‘ಕರಟಕ ದಮನಕ’: ಪರಸ್ಪರರ ಬಗ್ಗೆ ಶಿವಣ್ಣ-ಪ್ರಭುದೇವ ಮಾತು

Karataka Damanaka: ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಒಟ್ಟಿಗೆ ನಟಿಸಿ ಯೋಗರಾಜ್ ಭಟ್ ನಿರ್ದೇಶನ ಮಾಡಿರುವ ‘ಕರಟಕ ದಮನಕ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ಬಗ್ಗೆ ಶಿವಣ್ಣ ಹಾಗೂ ಪ್ರಭುದೇವ ಮಾತನಾಡಿದ್ದಾರೆ.

‘ಕರಟಕ ದಮನಕ’: ಪರಸ್ಪರರ ಬಗ್ಗೆ ಶಿವಣ್ಣ-ಪ್ರಭುದೇವ ಮಾತು
Karataka-Damanaka
Follow us
ಮಂಜುನಾಥ ಸಿ.
|

Updated on: Feb 23, 2024 | 11:13 PM

ಶಿವರಾಜ್ ಕುಮಾರ್ (Shiva Rajkumar) ಹಾಗೂ ಪ್ರಭುದೇವ (Prabhudeva) ನಟನೆಯ ‘ಕರಟಕ-ದಮನಕ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಯೋಗರಾಜ್ ಭಟ್ ನಿರ್ದೇಶನದ ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ‘ಕಾಟೇರ’ ಮೂಲಕ ಇತ್ತೀಚೆಗಷ್ಟೆ ಸೂಪರ್ ಹಿಟ್ ನೀಡಿರುವ ರಾಕ್​ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವ ಸಿನಿಮಾ ಇದು. ಸಿನಿಮಾ ತಂಡ ಪ್ರಚಾರ ಆರಂಭಿಸಿದ್ದು, ಇದೀಗ ಶಿವರಾಜ್ ಕುಮಾರ್ ಹಾಗೂ ಪ್ರಭುದೇವ ಇಬ್ಬರೂ ಸಹ ಪರಸ್ಪರರೊಟ್ಟಿಗೆ ಕೆಲಸ ಮಾಡಿದ ಅನುಭವ ಹಂಚಿಕೊಂಡಿದ್ದಾರೆ.

ಮೊದಲ ಬಾರಿ ಭಟ್ರು ಹಾಗೂ ಪ್ರಭುದೇವ ಜೊತೆ ಸಿನಿಮಾ ಮಾಡಿದ್ದೀನಿ ಇದು ಸಹಜವಾಗಿಯೇ ಖುಷಿ ಕೊಡುವ ವಿಚಾರ. ಸುಂದರಂ (ಪ್ರಭುದೇವ ತಂದೆ) ಸರ್ ಅಪ್ಪಾಜಿಗೆ ಡ್ಯಾನ್ಸ್ ಹೇಳಿಕೊಡುತ್ತಿದ್ದರು. ಈಗ ಅವರ ಮಗನ ಜೊತೆ ನಾನು ನಟಿಸಿದ್ದೀನಿ. ಪ್ರಭುದೇವ ಫ್ಯಾಮಿಲಿ ಬಾಂಡಿಂಗ್ ಇರುವ ನಟ. ಪ್ರಭುದೇವ ತುಂಬಿದ ಕೊಡ, ಅವರಲ್ಲಿ ಅಪಾರ ಪ್ರತಿಭೆ ಇದೆ. ಹಾಗೆಂದು ಅವರು ಅಹಂಕಾರ ತೋರುವುದಿಲ್ಲ. ಕೊರಿಯೋಗ್ರಫಿ, ನಿರ್ದೇಶನ, ನಟನೆ ಮೂರು ವಿಭಾಗದಲ್ಲಿಯೂ ಯಶಸ್ಸು ಕಂಡಿದ್ದಾರೆ’ ಎಂದಿದ್ದಾರೆ ಶಿವರಾಜ್ ಕುಮಾರ್.

