ಪುನೀತ್ ರಾಜ್ಕುಮಾರ್ ಅವರು 46ನೇ ವಯಸ್ಸಿಗೆ ಮೃತಪಟ್ಟಿದ್ದಾರೆ. ಓರ್ವ ಸ್ಟಾರ್ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಪುನೀತ್ ನಿಧನದ ನಂತರ ಸಾಕಷ್ಟು ವಿಚಾರಗಳು ವೈರಲ್ ಆಗುತ್ತಿವೆ. ಅವರು ಮಂತ್ರಾಲಯಕ್ಕೆ ತೆರಳಿದಾಗ ವೀಣೆ ಅಲುಗಾಡಿದ್ದು ಅಪಶಕುನದ ಸೂಚಕವಾಗಿತ್ತು ಎಂದು ಬಣ್ಣಿಸಲಾಗುತ್ತಿದೆ. ಈಗ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ಜೆರ್ಸಿ ಫೋಟೋ ವೈರಲ್ ಆಗುತ್ತಿದೆ. ಇದಕ್ಕೆ ಸಂಬಂಧಿಸಿ ಸಾಕಷ್ಟು ಲೆಕ್ಕಾಚಾರಗಳು ಹುಟ್ಟಿಕೊಂಡಿವೆ.
ಪುನೀತ್ ನಿಧನ ಹೊಂದಿದ್ದು 29ನೇ ತಾರೀಕಿನಂದು. ಅಚ್ಚರಿ ಎಂದರೆ, ‘ಯುವರತ್ನ’ ಸಿನಿಮಾದ ಜೆರ್ಸಿ ಸಂಖ್ಯೆ ಕೂಡ 29. ಸಿನಿಮಾದಲ್ಲಿ ಈ ಜೆರ್ಸಿಗೆ 29 ಎಂಬ ಸಂಖ್ಯೆ ಕೊಡೋಕೂ ಒಂದು ಕಾರಣವಿತ್ತು. ‘ಯುವರತ್ನ’ ಅಪ್ಪು ಹೀರೋ ಆಗಿ ನಟಿಸಿದ 29ನೇ ಸಿನಿಮಾ. ಈ ಕಾರಣಕ್ಕೆ ಜೆರ್ಸಿಗೆ ಈ ಸಂಖ್ಯೆ ನೀಡಲಾಗಿತ್ತು. ಕಾಕತಾಳೀಯ ಎಂಬಂತೆ ಅದೇ ತಾರೀಕಿನಂದು (ಅಕ್ಟೋಬರ್ 29) ಪುನೀತ್ ಮೃತಪಟ್ಟಿದ್ದಾರೆ.
46 ವರ್ಷಕ್ಕೆ ಅಪ್ಪು ನಿಧನ ಹೊಂದಿದ್ದಾರೆ. ಅವರು ಮೃತಪಟ್ಟ ದಿನಾಂಕ ಹಾಗೂ ಅವರು ಹುಟ್ಟಿದ ದಿನಾಂಕ ಸೇರಿಸಿದರೆ ಬರುವ ಸಂಖ್ಯೆ ಕೂಡ 46! ಪುನೀತ್ ಹುಟ್ಟಿದ್ದು ಮಾರ್ಚ್ 17ರಂದು. ಮೃತಪಟ್ಟಿದ್ದು ಅಕ್ಟೋಬರ್ 29. 29+17= 46. ಅಪ್ಪು ಹುಟ್ಟಿದಾಗ ಅಣ್ಣಾವ್ರ ವಯಸ್ಸು ಕೂಡ 46 ಆಗಿತ್ತು.
ಇನ್ನು, 17ನೇ ತಾರೀಕಿನಂದು ಹುಟ್ಟುವುದು ಅದೃಷ್ಟವಲ್ಲ ಎಂಬ ಥಿಯರಿಯೂ ಹರಿದಾಡುತ್ತಿದೆ. ಪುನೀತ್ ರಾಜ್ಕುಮಾರ್ ಜನಿಸಿದ್ದು ಮಾರ್ಚ್ 17ರಂದು. ಅವರ ರೀತಿಯೇ ಹೃದಯಾಘಾತದಲ್ಲಿ ನಿಧನರಾದ ಚಿರಂಜೀವಿ ಸರ್ಜಾ ಜನಿಸಿದ್ದು ಅಕ್ಟೋಬರ್ 17ರಂದು. ಇತ್ತೀಚೆಗೆ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಸಂಚಾರಿ ವಿಜಯ್ ಅವರ ಜನ್ಮ ದಿನಾಂಕ ಜುಲೈ 17. ಇವರೆಲ್ಲರಿಗೂ ಈ ಸಂಖ್ಯೆಯೇ ಕಂಟಕವಾಯ್ತೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಹಾಗೆಯೇ ಕನ್ನಡದ ಖ್ಯಾತ ನಟ ರಘುವೀರ್ ಜನಿಸಿದ್ದು ಕೂಡ ಮೇ 17ರಂದು. ಅವರು ಸಹ ಹೃದಯಾಘಾತದಿಂದಲೇ ಮೃತಪಟ್ಟಿದ್ದು ಎಂಬುದು ಕಾಕತಾಳೀಯ.
ಇದನ್ನೂ ಓದಿ: Puneeth Rajkumar: ಒಂದೇ ದಿನಾಂಕದಲ್ಲಿ ಜನಿಸಿದ ವಿಜಯ್, ಅಪ್ಪು, ಚಿರುಗೆ ಇದೆಂಥ ದುರ್ವಿಧಿ; ಕಂಟಕವಾಯ್ತಾ ಸಂಖ್ಯೆ 17?