Sathyaraj: ಪ್ರಧಾನಿ ಮೋದಿ ಪಾತ್ರ ಮಾಡೋ ವಿಚಾರ; ಕೊನೆಗೂ ಮೌನಮುರಿದ ಕಟ್ಟಪ್ಪ

|

Updated on: May 22, 2024 | 7:28 AM

ತಮಿಳು ನ್ಯೂಸ್ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಸತ್ಯರಾಜ್. ‘ನಾನು ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ನಲ್ಲಿ ನಟಿಸುತ್ತೇನೆ ಎನ್ನುವ ಸುದ್ದಿ ಇದೆ. ಆದರೆ, ಯಾರೋಬ್ಬರೂ ಪ್ರಧಾನಿ ಮೋದಿ ಪಾತ್ರ ಮಾಡಿ ಎಂದು ನನ್ನನ್ನು ಸಂಪರ್ಕಿಸಿಲ್ಲ’ ಎಂದಿದ್ದಾರೆ ಅವರು.

Sathyaraj: ಪ್ರಧಾನಿ ಮೋದಿ ಪಾತ್ರ ಮಾಡೋ ವಿಚಾರ; ಕೊನೆಗೂ ಮೌನಮುರಿದ ಕಟ್ಟಪ್ಪ
ಮೋದಿ-ಸತ್ಯರಾಜ್
Follow us on

ತೆಲುಗು ನಟ ಸತ್ಯರಾಜ್ (Sathyaraj) ಅವರು ‘ಬಾಹುಬಲಿ’ ಸಿನಿಮಾದಲ್ಲಿ ಕಟ್ಟಪ್ಪನ ಪಾತ್ರ ಮಾಡೋ ಮೂಲಕ ಎಲ್ಲರ ಮನ ಗೆದ್ದರು. ಪೋಷಕ ಪಾತ್ರಗಳ ಮೂಲಕ ಗಮನ ಸೆಳೆಯುತ್ತಾ ಬಂದಿರುವ ಅವರು ಈ ಚಿತ್ರದಿಂದ ದೊಡ್ಡ ಅಭಿಮಾನಿ ಬಳಗವನ್ನು ಪಡೆದರು. ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಯೋಪಿಕ್​ನಲ್ಲಿ ನಟಿಸಲಿದ್ದಾರೆ ಎಂದು ವರದಿ ಆಗಿತ್ತು. ಈ ಬಗ್ಗೆ ಹರಿದಾಡಿರೋ ವದಂತಿ ಬಗ್ಗೆ ಸ್ವತಃ ಅವರೇ ಮಾತನಾಡಿದ್ದಾರೆ. ಆದರೆ, ಇದರಲ್ಲಿ ಸತ್ಯ ಇಲ್ಲ ಎಂದಿದ್ದಾರೆ ಸತ್ಯರಾಜ್.

ತಮಿಳು ನ್ಯೂಸ್ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ ಸತ್ಯರಾಜ್. ‘ನಾನು ಪ್ರಧಾನಿ ನರೇಂದ್ರ ಮೋದಿ ಬಯೋಪಿಕ್​ನಲ್ಲಿ ನಟಿಸುತ್ತೇನೆ ಎನ್ನುವ ಸುದ್ದಿ ಇದೆ. ಆದರೆ, ಯಾರೋಬ್ಬರೂ ಪ್ರಧಾನಿ ಮೋದಿ ಪಾತ್ರ ಮಾಡಿ ಎಂದು ನನ್ನನ್ನು ಸಂಪರ್ಕಿಸಿಲ್ಲ. ಜನರು ಸೋಶಿಯಲ್ ಮೀಡಿಯಾದಲ್ಲಿ ವದಂತಿ ಹಬ್ಬಿಸಿದ್ದಾರೆ’ ಎಂದಿದ್ದಾರೆ ಸತ್ಯರಾಜ್.

‘ಯುವತಿಯ ಕೊಲೆ, ಅಕ್ರಮ ಸಂಬಂಧವೇ ಕಾರಣ? ಈ ರೀತಿಯ ಸುದ್ದಿಗಳು ಈ ಮೊದಲು ನ್ಯೂಸ್ ಪೇಪರ್​ಗಳಲ್ಲಿ ಬರುತ್ತಿತ್ತು. ಇದೇ ರೀತಿ, ಸೋಶಿಯಲ್ ಮೀಡಿಯಾದಲ್ಲಿ ಈ ರೀತಿಯ ನಿಜವಿಲ್ಲದ ವಿಚಾರಗಳನ್ನು ಹರಡುವ ಕೆಲಸ ಆಗುತ್ತಿದೆ’ ಎಂದಿದ್ದಾರೆ ಸತ್ಯರಾಜ್. ಈ ಮೂಲಕ ಪ್ರಧಾನಿ ಮೋದಿ ಬಯೋಪಿಕ್​ನಲ್ಲಿ ನಟಿಸಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಸತ್ಯರಾಜ್ ಅವರು ದ್ರಾವಿಡ ಚಳುವಳಿಯನ್ನು ಬೆಂಬಲಿಸುವವರು. ದ್ರಾವಿಡ ವಿರೋಧಿ ಚಿಂತನೆಗಳನ್ನು ಹೊಂದಿರುವ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದು ಅವರು ಹೇಳಿದ್ದರು. ಈ ಮಧ್ಯೆ ಅವರು ಪ್ರಧಾನಿ ನರೇಂದ್ರ ಬಯೋಪಿಕ್​ನ ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ.

ಇದನ್ನೂ ಓದಿ: ಮೋದಿ ಪಾತ್ರದಲ್ಲಿ ಕಟ್ಟಪ್ಪ ಅಲಿಯಾಸ್ ಸತ್ಯರಾಜ್​? ಬರಲಿದೆ ಹೊಸ ಬಯೋಪಿಕ್​

ಸತ್ಯರಾಜ್​ ಅವರು ‘ವೆಪಮ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಸೂಪರ್​ಹ್ಯೂಮನ್ ಪಾತ್ರ ಮಾಡುತ್ತಿದ್ದಾರೆ. ರಾಜೀವ್ ಮೆನನ್ ಹಾಗೂ ವಸಂತ್ ರವಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.  ಈ ಚಿತ್ರ ಮೇ 23ರಂದು ರಿಲೀಸ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.