Kichcha Sudeep: ಪ್ರಭುದೇವ ಪರ್ಫೆಕ್ಷನಿಸ್ಟ್ ಎಂದ ಸುದೀಪ್; ನಟನ ಪ್ರತಿಕ್ರಿಯೆ ಏನು?

ಪ್ರಭುದೇವ ಅವರಿಗೆ ‘ಕರಟಕ ದಮನಕ’ ಸಿನಿಮಾದಲ್ಲಿ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳೋ ಅವಕಾಶ ಸಿಕ್ಕಿದೆ. ಇಬ್ಬರೂ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ. ಈ ಚಿತ್ರದ ಟೀಸರ್ ರಿಲೀಸ್ ಬಳಿಕ ಸುದೀಪ್ ಅವರು ಈ ಸಿನಿಮಾ ಬಗ್ಗೆ ಹಾಗೂ ನಟರ ಬಗ್ಗೆ ಮಾತನಾಡಿದ್ದಾರೆ.

Kichcha Sudeep: ಪ್ರಭುದೇವ ಪರ್ಫೆಕ್ಷನಿಸ್ಟ್ ಎಂದ ಸುದೀಪ್; ನಟನ ಪ್ರತಿಕ್ರಿಯೆ ಏನು?
ಪ್ರಭುದೇವ-ಸುದೀಪ್
Follow us
ರಾಜೇಶ್ ದುಗ್ಗುಮನೆ
|

Updated on: Feb 29, 2024 | 7:03 AM

ಕಿಚ್ಚ ಸುದೀಪ್ (Kichcha Sudeep) ಅವರಿಗೆ ಕನ್ನಡ ಚಿತ್ರರಂಗ ಹಾಗೂ ಪರಭಾಷೆಯ ಅನೇಕರ ಜೊತೆ ಒಳ್ಳೆಯ ಬಾಂಧವ್ಯ ಇದೆ. ಅನೇಕ ಹೊಸಬರಿಗೆ ಅವರು ಬೆನ್ನು ತಟ್ಟಿದ್ದು ಇದೆ. ಇತ್ತೀಚೆಗೆ ಸುದೀಪ್ ಅವರು ಯೋಗರಾಜ್ ಭಟ್ ನಿರ್ದೇಶನದ, ಶಿವರಾಜ್​ಕುಮಾರ್ ಹಾಗೂ ಪ್ರಭುದೇವ ನಟನೆಯ ‘ಕರಟಕ ದಮನಕ’ ಸಿನಿಮಾದ ಕ್ಯಾರೆಕ್ಟರ್ ಟೀಸರ್ ರಿಲೀಸ್ ಮಾಡಿ ತಂಡದ ಬೆನ್ನು ತಟ್ಟಿದ್ದಾರೆ. ಆ ಬಳಿಕ ಅವರು ಯೋಗರಾಜ್ ಭಟ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅವರು ಪ್ರಭುದೇವ ಹಾಗೂ ಶಿವರಾಜ್​ಕುಮಾರ್ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.

ಪ್ರಭುದೇವ ಅವರು ಡ್ಯಾನ್ಸರ್ ಆಗಿ, ಕೊರಿಯೋಗ್ರಾಫರ್ ಆಗಿ, ನಿರ್ದೇಶಕನಾಗಿ, ನಟನಾಗಿ ಗುರುತಿಸಿಕೊಂಡಿದ್ದಾರೆ. ‘ಕರಟಕ ದಮನಕ’ ಸಿನಿಮಾದಲ್ಲಿ ಅವರಿಗೆ ಶಿವಣ್ಣ ಜೊತೆ ತೆರೆ ಹಂಚಿಕೊಳ್ಳೋ ಅವಕಾಶ ಸಿಕ್ಕಿದೆ. ಇಬ್ಬರೂ ಇದೇ ಮೊದಲ ಬಾರಿಗೆ ಒಟ್ಟಾಗಿ ಕೆಲಸ ಮಾಡಿದ್ದಾರೆ ಅನ್ನೋದು ವಿಶೇಷ. ಈ ಚಿತ್ರದ ಟೀಸರ್ ರಿಲೀಸ್ ಬಳಿಕ ಸುದೀಪ್ ಅವರು ಈ ಸಿನಿಮಾ ಬಗ್ಗೆ ಹಾಗೂ ನಟರ ಬಗ್ಗೆ ಮಾತನಾಡಿದ್ದಾರೆ.

