ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಯಶ್? ಹಿಟ್ ಸಿನಿಮಾ ಸೀಕ್ವೆಲ್​ನಲ್ಲಿ ರಾಕಿಂಗ್ ಸ್ಟಾರ್

| Updated By: ರಾಜೇಶ್ ದುಗ್ಗುಮನೆ

Updated on: Apr 22, 2024 | 8:08 AM

ನಿರ್ದೇಶಕ ಸುಭಾಷ್ ಘಾಯ್ ಅವರು ಈ ಮೊದಲು ‘ಖಳನಾಯಕ್’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ 1993ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಈ ಚಿತ್ರಕ್ಕೆ 31 ವರ್ಷಗಳ ಬಳಿಕ ಸೀಕ್ವೆಲ್ ಮಾಡಲಾಗುತ್ತಿದೆ.

ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಯಶ್? ಹಿಟ್ ಸಿನಿಮಾ ಸೀಕ್ವೆಲ್​ನಲ್ಲಿ ರಾಕಿಂಗ್ ಸ್ಟಾರ್
ಯಶ್-ರಣವೀರ್
Follow us on

ಕನ್ನಡದ ಸ್ಟಾರ್ ನಟ ಯಶ್ (Yash) ಅವರಿಗೆ ‘ಕೆಜಿಎಫ್ 2’ ಬಳಿಕ ಹಲವು ಆಫರ್​ಗಳು ಬರುತ್ತಿವೆ. ಬಾಲಿವುಡ್ ಆಫರ್​ಗಳು ಅವರನ್ನು ಹುಡುಕಿ ಬರುತ್ತಿವೆ. ಈಗಾಗಲೇ ಅವರು ಹಿಂದಿಯಲ್ಲಿ ‘ರಾಮಾಯಣ’ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಅವರಿಗೆ ಮತ್ತೊಂದು ಆಫರ್ ಬಂದಿದೆ ಎನ್ನಲಾಗಿದೆ. ಈ ಸಿನಿಮಾನ ಅವರು ಒಪ್ಪುತ್ತಾರೋ ಅಥವಾ ಇಲ್ಲವೋ ಎನ್ನುವ ಕುತೂಹಲ ಮೂಡಿದೆ. ಸದ್ಯ ಈ ವಿಚಾರದಲ್ಲಿ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಅಧಿಕೃತ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಸುಭಾಷ್ ಘಾಯ್ ಅವರು ಈ ಮೊದಲು ‘ಖಳನಾಯಕ್’ ಸಿನಿಮಾ ನಿರ್ದೇಶನ ಮಾಡಿದ್ದರು. ಈ ಚಿತ್ರ 1993ರಲ್ಲಿ ರಿಲೀಸ್ ಆಗಿತ್ತು. ಈ ಚಿತ್ರದಲ್ಲಿ ಸಂಜಯ್ ದತ್, ಮಾಧುರಿ ದೀಕ್ಷಿತ್, ಜಾಕಿ ಶ್ರಾಫ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಗೆದ್ದಿತ್ತು. ಈ ಚಿತ್ರಕ್ಕೆ 31 ವರ್ಷಗಳ ಬಳಿಕ ಸೀಕ್ವೆಲ್ ಮಾಡಲಾಗುತ್ತಿದೆ. ಈಗ ಸುಭಾಷ್ ಹೊಸ ಪಾತ್ರವರ್ಗದೊಂದಿಗೆ ಸಿನಿಮಾ ಮಾಡಲು ಆಸಕ್ತಿ ತೋರಿದ್ದಾರೆ. ಸಿನಿಮಾದ ಸ್ಕ್ರಿಪ್ಟ್ ಕೂಡ ಫೈನಲ್ ಆಗಿದೆ ಎನ್ನಲಾಗುತ್ತಿದೆ.

