AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೊಲೀಸ್ ಧ್ವಜ ದಿನಾಚರಣೆಗೆ ಶುಭಾಶಯ ತಿಳಿಸಿದ ‘ಲಾಫಿಂಗ್ ಬುದ್ಧ’ ಸಿನಿಮಾ ಬಳಗ

‘ಲಾಫಿಂಗ್ ಬುದ್ಧ’ ಚಿತ್ರವು ‘ರಿಷಬ್ ಶೆಟ್ಟಿ ಫಿಲ್ಮ್ಸ್​’ ಸಂಸ್ಥೆಯ ಮೂಲಕ ನಿರ್ಮಾಣ ಆಗುತ್ತಿದೆ. ಭರತ್ ರಾಜ್ ಎಂ. ಅವರು ಈ ಚಿತ್ರಕ್ಕೆ ಡೈರೆಕ್ಷನ್​ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಸುಂದರ್​ ರಾಜ್​ ಮತ್ತು ತೇಜು ಬೆಳವಾಡಿ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಚಿತ್ರತಂಡದಿಂದ ‘ಪೊಲೀಸ್ ಧ್ವಜ ದಿನಾಚರಣೆ’ ಶುಭಾಶಯ ತಿಳಿಸಲಾಗಿದೆ.

ಪೊಲೀಸ್ ಧ್ವಜ ದಿನಾಚರಣೆಗೆ ಶುಭಾಶಯ ತಿಳಿಸಿದ ‘ಲಾಫಿಂಗ್ ಬುದ್ಧ’ ಸಿನಿಮಾ ಬಳಗ
ಲಾಫಿಂಗ್​ ಬುದ್ಧ ಸಿನಿಮಾ ತಂಡ
Follow us
ಮದನ್​ ಕುಮಾರ್​
|

Updated on: Apr 02, 2024 | 5:34 PM

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ (Rishab Shetty) ಅವರು ನಿರ್ಮಾಣ ಮಾಡುತ್ತಿರುವ ‘ಲಾಫಿಂಗ್ ಬುದ್ಧ’ (Laughing Buddha Kannada Movie) ಸಿನಿಮಾದ ಚಿತ್ರೀಕರಣ ಕೆಲಸಗಳು ಈಗಾಗಲೇ ಪೂರ್ಣ ಆಗಿವೆ. ಈಗ ಇದೇ ಸಿನಿಮಾ ತಂಡದಿಂದ ‘ಕರ್ನಾಟಕ ಪೊಲೀಸ್ ಇಲಾಖೆ’ಗೆ ಶುಭಾಶಯ ತಿಳಿಸಲಾಗಿದೆ. ‘ಪೊಲೀಸ್ ಧ್ವಜ ದಿನ’ದ (Police Flag Day) ಪ್ರಯುಕ್ತ ಕರ್ನಾಟಕ ಪೊಲೀಸ್ ಇಲಾಖೆಗೆ ಹೃದಯಪೂರ್ವಕ ಶುಭಾಶಯಗಳನ್ನು ತಿಳಿಸಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

‘ಧೈರ್ಯದ ಮತ್ತೊಂದು ಹೆಸರು ಹಾಗೂ ಪ್ರತೀಕವಾಗಿರುವ ಕೆಚ್ಚೆದೆಯ ಕರ್ನಾಟಕ ಪೊಲೀಸರಿಗೆ ನಮ್ಮ ಲಾಫಿಂಗ್ ಬುದ್ಧ ಚಿತ್ರತಂಡದಿಂದ ಅಭಿನಂದನೆಗಳು’ ಎಂದು ಶುಭ ಕೋರಲಾಗಿದೆ. ರಿಷಬ್​ ಶೆಟ್ಟಿ ಕೂಡ ಸೋಶಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್​ ಮಾಡಿದ್ದಾರೆ. ‘ನಮ್ಮ ಧೀರ ಪೊಲೀಸರ ನಿಸ್ವಾರ್ಥ ಸೇವೆ, ಧೈರ್ಯ, ಶೌರ್ಯ ಹಾಗು ಕರ್ತವ್ಯ ನಿಷ್ಠೆಯನ್ನು ಗೌರವಿಸುವ ಸುದಿನವಾದ ಪೊಲೀಸ್ ಧ್ವಜ ದಿನಾಚರಣೆಯ ಶುಭಾಶಯಗಳು’ ಎಂದು ರಿಷಬ್​ ಶೆಟ್ಟಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಖಚಿತವಾಯ್ತು ಸುದ್ದಿ, ‘ಲಗಾನ್’ ನಿರ್ದೇಶಕನ ಸಿನಿಮಾದಲ್ಲಿ ರಿಷಬ್ ಶೆಟ್ಟಿ

