ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

Toxic Teaser Views: ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್ ಬಿಡುಗಡೆಯಾಗಿ ದಾಖಲೆ ವೀಕ್ಷಣೆ ಕಂಡಿದೆ. ಯಶ್ ಜನ್ಮದಿನದಂದು ರಿಲೀಸ್ ಆದ ಈ ಟೀಸರ್ 21 ಗಂಟೆಗಳಲ್ಲಿ 4.7 ಕೋಟಿ ವೀಕ್ಷಣೆ ಪಡೆದು ಹೊಸ ಹವಾ ಸೃಷ್ಟಿಸಿದೆ. ಯಶ್ ರವರ 'ರಾಯ' ಪಾತ್ರದ ಪರಿಚಯಿಸುವ ಈ ಟೀಸರ್, ಹಾಲಿವುಡ್ ಗುಣಮಟ್ಟದ ಮೇಕಿಂಗ್ ಮತ್ತು ಗ್ಯಾಂಗ್‌ಸ್ಟರ್ ಅವತಾರದಿಂದ ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ.

ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ
ಯಶ್

Updated on: Jan 09, 2026 | 7:34 AM

‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳಿಗೆ ಇದ್ದ ನಿರೀಕ್ಷೆ ತುಂಬಾನೇ ದೊಡ್ಡದು. ಈಗ ಟೀಸರ್ ರಿಲೀಸ್ ಆಗಿ ಸಂಚಲನ ಸೃಷ್ಟಿಸಿದೆ. ಟೀಸರ್ ಅಂದುಕೊಂಡಿದ್ದಕ್ಕಿಂತ ಹೆಚ್ಚು ರಾ ಆಗಿ ಮೂಡಿ ಬಂದಿದೆ. ಇದು ಅನೇಕರಿಗೆ ಅಚ್ಚರಿ ಮೂಡಿಸಿದೆ. ‘ಟಾಕ್ಸಿಕ್’ ಟೀಸರ್ ಈಗ ದಾಖಲೆಯ ವೀಕ್ಷಣೆ ಕಂಡಿದೆ. ಕನ್ನಡ ಚಿತ್ರರಂಗದ ಟೀಸರ್ ಒಂದು ಈ ರೀತಿಯಲ್ಲಿ ಹವಾ ಮಾಡಿದ್ದು ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎಂದರೂ ತಪ್ಪಾಗಲಾರದು.

‘ಟಾಕ್ಸಿಕ್’ ಸಿನಿಮಾ ಯಶ್ ಜನ್ಮದಿನದ ಪ್ರಯುಕ್ತ ಜನವರಿ 8ರಂದು ರಿಲೀಸ್ ಆಯಿತು. ಬೆಳಿಗ್ಗೆ ಸರಿಯಾಗಿ 10 ಗಂಟೆ 10 ನಿಮಿಷಕ್ಕೆ ಟೀಸರ್ ಪ್ರಸಾರ ಕಂಡಿತು. ಟೀಸರ್ ಓಪನಿಂಗ್ ದೃಶ್ಯ ನೋಡಿ, ಇದು ಕನ್ನಡದ ಚಿತ್ರವೋ ಅಥವಾ ಹಾಲಿವುಡ್ ಚಿತ್ರವೋ ಎಂಬ ಪ್ರಶ್ನೆ ಅಭಿಮಾನಿಗಳಿಗೆ ಮೂಡಿತು. ಆ ರೀತಿಯಲ್ಲಿ ಸಿನಿಮಾ ಮೇಕಿಂಗ್​ ಇದೆ. ಯಶ್ ಅವರ ಸ್ಟೈಲ್ ಗಮನ ಸೆಳೆದಿದೆ. ಈ ಟೀಸರ್ 21 ಗಂಟೆಯಲ್ಲಿ ಬರೋಬ್ಬರಿ 47 ಮಿಲಿಯನ್ ವೀಕ್ಷಣೆ ಕಂಡಿದೆ. ಅಂದರೆ 4.7 ವೀವ್ಸ್ ಆಗಿದೆ.

ಇದನ್ನೂ ಓದಿ: ಗೀತು ಮೋಹನ್​ದಾಸ್ ‘ಟಾಕ್ಸಿಕ್’ ಚಿತ್ರಿಸಿದ್ದಾರೆ ಅಂತ ನಂಬೋಕೆ ಆಗಲ್ಲ: ಆರ್​ಜಿವಿ ನೇರ ಮಾತು

24 ಗಂಟೆ ಕಳೆಯುವುದರ ಒಳಗೆ ಈ ಚಿತ್ರದ ಟೀಸರ್ 5 ಕೋಟಿ ವೀಕ್ಷಣೆ ಕಾಣುವ ಎಲ್ಲಾ ಸಾಧ್ಯತೆ ಇದೆ. ಯಶ್ ಅವರು ‘ರಾಯ’ ಹೆಸರಿನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರವನ್ನು ಪರಿಚಯಿಸಲು ಈ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್​​ನಲ್ಲಿ ಸೂಕ್ಷ್ಮವಾದ ಹಲವು ವಿಷಯಗಳನ್ನು ಹೇಳಲಾಗಿದೆ.

ಇದು ‘ಎ’ ಸರ್ಟಿಫಿಕೇಟ್ ಚಿತ್ರ ಆಗಬಹುದು ಎಂಬುದು ಎಲ್ಲರ ಊಹೆ. ಟೀಸರ್ ಅದಕ್ಕೆ ಸಾಕ್ಷಿ ಒದಗಿಸುವಂತಿದೆ. ಮೇಕಿಂಗ್ ವಿಷಯದಲ್ಲಿ ಹಾಲಿವುಡ್​ನ ಇವರು ಪಾಲಿಸಿರೋದು ಸ್ಪಷ್ಟವಾಗಿ ಕಾಣುತ್ತದೆ. ಹೀಗಾಗಿ, ಸಿನಿಮಾ ವಿಷಯದಲ್ಲಿ ಹಾಲಿವುಡ್ ಅನುಭವ ಸಿಗಲಿದೆ. ಯಶ್ ಅವರು ‘ಕೆಜಿಎಫ್ 2’ ಚಿತ್ರಕ್ಕಿಂತ ಹೆಚ್ಚು ರಾ ಆಗಿ, ಗ್ಯಾಂಗ್​ಸ್ಟರ್ ಅವಾತಾರದಲ್ಲಿ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ. ಗೀತು ಮೋಹನ್​ದಾಸ್ ಚಿತ್ರದ ನಿರ್ದೇಶಕಿ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Fri, 9 January 26