ಕೊರೊನಾ ವೈರಸ್ ಎರಡನೇ ಅಲೆ ಸಂದರ್ಭದಲ್ಲಿ ಜನರು ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಈ ವೇಳೆ ನಟ ಸೋನು ಸೂದ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಜನರ ಸಂಕಷ್ಟಕ್ಕೆ ಕಿವಿಯಾಗುತ್ತಿದ್ದಾರೆ. ಸೋನು ಸೂದ್ ಜತೆ ಟೊಂಕ ಕಟ್ಟಿ ನಿಂತ ಅದೆಷ್ಟೋ ಸೆಲೆಬ್ರಿಟಿಗಳಿದ್ದಾರೆ. ಅದರಲ್ಲಿ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಕೂಡ ಒಬ್ಬರು. ಕೊವಿಡ್ ಸಂದರ್ಭದಲ್ಲಿ ಸಾರಾ ಅಲಿ ಖಾನ್ ಮಾಡಿದ ಸಹಾಯಕ್ಕೆ ಈಗ ಸೋನು ಸೂದ್ ವಿಶೇಷವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಹಾಯ ಕೇಳಿ ಸಾಕಷ್ಟು ಜನರು ಸಾರಾ ಅಲಿ ಖಾನ್ಗೆ ಮೆಸೇಜ್ ಮಾಡಿದ್ದಾರೆ. ಈ ಸಂದೇಶಗಳನ್ನು ಸಾರಾ ಅಲಿ ಖಾನ್ ಇನ್ಸ್ಟಾಗ್ರಾಂ ಸ್ಟೇಟಸ್ಗೆ ಹಾಕಿ ಪ್ರತಿಯೊಂದನ್ನು ಸೋನು ಸೂದ್ಗೆ ಟ್ಯಾಗ್ ಮಾಡುತ್ತಿದ್ದರು. ಈ ಮೂಲಕ ಕಷ್ಟದಲ್ಲಿರುವ ಸಾಮಾನ್ಯರಿಗೆ ಸಹಾಯ ಮಾಡಲು ಅವರು ಸಹಾಯ ಮಾಡಿದ್ದರು. ಇದರ ಜತೆಗೆ ಸೋನು ಸೂದ್ ಫೌಂಡೇಷನ್ಗೆ ಹಣ ನೀಡಿದ್ದಾರೆ. ಇದು ಸೋನು ಸೂದ್ಗೆ ಖುಷಿ ನೀಡಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಿರುವ ಸೋನು, ಸಾರಾ ಅವರನ್ನು ಹೀರೋ ಎಂದಿದ್ದಾರೆ.
ಸೋನು ಸೂದ್ ಫೌಂಡೇಷನ್ಗೆ ನೀವು ನೀಡಿದ ಕೊಡುಗೆಗಾಗಿ ತುಂಬಾ ಧನ್ಯವಾದಗಳು. ನಿಮ್ಮ ಬಗ್ಗೆ ತುಂಬಾ ಹೆಮ್ಮೆ ಇದೆ. ಒಳ್ಳೆಯ ಕೆಲಸವನ್ನು ಹೀಗೆಯೇ ಮಾಡುತ್ತಿರಿ. ಈ ಕಷ್ಟದ ಸಮಯದಲ್ಲಿ ರಾಷ್ಟ್ರದ ಯುವಕರು ಮುಂದೆ ಬಂದು ಸಹಾಯ ಮಾಡಲು ನೀವು ಸ್ಫೂರ್ತಿ ನೀಡಿದ್ದೀರಿ. ಯೂ ಆರ್ ಎ ಹೀರೋ’ಎಂದು ಬರೆದುಕೊಂಡಿದ್ದಾರೆ.
Thank you so much my dear Sara Ali Khan for your contribution to the @soodfoundation! Extremely proud of you & keep on doing the good work. You have inspired the youth of the nation to come forward and help during these difficult times. You are a hero ?@sara_ali_khan95
— sonu sood (@SonuSood) May 8, 2021
ಕೊರೊನಾ ಸೋಂಕು ಇಡೀ ಭಾರತವನ್ನು ಇನ್ನಿಲ್ಲದಂತೆ ಪೀಡಿಸುತ್ತಿದೆ. ದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ಹೆಚ್ಚಾಗಿದೆ. ಇತ್ತೀಚೆಗೆ ಕ್ರಿಕೆಟಿಗ ಸುರೇಶ್ ರೈನಾ ಕೂಡ ಆಕ್ಸಿಜನ್ಗಾಗಿ ಸಾಮಾಜಿಕ ಜಾಲತಾಣದಲ್ಲಿ ಬೇಡಿಕೆ ಇಟ್ಟಿದ್ದರು. 65 ವರ್ಷದ ಚಿಕ್ಕಮ್ಮ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಹೀಗಾಗಿ ಅವರಿಗೆ ಆಕ್ಸಿಜನ್ ಸಿಲಿಂಡರ್‌ನ ಅವಶ್ಯಕತೆಯಿದೆ. ಅವರನ್ನು ಪ್ರಸ್ತುತ ಮೀರಠ್ನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಸುರೇಶ್ ರೈನಾ ಟ್ವೀಟ್ ಮಾಡಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಜನರ ಸಹಾಯ ಕೇಳಿದ್ದರು. ಇದಕ್ಕೆ ಸೋನು ಸೂದ್ ಪ್ರತಿಕ್ರಿಯಿಸಿದ್ದರು. ಅಷ್ಟೇ ಅಲ್ಲ, ಅವರು ರೈನಾ ಚಿಕ್ಕಮ್ಮಗೆ ಸಹಾಯ ಕೂಡ ಮಾಡಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಅಂದು ಹೇಳಿದ್ದ ಮಾತು ಇಷ್ಟು ಬೇಗ ನಿಜವಾಯ್ತೇ?