ಸಂಜಯ್ ದತ್ ಮಾಡಿದ ಬಲ್ಲು ಬಲರಾಮ್ ಪಾತ್ರ ಸಾಕಷ್ಟು ಗಮನ ಸೆಳೆದಿತ್ತು. ಈ ಪಾತ್ರಕ್ಕೆ ಸುಭಾಷ್ ಘಾಯ್ ಅವರು ರಣವೀರ್ ಸಿಂಗ್, ರಣಬೀರ್ ಕಪೂರ್ ಅವರನ್ನು ಅಪ್ರೋಚ್ ಮಾಡುವ ಪ್ಲ್ಯಾನ್​ನಲ್ಲಿದ್ದಾರೆ. ಇಷ್ಟೇ ಅಲ್ಲ, ದಕ್ಷಿಣದ ನಟರಿಗೂ ಆಫರ್ ಕೋಡೋ ಆಲೋಚನೆ ಅವರಿಗೆ ಇದೆ. ಯಶ್ ಹಾಗೂ ಅಲ್ಲು ಅರ್ಜುನ್ ಅವರು ಕೂಡ ಸುಭಾಷ್ ಲಿಸ್ಟ್​ನಲ್ಲಿದ್ದಾರೆ. ಬಲ್ಲು ಬಲರಾಮ್ ಪಾತ್ರವನ್ನು ಸಮರ್ಥವಾಗಿ ಮುನ್ನಡೆಸೋರು ಅವರಿಗೆ ಬೇಕಿದೆ.

ಇತ್ತೀಚೆಗೆ ಸುಭಾಷ್ ಘಾಯ್ ಅವರು ಈ ಬಗ್ಗೆ ಮಾತನಾಡಿದ್ದರು. ‘ಹೊಸ ಪಾತ್ರಗಳೊಂದಿಗೆ ನಾನು ಖಳನಾಯಕ್ ಸೀಕ್ವೆಲ್ ಮಾಡಲು ಬಯಸುತ್ತಿದ್ದೇನೆ. ಸಂಜಯ್ ದತ್ ಅವರೇ ಬಲ್ಲಿ ಬಲರಾಮ್ ಪಾತ್ರ ಮಾಡುತ್ತಾರೆ. ಬಲ್ಲುಗೆ ಈಗ 55 ವರ್ಷ’ ಎಂದು ಅವರು ಹೇಳಿದ್ದರು. ಈಗ ಅವರು ಯಶ್, ಅಲ್ಲು ಅರ್ಜನ್ ಅವರನ್ನು ಅಪ್ರೋಚ್ ಮಾಡುತ್ತಿರುವುದು ಯಾವ ಪಾತ್ರಕ್ಕೆ ಅನ್ನೋ ಕುತೂಹಲ ಮೂಡಿದೆ.

ಇದನ್ನೂ ಓದಿ: ಯಶ್, ರಣಬೀರ್ ನಟನೆಯ ‘ರಾಮಾಯಣ’ದ ಜತೆ ಸ್ಪರ್ಧೆ; ರಾಮನ ಬಗ್ಗೆ ಹೊಸ ಸಿನಿಮಾ

ಕಳೆದ ವರ್ಷ ಮಾಧುರಿ ದೀಕ್ಷಿತ್, ಸಂಜಯ್ ದತ್, ಜಾಕಿ ಶ್ರಾಫ್, ಅನುಪಮ್ ಖೇರ್ ಮೊದಲಾದವರು ‘ಖಳನಾಯಕ್’ ಚಿತ್ರದ 30ನೇ ವರ್ಷದ ಆ್ಯನಿವರ್ಸರಿ ಆಚರಿಸಿದ್ದರು. ಅವರು ಒಟ್ಟಾಗಿ ಕಾಣಿಸಿಕೊಂಡ ಫೋಟೋ ವೈರಲ್ ಆಗಿತ್ತು. ಈಗ ನಿರ್ದೇಶಕರು ಹೊಸ ಸಿನಿಮಾ ಮಾಡುವ ಸಾಹಸಕ್ಕೆ ಮುಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.