‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’; ಹರಾಮ್ ವಿಷಯದಲ್ಲಿ ಝೈದ್ ಖಾನ್ ಖಡಕ್ ತಿರುಗೇಟು

ನಟ ಝೈದ್ ಖಾನ್ ಅವರ 'ಕಲ್ಟ್' ಸಿನಿಮಾ ಜನವರಿ 23ಕ್ಕೆ ಬಿಡುಗಡೆ ಆಗಲಿದೆ. ಟ್ರೇಲರ್‌ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಝೈದ್ ಖಾನ್‌ಗೆ ಹರಾಮ್ ವಿಷಯದ ಬಗ್ಗೆ ಪ್ರಶ್ನೆ ಎದುರಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ನಟ, 'ಸತ್ತ ಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ' ಎಂದು ದಿಟ್ಟ ಉತ್ತರ ನೀಡಿದ್ದಾರೆ. ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ ಮತ್ತು ನಟನೆಗೂ ನಿಜ ಜೀವನಕ್ಕೂ ಸಂಬಂಧವಿಲ್ಲ ಎಂದಿದ್ದಾರೆ.

‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’; ಹರಾಮ್ ವಿಷಯದಲ್ಲಿ ಝೈದ್ ಖಾನ್ ಖಡಕ್ ತಿರುಗೇಟು
ಝೈದ್ ಖಾನ್

Updated on: Jan 17, 2026 | 10:57 AM

ನಟ ಝೈದ್ ಖಾನ್ ಅವರು ‘ಕಲ್ಟ್’ ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಬರಲು ರೆಡಿ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​​​ನಲ್ಲಿ ಝೈದ್ ಖಾನ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ವಿವಿಧ ಶೇಡ್​​​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಈಗ ಝೈದ್ ಖಾನ್ ಅವರಿಗೆ ಹರಾಮ್ ವಿಷಯದ ಬಗ್ಗೆ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ.‘ಸತ್ತಮೇಲೆ ದೇವರಿಗೆ ಲೆಕ್ಕ ಕೊಟ್ಕೋತಿನಿ’ ಎಂದು ನೇರಮಾತುಗಳಲ್ಲಿ ಹೇಳಿದ್ದಾರೆ.

ಝೈದ್ ಖಾನ್ ಅವರು ಮುಸ್ಲಿಂ ಧರ್ಮದವರು. ಆದರೆ, ಅವರು ಎಲ್ಲಾ ಧರ್ಮಕ್ಕೂ ಸಮಾನ ಆದ್ಯತೆ ನೀಡುತ್ತಾರೆ. ಅವರ ಮೊದಲ ಸಿನಿಮಾ ‘ಬನಾರಸ್’ ಕಾಶಿ ಭಾಗದಲ್ಲಿ ಶೂಟ್ ಆಗಿದೆ. ಇತ್ತೀಚೆಗೆ ‘ಕಲ್ಟ್’ ಸಿನಿಮಾ ಪ್ರಚಾರದ ವೇಳೆ ಸಂಕ್ರಾಂತಿ ಹಬ್ಬ ಆಚರಣೆ ಮಾಡಿದ್ದಾರೆ. ಇದನ್ನು ಅವರ ಧರ್ಮದವರು ಪ್ರಶ್ನೆ ಮಾಡುವುದಿಲ್ಲವೇ ಎಂಬ ಪ್ರಶ್ನೆ ಎದುರಾಯಿತು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಾನು ಎಲ್ಲಾ ಧರ್ಮವನ್ನು ಸಮಾನವಾಗಿ ಕಾಣುತ್ತೇನೆ’ ಎಂದಿದ್ದಾರೆ.

ಆ ಬಳಿಕ ಝೈದ್ ಖಾನ್ ಅವರಿಗೆ ಹರಾಮ್ ಬಗ್ಗೆ ಪ್ರಶ್ನೆ ಎದುರಾಯಿತು. ‘ಕುರಾನ್ ಅಲ್ಲಿ ಮದ್ಯ ಸೇವನೆ ಮಾಡಬಾರದು, ಹಿಂಸಾಚಾರ ಮಾಡಬಾರದು ಎಂದೆಲ್ಲ ಇದೆ. ಅದೆಲ್ಲ ಹರಾಮ್. ಆದರೆ, ಸಿನಿಮಾದಲ್ಲಿ ಅದನ್ನೇ ತೋರಿಸಿದ್ದೀರಿ’ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ನಟನೆಯನ್ನು ನಟನೆಯಾಗಿ ಮಾತ್ರ ನೋಡುತ್ತೇನೆ. ಅದಕ್ಕೂ ನಿಜ ಜೀವನಕ್ಕೂ ಕನೆಕ್ಟ್ ಮಾಡಬಾರದು’ ಎಂದರು.

ಇದನ್ನೂ ಓದಿ: ಫ್ಲೆಕ್ಸ್ ವಿಚಾರಕ್ಕೆ ಪೌರಾಯುಕ್ತೆಗೆ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್

ಆ ಬಳಿಕ ಮತ್ತೆ ಇದೇ ವಿಷಯವಾಗಿ ಪ್ರಶ್ನೆಗಳು ಎದುರಾದವು. ಇದಕ್ಕೆ ಉತ್ತರಿಸಿದ ಝೈದ್ ಖಾನ್, ‘ಸತ್ತ ಮೇಲೆ ನಾನು ದೇವರಿಕೆ ಲೆಕ್ಕ ಕೊಟ್ಟುಕೊಳ್ಳುತ್ತೇನೆ’ ಎಂದರು. ಅವರ ಉತ್ತರಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಕ್ಕಿದೆ.
ಝೈದ್ ಖಾನ್ ಅವರ ಕಲ್ಟ್ ಸಿನಿಮಾ ಜನವರಿ 23ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಝೈದ್ ಜೊತೆ ರಂಗಾಯಣ ರಘು, ಮಲೈಕಾ ವಾಸುಪಾಲ್, ರಚಿತಾ ರಾಮ್, ಅಚ್ಯುತ್ ಕುಮಾರ್ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.