ಶ್ರೀದೇವಿ-ಯುವರಾಜ್ ವಿಚ್ಛೇದನ: ವಿಚಾರಣೆ ಮುಂದೂಡಿದ ನ್ಯಾಯಾಲಯ

|

Updated on: Jul 04, 2024 | 12:24 PM

ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನ ಅರ್ಜಿಯ ವಿಚಾರಣೆ ಇಂದು ಒಂದನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದಿದೆ. ಕೌನ್ಸಲಿಂಗ್ ಗೆ ಅವಕಾಶ ನೀಡಿರುವ ನ್ಯಾಯಾಧೀಶರು ವಿಚಾರಣೆ ಮುಂದೂಡಿದ್ದಾರೆ.

ಶ್ರೀದೇವಿ-ಯುವರಾಜ್ ವಿಚ್ಛೇದನ: ವಿಚಾರಣೆ ಮುಂದೂಡಿದ ನ್ಯಾಯಾಲಯ
Follow us on

ದೊಡ್ಮನೆ ಕುಡಿ ಯುವ ರಾಜ್ ಕುಮಾರ್ ಹಾಗೂ ಅವತ ಪತ್ನಿ ಶ್ರೀದೇವಿ‌ ವಿಚ್ಛೇದನ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದೆ. ಕೌಟುಂಬಿಕ ನ್ಯಾಯಾಲಯದಲ್ಲಿ ನಟ ಯುವ ರಾಜ್ ಕುಮಾರ್ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಶ್ರೀದೇವಿಗೆ ಅಕ್ರಮ ಸಂಬಂಧ ಇದೆಯೆಂಬ ಆರೋಪವನ್ನು ಸಹ ಹೊರಿಸಿದ್ದಾರೆ. ಇಂದು ವಿಚ್ಛೇದನ ಅರ್ಜಿ ವಿಚಾರಣೆ ನ್ಯಾಯಾಲಯದಲ್ಲಿ ನಡೆದಿದ್ದು, ಆರಂಭಿಕ ವಿಚಾರಣೆ ಬಳಿಕ, ಮುಂದಿನ ವಿಚಾರಣೆಯನ್ನು‌ ಆಗಸ್ಟ್ 23 ಕ್ಕೆ ಮುಂದೂಡಲಾಗಿದೆ.

ಯುವ ರಾಜ್ ಕುಮಾರ್ ಸಲ್ಲಿಸಿರುವ ವಿಚ್ಛೇದನಕ್ಕೆ ಶ್ರೀದೇವಿ ಆಕ್ಷೇಪಣೆ ಸಲ್ಲಿಸಿದ್ದಾರೆ. ಆಕ್ಷೇಪಣೆ ಬಗ್ಗೆ ವಾದ ಮಂಡಿಸಲು ಶ್ರೀದೇವಿ ಪರ ವಕೀಲರು ಅವಕಾಶ ಕೇಳಿದರು. ಆದರೆ ಇದಕ್ಕೆ ಅವಕಾಶ ನೀಡದ ನ್ಯಾಯಾಧೀಶರು. ಇದು ಕೌಟುಂಬಿಕ ಕಲಹವಾದ್ದರಿಂದ ಮೊದಲು ಕೌನ್ಸಲಿಂಗ್ ಆಗಬೇಕು. ಅದು ಮುಕ್ತಾಯ ಆದ ಬಳಿಕವಷ್ಟೆ ಆಕ್ಷೇಪಣೆ ಕೇಳಲಾಗುತ್ತದೆ ಎಂದಿದ್ದಾರೆ. ಮೀಡಿಯೇಟರ್ ಕೌನ್ಸಲಿಂಗ್ ನಡೆದ ಬಳಿಕವಷ್ಟೆ ಪ್ರಕರಣದ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ ಎಂದು 1 ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶೆ ಕಲ್ಪನಾ ಹೇಳಿದ್ದಾರೆ. ಕೌನ್ಸಲಿಂಗ್ ಗೆ ಅವಕಾಶ ನೀಡಿರುವ ನ್ಯಾಯಾಧೀಶರು ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ 23 ಕ್ಕೆ ಮುಂದೂಡಿದ್ದಾರೆ‌.

