿ ಸಿಂಗ್ ಅವರನ್ನು ಮದುವೆ ಆಗಿ ಎಲ್ಲರೂ ಎಚ್ಚರಿಗೊಂಡರು. ಈ ಮದುವೆ ಗುಟ್ಟಾಗಿ ನಡೆದಿತ್ತು. ಹಿಮಾನಿ ಅವರು ವೈದ್ಯೆ ಆಗಿದ್ದಾರೆ. ಅವರಿಗೆ ಇತ್ತೀಚೆಗೆ ಮಗು ಜನಿಸಿದೆ. ಪ್ರಭುದೇವ ಅವರು ದಳಪತಿ ವಿಜಯ್ ನಟನೆಯ ‘GOAT’ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