ಬೆಂಗಳೂರಲ್ಲಿ ನಟನ ಬರ್ಬರ ಹತ್ಯೆ; ಬಾಮೈದನಿಂದಲೇ ನಡೆಯಿತು ಕೊಲೆ

ಬೆಂಗಳೂರಿನ ಪಟ್ಟಣಗೆರೆಯಲ್ಲಿ ಈ ಘಟನೆ ನಡೆದಿದೆ. ನಟ ಸತೀಶ್ ವಜ್ರ​​ ಅವರು ತಮ್ಮ ಮನೆಯಲ್ಲಿ ಇದ್ದರು. ಈ ವೇಳೆ ಮನೆಗೆ ಬಂದ ಬಾಮೈದನು ಸತೀಶ್​ಗೆ ಚಾಕುವಿನಿಂದ ಇರಿದಿದ್ದಾನೆ.

ಬೆಂಗಳೂರಲ್ಲಿ ನಟನ ಬರ್ಬರ ಹತ್ಯೆ; ಬಾಮೈದನಿಂದಲೇ ನಡೆಯಿತು ಕೊಲೆ
ಸತೀಶ್ ವಜ್ರ
Edited By:

Updated on: Jun 18, 2022 | 3:21 PM

ಬೆಂಗಳೂರಲ್ಲಿ (Bangalore) ಬರ್ಬರ ಹತ್ಯೆ ನಡೆದಿದೆ. ಚಿತ್ರರಂಗದಲ್ಲಿ ಪೋಷಕ ಪಾತ್ರಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದ ನಟ ಸತೀಶ್ ವಜ್ರ (Satish Vajra) ಅವರನ್ನು ಕೊಲೆ ಮಾಡಲಾಗಿದೆ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಸತೀಶ್ ಅವರ ಬಾಮೈದನೇ ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ, ಈ ಸಂಬಂಧ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಪಟ್ಟಣಗೆರೆಯಲ್ಲಿ ಈ ಘಟನೆ ನಡೆದಿದೆ. ನಟ ಸತೀಶ್ ವಜ್ರ​​ ಅವರು ತಮ್ಮ ಮನೆಯಲ್ಲಿ ಇದ್ದರು. ಈ ವೇಳೆ ಮನೆಗೆ ಬಂದ ಬಾಮೈದನು ಸತೀಶ್​ಗೆ ಚಾಕುವಿನಿಂದ ಇರಿದಿದ್ದಾನೆ. ಸತೀಶ್​ ದೇಹಕ್ಕೆ ಹಲವು ಬಾರಿ ಚಾಕುವಿನಿಂದ ಇರಿಯಲಾಗಿದೆ. ತೀವ್ರ ರಕ್ರಸ್ರಾವ ಉಂಟಾಗಿ ಸತೀಶ್ ವಜ್ರ ಮೃತಪಟ್ಟಿದ್ದಾರೆ.

ಸದ್ಯ, ಸತೀಶ್ ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 7 ತಿಂಗಳ ಹಿಂದೆ ಸತೀಶ್ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದರು. ಸಹೋದರಿಯ ಹತ್ಯೆಗೆ ಸತೀಶ್ ಬಾಮೈದ ಸೇಡು ತೀರಿಸಿಕೊಂಡಿರುವ ಶಂಕೆ ಇದೆ. ಆ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ರಾಜ ರಾಜೇಶ್ವರಿನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸೋಪ್ ಮಾರಿ ಜೀವನ ಮಾಡುತ್ತಿದ್ದಾರೆ ನಟಿ ಲಕ್ಷ್ಮೀ ಮಗಳು ಐಶ್ವರ್ಯಾ; ಟಾಯ್ಲೆಟ್ ತೊಳೆಯಲೂ ರೆಡಿ ಎಂದ ನಟಿ

‘ಲಗೋರಿ’ ಕಿರುಚಿತ್ರದಲ್ಲಿ ಸತೀಶ್ ವಜ್ರ ನಟಿಸಿದ್ದರು. ಈ ಚಿತ್ರಕ್ಕೆ ಟಿಕ್​ ಟಾಕ್​ ಮೂಲಕ ಜನಪ್ರಿಯತೆ ಪಡೆದ ಸೋನು ಶ್ರೀನಿವಾಸ ಗೌಡ ನಾಯಕಿ ಆಗಿ ಕಾಣಿಸಿಕೊಂಡಿದ್ದರು. ಸತೀಶ್ ವಜ್ರ ಅವರ ಯೂಟ್ಯೂಬ್​ ಚಾನೆಲ್ ಮೂಲಕವೇ ಈ ಕಿರುಚಿತ್ರ ರಿಲೀಸ್ ಆಗಿತ್ತು. 23 ಲಕ್ಷಕ್ಕೂ ಅಧಿಕ ಬಾರಿ ಈ ವಿಡಿಯೋ ವೀಕ್ಷಣೆ ಕಂಡಿದೆ. ಸತೀಶ್ ಅವರ ಯೂಟ್ಯೂಬ್​ ಚಾನೆಲ್​ಗೆ 1 ಲಕ್ಷಕ್ಕೂ ಅಧಿಕ ಹಿಂಬಾಲಕರು ಇದ್ದಾರೆ. ಸತೀಶ್ ಅವರು ಸಾಕಷ್ಟು ವಿಡಿಯೋಗಳನ್ನು ಹಂಚಿಕೊಂಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.