ಇದನ್ನೂ ಓದಿ:ಪ್ರೇಯಸಿಯನ್ನು ಗುಟ್ಟಾಗಿ ಭೇಟಿಯಾಗಲು ಹೋಗಿದ್ದ ಯುವಕನನ್ನು ಹಿಡಿದು ತಾಳಿ ಕಟ್ಟಿಸಿದ ಜನರು

ಯುವ ರಾಜ್ ಕುಮಾರ್ ಹಾಗೂ ಶ್ರೀದೇವಿ‌ ವಿವಾಹವಾಗಿ ಐದು ವರ್ಷಗಳಾಗಿವೆ. ಆದರೆ ಇತ್ತೀಚೆಗೆ ಅವರ ದಾಂಪತ್ಯದಲ್ಲಿ ಬಿರುಕುಂಟಾಗಿದೆ. ಸುದ್ದಿಗೋಷ್ಠಿ ನಡೆಸಿದ್ದ ಯುವ ರಾಜ್ ಕುಮಾರ್ ಪರ ವಕೀಲರು, ಶ್ರೀದೇವಿಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದರು‌. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀದೇವಿ, ಯುವ ರಾಜ್ ಕುಮಾರ್ ಹಾಗೂ ಸಪ್ತಮಿ ಗೌಡ ಅಕ್ರಮ ಸಂಬಂಧದಲ್ಲಿದ್ದಾರೆ‌‌. ಇಬ್ಬರೂ ಒಟ್ಟಿಗೆ ರೂಂ ನಲ್ಲಿ ಶ್ರೀದೇವಿ ಕೈಗೆ ಸಿಕ್ಕಿ ಹಾಕಿಕೊಂಡಿದ್ದರು ಎಂದಿದರು.

ಅಮೆರಿಕಕ್ಕೆ ಓದಲು ತೆರಳಿದ್ದ ಶ್ರೀದೇವಿ ವಿಚ್ಛೇದನ ಅರ್ಜಿ ಸಲ್ಲಿಕೆಯಾದ ಬಳಿಕ ಭಾರತಕ್ಕೆ ಮರಳಿದ್ದು ಕಳೆದ ಕೆಲವು ದಿನಗಳಿಂದಲೂ ಇಲ್ಲಿಯೇ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಶ್ರೀದೇವಿ, ನನಗೆ ಅಂಟಿರುವ ಕಳಂಕ ಹೋಗಲಾಡಿಸಿಕೊಳ್ಳುವವರೆಗೆ ಹೋರಾಟ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ.

ಅದಕ್ಕೆ ಸರಿಯಾಗಿ, ಸಪ್ತಮಿ ಗೌಡ ಅವರದ್ದು ಎನ್ನಲಾದ ಆಡಿಯೋ ಒಂದು ವೈರಲ್ ಆಗಿದ್ದು, ಆಡಿಯೋನಲ್ಲಿ ಸಪ್ತಮಿ ಗೌಡ ಅವರು ತಾವು ಯುವ ರಾಜ್ ಜೊತೆಗೆ ಆಪ್ತವಾಗಿದ್ದುದಾಗಿ ಹೇಳಿದ್ದಾರೆ. ಅದಕ್ಕೆಲ್ಲ ಯುವರಾಜ್ ಕುಮಾರ್ ಕಾರಣ ಎಂದಿದ್ದಾರೆ. ಒಟ್ಟಾರೆ ಈಗ ಪ್ರಕರಣ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದು ಅಲ್ಲಿ ಯಾರಿಗೆ ನ್ಯಾಯ ದೊರಕುತ್ತದೆ ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