‘ಸಿನಿಮಾ ವಿಚಾರದಲ್ಲಿ ಸಂದೀಪ್ ರೆಡ್ಡಿ ಆರ್​ಜಿವಿಯ ಅಪ್ಪ’; ಕೊಂಡಾಡಿದ ರಾಜಮೌಳಿ

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ವಿಭಿನ್ನ ಹಾಗೂ ರಾ ಸಿನಿಮಾ ಮೇಕಿಂಗ್ ಶೈಲಿ ಗಮನ ಸೆಳೆದಿದೆ. ಅವರ ಯಶಸ್ವಿ ಮೂರು ಚಿತ್ರಗಳನ್ನು ರಾಜಮೌಳಿ 'RGV ಅಪ್ಪ' ಎಂದು ಹೊಗಳಿದ್ದಾರೆ. ರಾಜಮೌಳಿ ಮೆಚ್ಚುಗೆಯಿಂದ ವಂಗಾಗೆ ಹೊಸ ಹುಮ್ಮಸ್ಸು ಬಂದಿದೆ. ಮಹಿಳಾ ವಿರೋಧಿ ಆರೋಪಗಳ ಹೊರತಾಗಿಯೂ, ತಮ್ಮ 'ಆಲ್ಫಾ ಮೇಲ್' ಚಿತ್ರಗಳನ್ನು ವಂಗಾ ಸಮರ್ಥಿಸಿಕೊಂಡಿದ್ದಾರೆ.

‘ಸಿನಿಮಾ ವಿಚಾರದಲ್ಲಿ ಸಂದೀಪ್ ರೆಡ್ಡಿ ಆರ್​ಜಿವಿಯ ಅಪ್ಪ’; ಕೊಂಡಾಡಿದ ರಾಜಮೌಳಿ
ಸಂದೀಪ್-ರಾಜಮೌಳಿ

Updated on: Nov 12, 2025 | 12:23 PM

ಖ್ಯಾತ ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಅವರ ಸಿನಿಮಾ ಮೇಕಿಂಗ್ ಭಿನ್ನ. ಅವರು ಎಲ್ಲ ವಿಷಯಗಳನ್ನು ತುಂಬಾನೇ ರಾ ಆಗಿ ತೋರಿಸುತ್ತಾರೆ. ಅವರು ನಿರ್ದೇಶನ ಮಾಡಿದ್ದು ಮೂರು ಸಿನಿಮಾಗಳನ್ನು ಮಾತ್ರ. ಈ ಮೂರು ಚಿತ್ರಗಳು ಹಿಟ್ ಆಗಿವೆ. ಈಗ ಅವರನ್ನು ಖ್ಯಾತ ನಿರ್ದೇಶಕ ಎಸ್​​ಎಸ್​ ರಾಜಮೌಳಿ ಬಾಯ್ತುಂಬ ಹೊಗಳಿದ್ದಾರೆ. ‘ಸಿನಿಮಾ ವಿಚಾರದಲ್ಲಿ ಸಂದೀಪ್ ಅವರು ಆರ್​ಜಿವಿ ಅಪ್ಪ’ ಎಂದು ಕರೆದಿದ್ದಾರೆ.

ಆರ್​ಜಿವಿ ಅವರು ರಾ ಸಿನಿಮಾಗಳನ್ನು ಹೆಚ್ಚು ನೀಡಿದ್ದಾರೆ. ಅವರು ಯಾವುದೇ ವಿಚಾರಗಳನ್ನು ಹೇಳಬೇಕು ಎಂದರೆ ನೇರ ಮಾತುಗಳಲ್ಲಿ ಹೇಳುತ್ತಾರೆ. ಸಂದೀಪ್ ಅವರಲ್ಲೂ ಇದೇ ಗುಣ ಇದೆ ಎಂಬುದು ರಾಜಮೌಳಿಯ ಅಭಿಪ್ರಾಯ. ಹೀಗಾಗಿ, ಸಂದೀಪ್ ಅವರನ್ನು ಆರ್​ಜಿವಿಗೆ ಹೋಲಿಕೆ ಮಾಡಿ ಹೊಗಳಿದ್ದಾರೆ ಸಂದೀಪ್.

