‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ 'ತಬಾಹಿ' ಹಾಡಿನ ಬೋಲ್ಡ್ ದೃಶ್ಯಗಳ ಕುರಿತು ವ್ಯಕ್ತವಾಗಿದ್ದ ಟೀಕೆಗಳಿಗೆ ನಟ ಯಶ್ ಖಡಕ್ ಸ್ಪಷ್ಟನೆ ನೀಡಿದ್ದಾರೆ. ಸಿನಿಮಾದಲ್ಲಿ ಯಾವುದೇ ಅಶ್ಲೀಲತೆ ಇಲ್ಲ, ಪ್ರತಿಯೊಂದು ದೃಶ್ಯವನ್ನು ಕಲಾತ್ಮಕವಾಗಿ ಮತ್ತು ನಿರ್ದಿಷ್ಟ ಉದ್ದೇಶದಿಂದ ಚಿತ್ರೀಕರಿಸಲಾಗಿದೆ ಎಂದು ಯಶ್ ಹೇಳುವ ಮೂಲಕ ಟೀಕೆಕಾರರ ಬಾಯಿ ಮುಚ್ಚಿಸಿದ್ದಾರೆ.

‘ನಾನು ಆ ಹಾಡಲ್ಲಿ ಕಿಸ್ ಕೂಡ ಮಾಡಿಲ್ಲ, ಅದು ಅಶ್ಲೀಲವಲ್ಲ’; ‘ತಬಾಹಿ’ ಟೀಕೆಗೆ ಯಶ್ ಉತ್ತರ
ಕಿಯಾರಾ-ಯಶ್

Updated on: Aug 15, 2026 | 7:27 AM

ಮುಖ್ಯಾಂಶಗಳು

  • 'ತಬಾಹಿ' ಹಾಡಿನ ಬೋಲ್ಡ್ ದೃಶ್ಯಗಳ ಬಗ್ಗೆ ಮೌನ ಮುರಿದ ರಾಕಿ ಭಾಯ್
  • ನಾವು ಗೆರೆ ದಾಟಿಲ್ಲ, ಅಶ್ಲೀಲತೆ ಇಲ್ಲವೇ ಇಲ್ಲ: ನಟ ಯಶ್ ಸ್ಪಷ್ಟನೆ
  • ಇಂದಿನ ಯುವಪೀಳಿಗೆಯ (Gen Z) ಧ್ವನಿಯಾಗಲಿದೆ 'ಟಾಕ್ಸಿಕ್' ಸಿನಿಮಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ (Toxic Movie) ‘ತಬಾಹಿ’ ಸಾಂಗ್ ಬಿಡುಗಡೆಯಾದಾಗಿನಿಂದಲೂ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಲ್ಲಿದೆ. ಹಾಡಿನಲ್ಲಿರುವ ಬೋಲ್ಡ್ ದೃಶ್ಯಗಳನ್ನು ನೋಡಿ ಕೆಲವರು ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಈ ಎಲ್ಲಾ ಚರ್ಚೆ ಹಾಗೂ ಟೀಕೆಗಳಿಗೆ ನಟ ಯಶ್ ನೇರವಾಗಿ ಸ್ಪಷ್ಟನೆ ನೀಡಿದ್ದಾರೆ. ಅವರು ಮಾತು ಅನೇಕರಿಗೆ ಅಚ್ಚರಿ ತಂದಿದೆ.

‘ಆಪ್​ ಕಿ ಅದಾಲತ್​’ನಲ್ಲಿ ಈ ಬಗ್ಗೆ ಅವರು, ‘ಅಶ್ಲೀಲತೆ ಇರುವುದು ತಪ್ಪು ಎಂಬುದನ್ನು ನಾನು ಒಪ್ಪುತ್ತೇನೆ. ಆದರೆ ನಾವು ಈ ಹಾಡಿನಲ್ಲಿ ಅಂತಹ ಯಾವುದೇ ಗೆರೆ ದಾಟಿಲ್ಲ, ನೀವು ಗಮನಿಸಿದ್ದರೆ ನಾನು ಕಿಯಾರಾಗೆ ಕಿಸ್ ಕೂಡ ಮಾಡಿಲ್ಲ. ಪ್ರತಿಯೊಂದು ದೃಶ್ಯವನ್ನೂ ಅತ್ಯಂತ ಕಲಾತ್ಮಕವಾಗಿ ಚಿತ್ರೀಕರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಸಿನಿಮಾ ಎನ್ನುವುದು ಸೃಷ್ಟಿಕರ್ತನ ಧ್ವನಿ. ಪ್ರತಿಯೊಂದು ದೃಶ್ಯ ಹಾಗೂ ಭಾವನೆಗಳಿಗೂ ಸಿನಿಮಾದಲ್ಲಿ ತನ್ನದೇ ಆದ ಮಹತ್ವ ಮತ್ತು ಉದ್ದೇಶವಿರುತ್ತದೆ. ಪ್ರೇಕ್ಷಕರು ಇಡೀ ಸಿನಿಮಾವನ್ನು ನೋಡಿದಾಗ ಈ ದೃಶ್ಯಗಳ ಅಸಲಿ ಉದ್ದೇಶ ಮತ್ತು ಭಾವನೆ ಅವರಿಗೆ ಖಂಡಿತ ಅರ್ಥವಾಗುತ್ತದೆ’ ಎಂದು ಯಶ್ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ‘ಟಾಕ್ಸಿಕ್’ ಸೆಟ್ ಹಾಕಲು ಅಂದಾಜು 75 ಕೋಟಿ ರೂಪಾಯಿ ಬಜೆಟ್

ಈ ಚಿತ್ರವನ್ನು ವಿಶೇಷವಾಗಿ ಇಂದಿನ ಯುವಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಿರ್ಮಿಸಲಾಗಿದೆ ಎಂದಿದ್ದಾರೆ. ‘ಇಂದಿನ ಯುವಕರು ಹಿರಿಯರ ಜೊತೆ ನಡೆಸುವ ಸಂಭಾಷಣೆ, ಸಮಾಜದ ಹಳೆಯ ನಿಯಮಗಳ ಮೇಲೆ ಎತ್ತುವ ಪ್ರಶ್ನೆಗಳು ಹಾಗೂ ಅವರಲ್ಲಿರುವ ವಿಚಾರಗಳನ್ನು ಈ ಸಿನಿಮಾ ಪ್ರತಿನಿಧಿಸುತ್ತದೆ. ಈ ಎಲ್ಲಾ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡೇ ಕಥೆಯನ್ನು ಹೆಣೆಯಲಾಗಿದೆ’ ಎಂದು ತಿಳಿಸುವ ಮೂಲಕ ಯಶ್, ಬೋಲ್ಡ್ ದೃಶ್ಯಗಳ ಕುರಿತು ವ್ಯಕ್ತವಾಗಿದ್ದ ಅಪಪ್ರಚಾರ ಮತ್ತು ಟೀಕೆಗಳಿಗೆ ತೆರೆ ಎಳೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us