KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?

| Updated By: ಮದನ್​ ಕುಮಾರ್​

Updated on: Apr 22, 2021 | 6:03 PM

KGF Chapter 2 Release Date: ಕೆಜಿಎಫ್​ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ಚಿತ್ರ ರಿಲೀಸ್​ ಮಾಡುವ ಸಾಧ್ಯತೆ ಕೂಡ ಕಡಿಮೆಯೇ.

KGF Release Date: ಕೆಜಿಎಫ್-2 ಬಿಡುಗಡೆಗೆ ಕೊರೊನಾ ಅಡ್ಡಗಾಲು; ರಿಲೀಸ್​ ದಿನಾಂಕ ಮುಂದೂಡೋದು ಖಚಿತ?
ಯಶ್​
Follow us on

ಜುಲೈ 16. ಈ ದಿನಕ್ಕಾಗಿ ಕನ್ನಡ ಸಿನಿಪ್ರಿಯರು ಮಾತ್ರವಲ್ಲ, ಇಡೀ ದೇಶವೇ ಕಾಯುತ್ತಿದೆ. ಈ ದಿನದಂದು ನಟ ಯಶ್​ ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ಕಾಂಬಿನೇಷನ್​ನಲ್ಲಿ ಮೂಡಿ ಬರುತ್ತಿರುವ ಕೆಜಿಎಫ್​ 2 ತೆರೆಗೆ ಬರುತ್ತಿದೆ. ಚಿತ್ರತಂಡ ಈಗಾಗಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದೆ. ಆದರೆ, ಮೂಲಗಳು ಹೇಳುತ್ತಿರುವ ಪ್ರಕಾರ ಸಿನಿಮಾ ರಿಲೀಸ್​ ದಿನಾಂಕ ಮುಂದೂಡಲ್ಪಡಲಿದೆಯಂತೆ.

ಭಾರತದಲ್ಲಿ ಕೊರೊನಾ ಒಂದನೇ ಅಲೆ ದೊಡ್ಡ ಮಟ್ಟದಲ್ಲಿ ಹಾವಳಿ ಸೃಷ್ಟಿಮಾಡಿತ್ತು. ಎಲ್ಲವೂ ತಣ್ಣಗಾಯಿತು ಎನ್ನುವಾಗಲೇ ಕೊರೊನಾ ಎಡನೇ ಅಲೆ ಎದ್ದಿದೆ. ಮೊದಲನೇ ಅಲೆಗಿಂತ ಭೀಕರವಾಗಿ ಎರಡನೇ ಅಲೆ ಜನರ ಜೀವ ಹಿಂಡುತ್ತಿದೆ. ಇಂದು (ಏಪ್ರಿಲ್​ 22) ಬರೋಬ್ಬರಿ 3 ಲಕ್ಷ ಕೊರೊನಾ ಕೇಸ್​ಗಳು ಬಂದಿವೆ. ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಠಿಣ ಕ್ರಮ ಕೈಗೊಂಡಿವೆ. ಹೀಗಾಗಿ, ಚಿತ್ರಮಂದಿರಗಳನ್ನು ಮುಚ್ಚಲಾಗಿದೆ.

ಈಗತಾನೇ ಚೇತರಿಕೆ ಕಾಣುತ್ತಿದ್ದ ಸ್ಯಾಂಡಲ್​ವುಡ್​ಗೆ ಎರಡನೇ ಅಲೆ ಹೊಡೆತ ನೀಡಿದೆ. ಸಲಗ, ಭಜರಂಗಿ-2 ಸಿನಿಮಾಗಳ ರಿಲೀಸ್​ ದಿನಾಂಕ ಮುಂದೂಡಲ್ಪಟ್ಟಿದೆ. ಈ ಸಿನಿಮಾಗಳ ಹೊಸ ರಿಲೀಸ್​ ದಿನಾಂಕ ಇನ್ನಷ್ಟೇ ಘೋಷಣೆ ಆಗಬೇಕಿದೆ. ಕೊರೊನಾ ಎರಡನೆ ಅಲೆ ಅಬ್ಬರ ಈಗ ಕೆಜಿಎಫ್​-2 ಮೇಲೂ ಉಂಟಾಗುವ ಸಾಧ್ಯತೆ ಇದೆ.