ಇತ್ತೀಚೆಗೆ ಸಿನಿಮಾ ಈವೆಂಟ್​ ಒಂದರಲ್ಲಿ ರಾಜಮೌಳಿ ಅವರು ಮಾತನಾಡಿದ್ದಾರೆ. ‘ಆರ್​ಜಿವಿ, ಸಂದೀಪ್ ರೆಡ್ಡಿ ವಂಗ ಇವರೆಲ್ಲ ಖ್ಯಾತ ನಿರ್ದೇಶಕರು. ಅಪರೂಪಕ್ಕೆ ಒಮ್ಮೆ ಈ ರೀತಿಯ ನಿರ್ದೇಶಕರು ಸಿಗುತ್ತಾರೆ’ ಎಂದು ರಾಜಮೌಳಿ ಹೇಳಿದ್ದಾರಂತೆ. ಅಲ್ಲದೆ, ರಾಜಮೌಳಿಯ ಹೊಗಳಿಕೆಯಿಂದ ಸಂದೀಪ್​ಗೆ ಹೊಸ  ಹುಮ್ಮಸ್ಸು ಸಿಕ್ಕಂತೆ ಆಗಿದೆ.

ಸಂದೀಪ್ ಅವರು ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಅವರು ‘ಸ್ಪಿರಿಟ್’ ಸಿನಿಮಾನ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಿರಬೇಕಿತ್ತು. ಆದರೆ, ಚಿತ್ರದಿಂದ ಅವರು ಹೊರ ನಡೆದರು. ಇದಕ್ಕೆ ಸಂದೀಪ್ ಕಾರಣ ಎಂದು ನೇರವಾಗಿಯೇ ಹೇಳಿದ್ದರು. ಇದರಿಂದ ಸಂದೀಪ್ ಅವರ ಚಾರ್ಮ್​ಗೆ ಧಕ್ಕೆ ಬಂದಿತ್ತು. ಆದರೆ, ರಾಜಮೌಳಿ ಅವರಂಥ ನಿರ್ದೇಶಕರು ಅವರು ಬಗ್ಗೆ ಮೆಚ್ಚುಗೆ ಸೂಚಿಸಿದಾಗ ಅವರಿಗೆ ಸಹಜವಾಗಿಯೇ ಖುಷಿ ಆಗುತ್ತದೆ.

ಇದನ್ನೂ ಓದಿ: ಸಂದೀಪ್ ರೆಡ್ಡಿ ವಂಗ ಯಾವಾಗಲೂ ಕುರ್ತಾ ಧರಿಸೋದು ಏಕೆ? ಆ ಘಟನೆಯೇ ಕಾರಣ

ಸಂದೀಪ್ ರೆಡ್ಡಿ ಅವರು ಆಲ್ಫಾ ಮೇಲ್ ಸಿನಿಮಾಗಳನ್ನು ತೆಗೆಯುತ್ತಾರೆ. ಅವರ ಸಿನಿಮಾಗಳಲ್ಲಿ ಮಹಿಳೆಯರನ್ನು ಕೀಳಾಗಿ ತೋರಿಸಲಾಗುತ್ತದೆ ಎಂಬ ಆರೋಪ ಇದೆ. ಆದರೆ, ಈ ವಿಚಾರದಲ್ಲಿ ಸಂದೀಪ್ ಅವರಿಗೆ ಯಾವುದೇ ಬೇಸರ ಇಲ್ಲ. ಅವರು ತಮ್ಮ ಸಿನಿಮಾಗಳನ್ನು ಸಮರ್ಥಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 11:52 am, Wed, 12 November 25