ಸದ್ಯ ಸ್ಯಾಂಡಲ್ವುಡ್ನಲ್ಲಿ ಪ್ರೀ ರಿಲೀಸ್ ಕಾರ್ಯಕ್ರಮದ ಹವಾ ಜೋರಾಗಿದೆ. ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ದಾವಣಗೆರೆಯಲ್ಲಿ ಅದ್ದೂರಿಯಾಗಿ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದಾದ ಬೆನ್ನಲ್ಲೇ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತಂಡ ಕೂಡ ರಿಲೀಸ್ಗೂ ಮುನ್ನ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಿತ್ತು. ಈಗ ಪುನೀತ್ ರಾಜ್ಕುಮಾರ್ ನಟನೆಯ ಯುವರತ್ನ ಚಿತ್ರ ಕೂಡ ಇದೇ ಹಾದಿ ತುಳಿದಿದೆ.
ಯುವರತ್ನ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ. ಮಾರ್ಚ್ 20ರಂದು ಮೈಸೂರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಯುವರತ್ನ ಪ್ರೀ ರಿಲೀಸ್ ಮತ್ತು ಆಡಿಯೋ ಲಾಂಚ್ ಒಟ್ಟಿಗೆ ನೆರವೇರಲಿದೆ. ಇದಕ್ಕಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಇತ್ತೀಚೆಗೆ ಟ್ವೀಟ್ ಮಾಡಿದ್ದ ಹೊಂಬಾಳೆ ಫಿಲ್ಸ್ಮ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ, ಯುವರತ್ನ ಪ್ರೀ ರಿಲೀಸ್ ಇವೆಂಟ್ ಬಗ್ಗೆ ಸೂಚನೆ ನೀಡಿದ್ದರು. ಈಗ ಈ ಬಗ್ಗೆ ಖಚಿತ ಮಾಹಿತಿ ಸಿಕ್ಕಂತಾಗಿದೆ.
Big Pre Release Event Planning underway. Update in a few days.#Yuvarathnaa@hombalefilms @PuneethRajkumar @VKiragandur @SanthoshAnand15 @MusicThaman @KRG_Connects @sayyeshaa @Dhananjayaka @diganthmanchale @prakashraaj @ssonugowda pic.twitter.com/vyfFAC1QVg
— Karthik Gowda (@Karthik1423) March 4, 2021
ಸ್ಯಾಂಡಲ್ವುಡ್ ಪಾಲಿಗೆ ಪ್ರೀ ರಿಲೀಸ್ ಇವೆಂಟ್ ಹೊಸತು ಎಂದೇ ಹೇಳಬಹುದು. ತೆಲುಗಿನಲ್ಲಿ ಸ್ಟಾರ್ ನಟರ ಚಿತ್ರ ರಿಲೀಸ್ ಆಗುವುದಕ್ಕೂ ಮುನ್ನ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಪದ್ದತಿ ನಡೆದುಕೊಂಡು ಬಂದಿದೆ. ಈಗ ಈ ಟ್ರೆಂಡ್ ಕನ್ನಡ ಚಿತ್ರರಂಗದಲ್ಲೂ ಶುರುವಾದಂತಾಗಿದೆ.
ಪುನೀತ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿಬಂದ ರಾಜಕುಮಾರ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದಾದ ನಾಲ್ಕು ವರ್ಷಗಳ ನಂತರದಲ್ಲಿ ಇದೇ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಚಿತ್ರ ಯುವರತ್ನ. ಈ ಮೊದಲು ರಿಲೀಸ್ ಆಗಿರುವ ಸಿನಿಮಾ ಟೀಸರ್ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಈ ಸಿನಿಮಾದಲ್ಲಿ ಪುನೀತ್ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಪುನೀತ್ಗೆ ಜತೆಯಾಗಿ ಸಯ್ಯೇಶಾ ನಟಿಸಿದ್ದಾರೆ. ಧನಂಜಯ್ ಹಾಗೂ ಪ್ರಕಾಶ್ ರಾಜ್ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ.
ಇದನ್ನೂ ಓದಿ: Paatashaala Song: ಪಾಠಶಾಲಾ ಹಾಡಿಗೆ ತಲೆದೂಗಿದ ಪುನೀತ್ ರಾಜ್ಕುಮಾರ್ ಫ್ಯಾನ್ಸ್! ನಿಮಗೂ ಇಷ್ಟವಾಯ್ತಾ?