Ambareesh Biography: ‘ರೆಬಲ್​ ಸ್ಟಾರ್’​​ ಅಭಿಮಾನಿಗಳಿಗೆ ವಿಶ್ವ ಪುಸ್ತಕ ದಿನದಂದು ಸಿಹಿ ಸುದ್ದಿ; ಹೊಸ ರೂಪದಲ್ಲಿ ‘ಅಂಬರೀಶ್’ ಕೃತಿ

World Book and Copyright Day: ವಿಶ್ವ ಪುಸ್ತಕ ದಿನದ ಅಂಗವಾಗಿ ನಟ ಅಂಬರೀಷ್​ ಅವರ ಬಯೋಗ್ರಫಿಯ ಎರಡನೇ ಮುದ್ರಣದ ಪ್ರತಿಗಳನ್ನು ಸಾವಣ್ಣ ಪ್ರಕಾಶನ ಬಿಡುಗಡೆ ಮಾಡಿದೆ. ಹೊಸ ವಿನ್ಯಾಸದಲ್ಲಿ ಈ ಕೃತಿ ಹೊರಬಂದಿದೆ.

Ambareesh Biography: ‘ರೆಬಲ್​ ಸ್ಟಾರ್’​​ ಅಭಿಮಾನಿಗಳಿಗೆ ವಿಶ್ವ ಪುಸ್ತಕ ದಿನದಂದು ಸಿಹಿ ಸುದ್ದಿ; ಹೊಸ ರೂಪದಲ್ಲಿ ‘ಅಂಬರೀಶ್’ ಕೃತಿ
‘ಅಂಬರೀಶ್’ ಪುಸ್ತಕದ ಎರಡನೇ ಮುದ್ರಣದ ಪ್ರತಿಗಳನ್ನು ಬಿಡುಗಡೆ ಮಾಡಿದ ಪ್ರಕಾಶಕರಾದ ಜಮೀಲ್ ಸಾವಣ್ಣ ಮತ್ತು ಲೇಖಕ ಶರಣು ಹುಲ್ಲೂರು
Follow us
ಮದನ್​ ಕುಮಾರ್​
|

Updated on: Apr 23, 2021 | 3:07 PM

ಕನ್ನಡ ಚಿತ್ರರಂಗದಲ್ಲಿ ನಟ ಅಂಬರೀಷ್​ ಬದುಕಿದ ರೀತಿ ತುಂಬ ಡಿಫರೆಂಟ್​. ವರ್ಣರಂಜಿತವಾದ ಬದುಕು ಅವರದ್ದಾಗಿತ್ತು. ನಟನೆ ಇರಲಿ, ನಿಜಜೀವನವೇ ಆಗಿರಲಿ, ಅದರಲ್ಲಿ ಅವರದ್ದೇ ಆದಂತಹ ಹೊಸ ಖದರ್​ ಇತ್ತು. ಚಿತ್ರರಂಗ ಮಾತ್ರವಲ್ಲದೆ ರಾಜಕಾರಣದಲ್ಲಿಯೂ ಅವರು ಯಶಸ್ಸು ಕಂಡರು. ಇಂಥ ಅಪರೂಪದ ವ್ಯಕ್ತಿಯ ಖಾಸಗಿ ಜೀವನದ ಬಗ್ಗೆ ತಿಳಿದುಕೊಳ್ಳಲು ಸಿನಿಪ್ರಿಯರಿಗೆ ಉತ್ಸಾಹ ಇದ್ದೇ ಇರುತ್ತದೆ. ಅಂಥವರಿಗೆ ಖಂಡಿತ ಇಷ್ಟವಾಗುವಂತಹ ಕೃತಿ ‘ಅಂಬರೀಶ್​’. ಪತ್ರಕರ್ತ ಡಾ. ಶರಣು ಹುಲ್ಲೂರು ಅವರು ಬರೆದ ಈ ಕೃತಿ ಈಗ ಹೊಸ ರೂಪ ಪಡೆದುಕೊಂಡಿದೆ.