‘ಶಿವರಾಜ್​ಕುಮಾರ್ ಅವರು ಎನರ್ಜಿಯ ಗಣಿ. ಪ್ರಭುದೇವ ಮಿಸ್ಟರ್ ಪರ್ಫೆಕ್ಷನಿಸ್ಟ್’ ಎಂದು ಕರೆದಿದ್ದಾರೆ ಸುದೀಪ್. ಈ ಸಂದರ್ಶನದ ವಿಡಿಯೋನ ಪ್ರಭುದೇವ ಹಂಚಿಕೊಂಡಿದ್ದು, ‘ಎಂತಹ ಸ್ವೀಟ್ ಗೆಸ್ಚರ್’ ಎಂದು ಹೇಳಿದ್ದಾರೆ. ಈ ಟ್ವೀಟ್​ನ ಸುದೀಪ್ ರೀಟ್ವೀಟ್ ಮಾಡಿಕೊಂಡಿದ್ದು ಹಗ್ ಮಾಡೋ ಎಮೋಜಿ ಹಾಕಿದ್ದಾರೆ. ಈ ಚಿತ್ರಕ್ಕೆ ಎಲ್ಲರೂ ಶುಭ ಕೋರುತ್ತಿದ್ದಾರೆ.

ಪ್ರಭುದೇವ ಟ್ವೀಟ್..

ಸುದೀಪ್ ಹಾಗೂ ಪ್ರಭುದೇವ ಮಧ್ಯೆ ಒಳ್ಳೆಯ ಬಾಂಧವ್ಯ ಇದೆ. ‘ದಬಾಂಗ್ 3’ ಚಿತ್ರವನ್ನು ಪ್ರಭುದೇವ ಅವರು ನಿರ್ದೇಶನ ಮಾಡಿದ್ದರು. ಬಾಲಿವುಡ್​ನ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಹೀರೋ ಆದರೆ, ಸುದೀಪ್ ವಿಲನ್ ಪಾತ್ರ ಮಾಡಿದ್ದರು. ಪ್ರಭುದೇವ ಡೈರೆಕ್ಷನ್​ನಲ್ಲಿ ಸುದೀಪ್ ಕೆಲಸ ಮಾಡಿದ್ದರು. ಹೀಗಾಗಿ, ಪ್ರಭುದೇವ ಕೆಲಸ ಹೇಗೆ ಎಂಬುದು ಸುದೀಪ್​ಗೆ ಸರಿಯಾಗಿ ತಿಳಿದಿದೆ. ಈ ಕಾರಣದಿಂದಲೇ ಅವರನ್ನು ಸುದೀಪ್ ಪರ್ಫೆಕ್ಷನಿಸ್ಟ್ ಎಂದು ಕರೆದಿದ್ದಾರೆ.

ಇದನ್ನೂ ಓದಿ: ‘ಒಂದು ಸರಳ ಪ್ರೇಮಕಥೆ’ ಸಿನಿಮಾ ನೋಡಿದ ಶಿವರಾಜ್​ಕುಮಾರ್-ಗೀತಾ ದಂಪತಿ

‘ಕರಟಕ ದಮನಕ’ ಸಿನಿಮಾಗೆ ಯೋಗರಾಜ್ ಭಟ್ ನಿರ್ದೇಶನ ಇದೆ. ರಾಕ್​ಲೈನ್ ವೆಂಕಟೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಮಾರ್ಚ್ 8ರಂದು ಸಿನಿಮಾ ರಿಲೀಸ್ ಆಗಲಿದೆ. ನಿಶ್ವಿಕಾ ನಾಯ್ಡು ಹಾಗೂ ಪ್ರಿಯಾ ಆನಂದ್ ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