‘ಲಾಫಿಂಗ್ ಬುದ್ಧ’ ಚಿತ್ರವು ರಿಷಬ್ ಶೆಟ್ಟಿ ಫಿಲ್ಮ್ಸ್​ ಬ್ಯಾನರ್ ಮೂಲಕ ನಿರ್ಮಾಣ ಆಗುತ್ತಿದೆ. ಭರತ್ ರಾಜ್ ಎಂ. ಅವರು ಈ ಸಿನಿಮಾಗೆ ಡೈರೆಕ್ಷನ್​ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ ಎಂಬುದು ವಿಶೇಷ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿರುವ ಅವರ ಪಾಲಿಗೆ ‘ಲಾಫಿಂಗ್​ ಬುದ್ಧ’ ಸಿನಿಮಾ ಸ್ಪೆಷಲ್​ ಆಗಿರಲಿದೆ.

ಪ್ರಮೋದ್​ ಶೆಟ್ಟಿ ಜೊತೆ ಸುಂದರ್​ ರಾಜ್​, ತೇಜು ಬೆಳವಾಡಿ ಮುಂತಾದ ಕಲಾವಿದರು ‘ಲಾಫಿಂಗ್​ ಬುದ್ಧ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಭದ್ರಾವತಿ, ಸಾಗರ, ಜೋಗ, ಬೆಂಗಳೂರು ಮುಂತಾದ ಕಡೆಗಳಲ್ಲಿ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಕೂಡ ಈಗಾಗಲೇ ಮುಗಿದಿವೆ. ‘ಲಾಫಿಂಗ್ ಬುದ್ಧ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎಂದು ಚಿತ್ರತಂಡದವರು ತಿಳಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಕಮಲ್ ಹಾಸನ್ ನಟನೆಯ ಥಗ್ ಲೈಫ್ ಬ್ಯಾನ್ ಮಾಡೋದು ಚರ್ಚೆಯ ವಿಷಯ: ಸುಮಲತಾ
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಹರಿಪ್ರಸಾದ್ ಮನೆಯಿಂದಲೇ ಶಾಹುಲ್​ಗೆ ಜಮೀರ್ ಮತ್ತು ನಜೀರ್​ರಿಂದ ಫೋನ್
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕಾಂಗ್ರೆಸ್​ಗೆ ಬಿಗ್ ಶಾಕ್: ಮುಸ್ಲಿಂ ಮುಖಂಡರಿಂದ ಸಾಮೂಹಿಕ ರಾಜೀನಾಮೆ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕ್ಯಾಬಿನೆಟ್​ಗೆ ಕಮ್ಯೂನಲ್ ವೈರಸ್ ಮೆತ್ತಿಕೊಂಡಿದೆ, ಚಿಕಿತ್ಸೆ ಬೇಕು: ರವಿ
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ಕರ್ನಾಟಕದಲ್ಲಿ ಇನ್ನೂ 3 ದಿನ ಭಾರೀ ಮಳೆ: ಈ ಜಿಲ್ಲೆಗಳಿಗೆ ರೆಡ್​ ಅಲರ್ಟ್​
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ನಾಳೆಯೇ ಚುನಾವಣೆ ಘೋಷಿಸಿ; ಮೋದಿಗೆ ಮಮತಾ ಬ್ಯಾನರ್ಜಿ ಬಹಿರಂಗ ಸವಾಲು
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ಬಂಟ್ವಾಳ್ ರಹಿಮಾನ್ ಹತ್ಯೆ: ರಣಾಂಗಣವಾದ ಮುಸ್ಲಿಂ ಮುಖಂಡರ ಸಭೆ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ದಲಿತರ ಮಾರಣವಾಗುತ್ತಿದ್ದರೂ ದಲಿತ ನಾಯಕರು ಸುಮ್ಮನಿದ್ದಾರೆ: ಚಲವಾದಿ
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ತಳಿರು ತೋರಣ ಮತ್ತು ರಂಗೋಲಿಯಿಂದ ಅಲಂಕೃತಗೊಂಡ ಶಾಲೆ ನೋಡಿ ಮಕ್ಕಳು ಖುಷ್
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು
ಪಾಕಿಸ್ತಾನಕ್ಕೆ ಇನ್ನೂ ಹೆಚ್ಚಿನದನ್ನೇ ಮಾಡುವ ತಾಕತ್ತು ನಮಗಿತ್ತು