ಇದನ್ನೂ ಓದಿ:ಶಿವರಾಜ್ ಕುಮಾರ್-ರಾಮ್ ಚರಣ್ ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ

ಸಿನಿಮಾದಲ್ಲಿ ಪ್ರಭುದೇವ ಜೊತೆಗೆ ತಮ್ಮ ಡ್ಯಾನ್ಸ್ ಬಗ್ಗೆ ಮಾತನಾಡಿರುವ ಶಿವರಾಜ್ ಕುಮಾರ್, ‘ಎನರ್ಜಿ ಇರುಆಗಲೇ ಡ್ಯಾನ್ಸ್, ಫೈಟ್ ಆ್ಯಕ್ಟಿಂಗ್ ಮಾಡಬೇಕು’ ಎಂದಿದ್ದಾರೆ. ‘ಕರಟಕ ದಮನಕ’ ಬಗ್ಗೆ ಮಾತನಾಡಿ, ‘ಸಮಾಜದ ಒಂದು ಸಮಸ್ಯೆಯನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೀವಿ. ಭಟ್ರೆ ಯಾವಾಗ ಸಿನ್ಮಾ ಮಾಡ್ತೀರಾ ಅಂತ ನಾನೇ ಕೇಳ್ತಿದ್ದೆ, ಕೊನೆಗೆ ‘ಕರಟಕ ದಮನಕ’ ಸಿನಿಮಾ ಮೂಲಕ ಅದು ಸಾಧ್ಯವಾಯ್ತು. ನನ್ನ ಫೇವರೇಟ್ ಯೋಗರಾಜ್ ಭಟ್, ಸೂರಿ ಪ್ರಮುಖರು’ ಎಂದು ಮೆಚ್ಚುಗೆ ಸೂಚಿಸಿದರು ಶಿವರಾಜ್ ಕುಮಾರ್.

ಇನ್ನು ನಟ ಪ್ರಭುದೇವ ಮಾತನಾಡಿ, ‘ಶಿವಣ್ಣನ ಜೊತೆ ನಟಿಸಬೇಕು ಅಂದಾಗ ನಿಜವಾಗಿಯೂ ಖುಷಿ ಆಯ್ತು. ಶಿವಣ್ಣ ಅವರಿಂದ ಒಳ್ಳೆ ಹುಡುಗ ಅನ್ನಿಸ್ಕೊಬೇಕು ಅನ್ನಿಸಿಸದ್ದಂತು ನಿಜ. ಶಿವಣ್ಣನ ಸಾಂಗ್ಸ್ ನೋಡುವಾಗ ಇಷ್ಟೊಂದು ಎನರ್ಜಿ ಹೇಗೆ ಬರುತ್ತೆ ಅನ್ನಿಸ್ತಿತ್ತು. ನಾನು ಡ್ಯಾನ್ಸ್​ಗಾಗಿ ಎರಡು ದಿನ ತರಬೇತಿ ಮಾಡಿದೆ. ಆದರೆ ಶಿವಣ್ಣ 2-3 ಗಂಟೆಲೆ ಫಿಕಪ್ ಆಗಿಬಿಡೋರು. ಮಲ್ಟಿಸ್ಟಾರರ್ ಸಿನ್ಮಾ ಎಂದರೆ ನನಗೆ ತುಂಬಾ ಇಷ್ಟ. ಶಿವಣ್ಣನ ಜೊತೆ ಆಕ್ಟಿಂಗ್ ಮಾಡಿದ್ದು ಬಹಳ ಫನ್ ಆಗಿತ್ತು. ನಾವು ಮನೇಲಿ ಕನ್ನಡನೇ ಮಾತಾಡ್ತೀವಿ. ಯೋಗರಾಜ್ ಭಟ್ರು ಬಹಳ ಡೇಂಜರಸ್ ಡೈರೆಕ್ಟರ್’ ಎಂದು ಮೆಚ್ಚುಗೆ ಸೂಚಿಸಿದರು. ಅಪ್ಪು ಅವರೊಟ್ಟಿಗೆ ಡ್ಯಾನ್ಸ್ ಮಾಡಿದ ಅನುಭವವನ್ನೂ ಸಹ ಪ್ರಭುದೇವ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