‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್​ಕುಮಾರ್

| Updated By: ರಾಜೇಶ್ ದುಗ್ಗುಮನೆ

Updated on: Sep 13, 2024 | 7:57 AM

‘ಮುಂಗಾರು ಮಳೆ’ ಸಿನಿಮಾದ ಕಥೆ ಮಾಡಿಕೊಂಡು ಯೋಗರಾಜ್ ಭಟ್ ಅನೇಕ ನಿರ್ಮಾಪಕರ ಮನೆಗೆ ಅಲೆದಿದ್ದರು. ಹೋಗಿ ಕಥೆ ಹೇಳಿದ್ದಷ್ಟೇ ಬಂತು, ಆದರೆ, ಯಾರೂ ಸಿನಿಮಾ ನಿರ್ಮಾಣ ಮಾಡಲು ಒಪ್ಪಿರಲಿಲ್ಲ. ಆರು-ಏಳು ನಿರ್ಮಾಪಕರಿಗೆ ಯೋಗರಾಜ್ ಭಟ್ ಕಥೆ ಹೇಳಿದ್ದರು.

‘ಮುಂಗಾರು ಮಳೆ’ ಚಿತ್ರದ ಆಫರ್ ಗಣೇಶ್ ಕೈ ಸೇರಲು ಕಾರಣ ಆಗಿದ್ದೇ ಪುನೀತ್ ರಾಜ್​ಕುಮಾರ್
ಪುನೀತ್-ಗಣೇಶ್
Follow us on

‘ಮುಂಗಾರು ಮಳೆ’ ಸಿನಿಮಾದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. 2006ರಲ್ಲಿ ಬಂದ ಈ ಚಿತ್ರ ದೊಡ್ಡ ಮಟ್ಟದ ಜನಪ್ರಿಯತೆ ಪಡೆಯಿತು. ಈ ಸಿನಿಮಾದಿಂದ ಗಣೇಶ್ ಅವರ ಹೆಸರು ಮುನ್ನೆಲೆಗೆ ಬಂತು. ನಿರ್ದೇಶಕ ಯೋಗರಾಜ್ ಭಟ್ ಹೆಸರು ಸ್ಯಾಂಡಲ್​ವುಡ್​ನಲ್ಲಿ ಜನಪ್ರಿಯತೆ ಪಡೆಯಿತು. ಈ ಆಫರ್ ಮೊದಲು ಪುನೀತ್ ರಾಜ್​ಕುಮಾರ್​ಗೆ ಹೋಗಿತ್ತಂತೆ. ಆ ಬಳಿಕ ಅದು ಗಣೇಶ್ ಕೈ ಸೇರುವ ಕೆಲಸ ಆಗಿದ್ದು ದೊಡ್ಮನೆಯಿಂದಲೇ. ಆ ಬಗ್ಗೆ ಇಂದು ನಾವು ನಿಮಗೆ ಹೇಳುತ್ತಿದ್ದೇವೆ.

ಯೋಗರಾಜ್ ಭಟ್ ಅವರು ‘ಮುಂಗಾರು ಮಳೆ’ ಸಿನಿಮಾದ ಕಥೆ ಮಾಡಿಕೊಂಡು ಅನೇಕ ನಿರ್ಮಾಪಕರ ಮನೆಗೆ ಅಲೆದಿದ್ದರು. ಹೋಗಿ ಕಥೆ ಹೇಳಿದ್ದಷ್ಟೇ ಬಂತು, ಆದರೆ, ಯಾರೂ ಸಿನಿಮಾ ನಿರ್ಮಾಣ ಮಾಡಲು ಮುಂದೆ ಬರಲಿಲ್ಲ. ಆರು-ಏಳು ನಿರ್ಮಾಪಕರ ಮನೆ ಬಾಗಿಲನ್ನು ಯೋಗರಾಜ್ ಭಟ್ ತಟ್ಟಿ ಆಗಿತ್ತು. ಈ ಕಾರಣಕ್ಕೆ ಅವರಿಗೆ ಸಿನಿಮಾದ ಬಗ್ಗೆ ಯಾವುದೇ ಹೋಪ್ ಇರಲಿಲ್ಲ. ಸಿನಿಮಾ ಸೆಟ್ಟೇರುತ್ತದೆ ಎಂದುಕೂಡ ಅವರು ಅಂದುಕೊಂಡಿರಲಿಲ್ಲ.

‘ಆರೆಂಟು ನಿರ್ಮಾಪಕರಿಗೆ ಕಥೆ ಹೇಳಿದ್ದೆವು. ಚೆನ್ನಾಗಿ ಗೈಡ್ ಮಾಡಿದ್ದು ಅಪ್ಪು ಹಾಗೂ ರಾಘಣ್ಣ. ಸಿನಿಮಾಗೆ ಬೇಕಾಗಿದ್ದು ಎಲ್ಲವೂ ಇದರಲ್ಲಿ ಇದೆ. ಅವರ (ಅಪ್ಪು) ಇಮೇಜ್​ಗೆ ತಕ್ಕಂತೆ ಸಿನಿಮಾ ಬದಲಿಸಲು ಹೋಗಿ ಗಬ್ಬೆಬಿಸಬೇಡಿ. ಹೇಗಿದೆಯೋ ಹಾಗೆ ಸಿನಿಮಾ ಮಾಡಿ. ಹೊಸಬರನ್ನು ಹಾಕಿಕೊಂಡು ಸಿನಿಮಾ ಮಾಡಿ ಎಂದರು. ವ್ಯಾಲಿಡ್ ಪಾಯಿಂಟ್ ಕೊಟ್ಟರು’ ಎಂದಿದ್ದರು ಯೋಗರಾಜ್ ಭಟ್. ಅಂದು ಪುನೀತ್ ಹಾಗೂ ರಾಘಣ್ಣ ಈ ಐಡಿಯಾ ಕೊಡದಿದ್ದರೆ ಯೋಗರಾಜ್ ಭಟ್ ಅವರು ಸ್ಟಾರ್ ಹೀರೋಗಳ ಹುಡುಕಾಟದಲ್ಲೇ ಇರುತ್ತಿದ್ದರು.

ಇದನ್ನೂ ಓದಿ: ದುಬೈನಲ್ಲಿ ‘ಕೃಷ್ಣಂ ಪ್ರಣಯ ಸಖಿ’ ವಿಶೇಷ ಪ್ರದರ್ಶನ; ಗಣೇಶ್ ಸಿನಿಮಾ ಸೂಪರ್ ಹಿಟ್

ಹೊಸ ಹೀರೋಗಳ ಹುಡುಕಾಟದಲ್ಲಿ ಇದ್ದ ಯೋಗರಾಜ್ ಭಟ್​ ಅವರಿಗೆ ಸಿಕ್ಕಿದ್ದು ಗಣೇಶ್. ನಂತರ ಆಗಿದ್ದೆಲ್ಲವೂ ಇತಿಹಾಸ. ಈ ಸಿನಿಮಾ ನೂರಾರು ದಿನ ಥಿಯೇಟರ್​ನಲ್ಲಿ ಓಡಿತು. ಬಾಕ್ಸ್ ಆಫೀಸ್​ನಲ್ಲೂ ದೊಡ್ಡ ಮಟ್ಟದ ಗಳಿಕೆ ಮಾಡಿತು. ಗಣೇಶ್ ಅವರು ಸ್ಯಾಂಡಲ್​ವುಡ್​ನಲ್ಲಿ ನೆಲೆ ಊರಿದರು. ಇತ್ತೀಚೆಗೆ ಅವರ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.