ತಜ್ಞರ ಪ್ರಕಾರ ಮೇ ತಿಂಗಳಲ್ಲಿ ಕೊರೊನಾ ಮಿತಿಮೀರಿ ಏರಿಕೆ ಕಾಣಲಿದ್ದು, ಮೇ ಅಂತ್ಯಕ್ಕೆ ಅಬ್ಬರ ಕೊಂಚ ಕಡಿಮೆ ಆಗಲಿದೆಯಂತೆ. ಕೊರೊನಾ ಹರಡುತ್ತಿರುವ ವೇಗ ನೋಡಿದರೆ, ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಒಂದೊಮ್ಮೆ ಜೂನ್​, ಜುಲೈ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳು ಮತ್ತೆ ತೆರೆದುಕೊಂಡರೂ ಜನರು ಒಮ್ಮೆಲೇ ಸಿನಿಮಾ ನೋಡೋಕೆ ಆಸಕ್ತಿ ತೋರುವುದು ಅನುಮಾನವೇ.

ಕೊರೊನಾ ಮೊದಲನೇ ಅಲೆ ತಣ್ಣಗಾದ ನಂತರ ಚಿತ್ರಮಂದಿರ ಓಪನ್​ ಮಾಡಲಾಗಿತ್ತು. ಆದರೆ, ದೊಡ್ಡ ಬಜೆಟ್​ ಚಿತ್ರಗಳು ಆರಂಭದಲ್ಲಿ ತೆರೆಕಂಡಿರಲಿಲ್ಲ. ನಿಧಾನವಾಗಿ ಜನರು ಧೈರ್ಯದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದರು. ಈಗ ಎರಡನೇ ಅಲೆ ತಣ್ಣಗಾಗೋಕೂ ಕೊಂಚ ಸಮಯ ಬೇಕು.

ಕೆಜಿಎಫ್​-2 ದೊಡ್ಡ ಬಜೆಟ್​ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ಕೆಜಿಎಫ್​ 2 ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್​ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ಚಿತ್ರ ರಿಲೀಸ್​ ಮಾಡುವ ಸಾಧ್ಯತೆ ಕೂಡ ಕಡಿಮೆಯೇ. ಕೊನೆಯದಾಗಿ ಉಳಿದುಕೊಂಡಿರುವ ಆಯ್ಕೆ ಎಂದರೆ, ಸಿನಿಮಾ ರಿಲೀಸ್​ ದಿನಾಂಕ ಮುಂದೂಡುವುದು.

ಮೂಲಗಳ ಪ್ರಕಾರ ಕೊರೊನಾ ಅಬ್ಬರ ಹೀಗೆಯೇ ಮುಂದುವರಿದರೆ ಕೆಜಿಎಫ್​ 2 ರಿಲೀಸ್​ ದಿನಾಂಕ ಪೋಸ್ಟ್​ಪೋನ್​ ಆಗುತ್ತದೆಯಂತೆ. ದೀಪಾವಳಿಗೆ ಸಿನಿಮಾ ರಿಲೀಸ್​ ಆದರೂ ಆಗಬಹುದು. ​ಯಶ್​ಗೆ ಡಿಸೆಂಬರ್ ಲಕ್ಕಿ. ಹೀಗಾಗಿ, ಡಿಸೆಂಬರ್​​ವರೆಗೆ ಕಾಯುವಂತೆಯೂ ಚಿತ್ರತಂಡ ಪ್ರೇಕ್ಷಕರ ಬಳಿ ಮನವಿ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಪ್ರಶಾಂತ್​ ನೀಲ್​ ಜೊತೆ ದಳಪತಿ ವಿಜಯ್​ ಹೊಸ ಸಿನಿಮಾ? ಕೆಜಿಎಫ್​ ಡೈರೆಕ್ಟರ್​ ಬಗ್ಗೆ ಬಿಗ್​ ನ್ಯೂಸ್​

ಕೆಜಿಎಫ್​ ರಾಕಿ ಭಾಯ್​ ಅಮ್ಮ ಅರ್ಚನಾ ಜೋಯಿಸ್​ಗೆ ಬಂತು ಬಿಗ್​ ಆಫರ್​