10 ಸಾವಿರ ಕೋಟಿ ಕಲೆಕ್ಷನ್ ಮಾಡಿದ ಎನಿಮೇಟೇಡ್ ಚಿತ್ರ
'ಝೂಟೋಪಿಯಾ 2' ಸಿನಿಮಾ 10,000 ಕೋಟಿ ರೂಪಾಯಿ ಗಳಿಸಿ ವಿಶ್ವದ ಗಮನ ಸೆಳೆದಿದೆ. ಅನಿಮೇಟೆಡ್ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಯಶಸ್ಸು ಕಾಣುವುದಿಲ್ಲ ಎಂಬ ನಂಬಿಕೆಯನ್ನು ಈ ಚಿತ್ರ ಸುಳ್ಳು ಮಾಡಿದೆ. 2000 ಕೋಟಿ ಬಜೆಟ್‌ನಲ್ಲಿ ತಯಾರಾದ ಈ ಹಾಲಿವುಡ್ ಚಿತ್ರ ಭಾರತೀಯ ನಿರ್ಮಾಪಕರಿಗೂ ಅನಿಮೇಟೆಡ್ ಸಿನಿಮಾಗಳಲ್ಲಿ ಹೂಡಿಕೆ ಮಾಡಲು ಪ್ರೇರಣೆ ನೀಡಿದೆ.

ಹಾಲಿವುಡ್ನಲ್ಲಿ ತಯಾರಿಸೋ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ. ಈ ಚಿತ್ರಗಳು ಸಾವಿರಾರು ಕೋಟಿ ರೂಪಾಯಿ ಗಳಿಕೆ ಮಾಡಿದ ಉದಾಹರಣೆ ಇದೆ. ಇದಕ್ಕೆ ಕಾರಣ ಸಿನಿಮಾದ ಅದ್ಧೂರಿತನ. ಈಗ ಎನಿಮೇಟೆಡ್ ಚಿತ್ರವೊಂದು 10 ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದರೆ ಎಂದರೆ ನೀವು ನಂಬ್ತೀರಾ? ನಂಬಲೇಬೇಕು. ಇಂತಹ ಅಪರೂಪದ ಸಾಧನೆಯನ್ನು ‘ಝೂಟೋಪಿಯಾ 2’ ಸಿನಿಮಾ ಮಾಡಿದೆ. ಈ ಸಿನಿಮಾ ವಿಶ್ವಾದ್ಯಂತ 1.137 ಬಿಲಿಯನ್ ಡಾಲರ್ ಗಳಿಸಿದೆ. ಇದನ್ನು ಭಾರತೀಯ ರುಪಾಯಿಗೆ ಬದಲಾವಣೆ ಮಾಡಿದರೆ 10 ಸಾವಿರ ಕೋಟಿ ರೂಪಾಯಿ ಆಗಲಿದೆ.
ಅನಿಮೇಟೆಡ್ ಸಿನಿಮಾಗಳನ್ನ ಜನರು ನೋಡೋದಿಲ್ಲ ಎಂಬುದು ಅನೇಕರ ನಂಬಿಕೆ. ಹಣ ಹಾಕಿದರೆ ಹಣ ಹಿಂದಿರುಗೋದಿಲ್ಲ ಎಂಬ ಮನಸ್ಥಿತಿ ಭಾರತೀಯ ನಿರ್ಮಾಪಕರಲ್ಲಿ ಇದೆ. ಇಷ್ಟೇ ಅಲ್ಲ, ಈ ಚಿತ್ರಗಳು ಥಿಯೇಟರ್ನಲ್ಲಿ ಯಾವುದೇ ಕಾರಣಕ್ಕೂ ಹಿಟ್ ಆಗುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದಾಗಿದೆ. ಆದರೆ, ಇದನ್ನು ಸುಳ್ಳು ಮಾಡಿದೆ ‘ಝೂಟೋಪಿಯಾ 2’ ಸಿನಿಮಾ.
2016ರಲ್ಲಿ ‘ಝೂಟೋಪಿಯಾ’ ಚಿತ್ರ ರಿಲೀಸ್ ಆಯಿತು. ಝೂಟೋಪಿಯಾ ಎಂಬ ಕಾಲ್ಪನಿಕ ಊರು. ಇಲ್ಲಿ ಕ್ರೂರ ಪ್ರಾಣಿ, ಸೌಮ್ಯ ಪ್ರಾಣಿಗಳು ಒಟ್ಟಾಗಿ ವಾಸಿಸುತ್ತವೆ. ಕಾಮಿಡಿ ಶೈಲಿಯಲ್ಲಿ ಈ ಸಿನಿಮಾ ಮೂಡಿ ಬಂದಿತ್ತು. ಇದರ ಸೀಕ್ವೆಲ್ ಆಗಿ ‘ಝೂಟೋಪಿಯಾ 2’ ಸಿನಿಮಾ ಮೂಡಿ ಬಂದಿದೆ.
ಇದು ಇಂಗ್ಲಿಷ್ ಸಿನಿಮಾ. ಈ ಚಿತ್ರದ ಬಜೆಟ್ 2 ಸಾವಿರ ಕೋಟಿ ರೂಪಾಯಿ. ಈ ಸಿನಿಮಾ ವಿಶ್ವಾದ್ಯಂತ 10 ಸಾವಿರ ಕೋಟಿ ರೂಪಾಯಿ ಅಷ್ಟು ಗಳಿಸಿದೆ. ಇದರಲ್ಲಿ ಅರ್ಧದಷ್ಟು ಗಳಿಕೆ ಚೀನಾ ಮಾರುಕಟ್ಟೆಯಿದ ಬಂದಿದೆ ಎನ್ನಲಾಗುತ್ತಿದೆ. ಇದರಿಂದ ಅನಿಮೇಟೆಡ್ ಚಿತ್ರಗಳನ್ನು ವಿಶ್ವಮಟ್ಟದಲ್ಲಿ ತರುವ ಪ್ರಯತ್ನ ಆಗಬೇಕು ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: ‘ಕಾಂತಾರ: ಚಾಪ್ಟರ್ 1’ ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ನೀಡಿದ ಹೊಂಬಾಳೆ ಫಿಲ್ಮ್ಸ್; ದಾಖಲೆ ಮೇಲೆ ದಾಖಲೆ
ಹೊಂಬಾಳೆ ಫಿಲ್ಮ್ಸ್ ಪ್ರೆಸೆಂಟ್ ಮಾಡಿದ ‘ಮಹಾವತಾರ ನರಸಿಂಹ’ ಸೂಪರ್ ಹಿಟ್ ಆಯಿತು. ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ 300 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡಿತ್ತು. ಹಿಗಾಗಿ ಮುಂದಿನ ದಿನಗಳಲ್ಲಿ ಈ ರೀತಿಯ ಸಿನಿಮಾಗಳನ್ನು ಮಾಡುವತ್ತ ಹೆಚ್ಚು ಆಸಕ್ತಿ ತೋರಿಸಬೇಕಿದೆ ಎಂಬ ಮಾತು ಕೇಳಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