ವ್ಯಕ್ತಿ-ವ್ಯಕ್ತಿತ್ವ-ವರ್ಣರಂಜಿತ ಬದುಕು ಎಂಬ ಅಡಿಬರಹ ಈ ಕೃತಿಗಿದೆ. 2018ರಲ್ಲಿ ‘ಅಂಬರೀಶ್​’ ಪುಸ್ತಕ ಬಿಡುಗಡೆ ಆಯಿತು. ಅಂಬರೀಶ್​ ಅವರ ಈ ಜೀವನ ಚರಿತ್ರೆಯನ್ನು ಮಂಡ್ಯದಲ್ಲಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ದರ್ಶನ್​, ಯಶ್​, ಸುಮಲತಾ ಅಂಬರೀಶ್​, ರಾಕ್​ಲೈನ್​ ವೆಂಕಟೇಶ್​ ಮುಂತಾದ ಗಣ್ಯರು ಬಿಡುಗಡೆ ಮಾಡಿದ್ದರು. ಆ ಪ್ರತಿಗಳೆಲ್ಲ ಖಾಲಿ ಆಗಿವೆ. ಈಗ ಎರಡನೇ ಮುದ್ರಣ ಮಾಡಲಾಗಿದೆ. ಈ ಬಾರಿ ಹೊಸ ಮುಖಪುಟದೊಂದಿಗೆ ಮತ್ತೆ ಓದುಗರ ಕೈ ಸೇರಲು ಸಜ್ಜಾಗಿದೆ. ಒಳಪುಟಗಳಲ್ಲಿಯೂ ಹೊಸ ವಿನ್ಯಾಸ ಕಾಣಿಸಿಲಿದೆ. ವಿಶ್ವ ಪುಸ್ತಕ ದಿನದ ಅಂಗವಾಗಿ ಎರಡನೇ ಮುದ್ರಣದ ಪ್ರತಿಗಳನ್ನು ಸಾವಣ್ಣ ಪ್ರಕಾಶಕರಾದ ಜಮೀಲ್ ಸಾವಣ್ಣ ಬಿಡುಗಡೆ ಮಾಡಿದ್ದಾರೆ.

‘ಬೇರೆ ಪ್ರಕಾರದ ಪುಸ್ತಕಗಳಿಗೆ ಹೋಲಿಸಿದರೆ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿದ ಕೃತಿಗಳು ಹೆಚ್ಚು ಮಾರಾಟ ಆಗುವುದಿಲ್ಲ ಎಂಬ ಮಾತಿದೆ. ಆದರೆ ನಾನು ಬರೆದ ಸುದೀಪ್​ ಮತ್ತು ಅಂಬರೀಶ್​ ಅವರ ಜೀವನ ಚರಿತ್ರೆ ಪುಸ್ತಕಗಳ ವಿಚಾರದಲ್ಲಿ ಆ ಮಾತು ಅನ್ವಯ ಆಗಿಲ್ಲ. ಎರಡೂ ಕೃತಿಗಳನ್ನು ಜನರು ಇಷ್ಟಪಟ್ಟಿದ್ದಾರೆ. ಸಿನಿಮಾ ಸಂಬಂಧಿತ ಕೃತಿಗಳನ್ನು ಓದಲು ಜನರು ಸಿದ್ಧರಿದ್ದಾರೆ. ಆದರೆ ಅವರಿಗೆ ಬೇಕಾಗುವ ರೀತಿಯ ಪುಸ್ತಕಗಳನ್ನು ನಾವು ನೀಡಬೇಕು ಎಂಬ ಅಭಿಪ್ರಾಯ ನನ್ನದು’ ಎನ್ನುತ್ತಾರೆ ‘ಅಂಬರೀಶ್​’ ಕೃತಿಯ ಲೇಖಕ ಡಾ. ಶರಣು ಹುಲ್ಲೂರು.

ಅಂಬರೀಶ್​ ಅವರ ಇಡೀ ವರ್ಣರಂಜಿತ ಬದುಕಿನಲ್ಲಿ ನಡೆದ ಹಲವು ಆಸಕ್ತಿಕರ ಸಂಗತಿಗಳು ಈ ಪುಸ್ತಕದಲ್ಲಿ ಇದೆ. ಅವರ ಹುಟ್ಟಿನಿಂದ ಕೊನೇವರೆಗೆ ಹಲವು ಘಟನೆಗಳನ್ನು ಇದರಲ್ಲಿ ದಾಖಲು ಮಾಡಲಾಗಿದೆ. ಒಬ್ಬ ನಟನಾಗಿ, ರಾಜಕಾರಣಿಯಾಗಿ, ಹೋರಾಟಗಾರನಾಗಿ ಅಂಬರೀಶ್​ ಹೇಗಿದ್ದರು ಎಂಬ ವಿವರ ಇದರಲ್ಲಿ ಇದೆ. ಅಂಬರೀಷ್​ಗೆ ತುಂಬ ಹತ್ತಿರವಾಗಿದ್ದ ವ್ಯಕ್ತಿಗಳ ಸಂದರ್ಶನಗಳು ಕೂಡ ಇದರಲ್ಲಿ ಇವೆ. ಈ ಎಲ್ಲ ಕಾರಣಗಳಿಗಾಗಿ ಜನರು ಈ ಕೃತಿಯನ್ನು ಮೆಚ್ಚಿಕೊಂಡಿದ್ದಾರೆ. ಕರ್ನಾಟಕ ಸರ್ಕಾರ ನೀಡುವ ಚಲನಚಿತ್ರ ಸಾಹಿತ್ಯ ರಾಜ್ಯ ಪ್ರಶಸ್ತಿ ಕೂಡ ಈ ಕೃತಿಗೆ ಸಿಕ್ಕಿದೆ.

ಹಲವು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವ ಶರುಣು ಹುಲ್ಲೂರು ಅವರು ನಟ ಸುದೀಪ್​ ಅವರ ಬದುಕಿನ ಕುರಿತು ‘ಕಿಚ್ಚ’ ಎಂಬ ಪುಸ್ತಕ ಬರೆದಿದ್ದಾರೆ. ಒಂದೇ ವಾರದಲ್ಲಿ ಆ ಕೃತಿ ಎರಡನೇ ಮುದ್ರಣ ಕಂಡಿತ್ತು. ‘ಅಂಬರೀಶ್​’ ಕೃತಿಗೆ ಸಿಕ್ಕ ಜನಮೆಚ್ಚುಗೆಯಿಂದ ಅವರು ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ಹೇಳದೇ ಕೇಳದೇ ಅಂಬರೀಶ್ ಮನೆಗೆ ಬಂದಿದ್ದ ನಟ ವಿವೇಕ್; ವಿಶೇಷ ಘಟನೆ ನೆನಪಿಸಿಕೊಂಡ ಸುಮಲತಾ

Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
Daily Devotional: ಮಂಗಳಸೂತ್ರದ ಮಹತ್ವ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಬುಧಗ್ರಹ ಮಕರ ರಾಶಿಗೆ ಪ್ರವೇಶ ಮಾಡುವ ಈ ದಿನದ ರಾಶಿ ಭವಿಷ್ಯ ತಿಳಿಯಿರಿ
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ಸುದೀಪ್ ಸರ್ ನೋಡಿದ್ರೆ ಭಯ ಆಗುತ್ತೆ: ತೆಲುಗು ಬಿಗ್ ಬಾಸ್ ವಿನ್ನರ್ ಮಾತು
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಬಿಗ್ ಬಾಸ್ ಮನೆಯಲ್ಲಿ ಕೊನೇ ವಾರ ಊಟ ಸೇರಲ್ಲ: ವಿನ್ನರ್ ನಿಖಿಲ್ ಅನುಭವ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