ಸೆಲೆಬ್ರಿಟಿಗಳು ತಾವು ಹಾಕುವ ಬಟ್ಟೆಯ ಮೂಲಕ ಸುದ್ದಿ ಆಗುತ್ತಲೇ ಇರುತ್ತಾರೆ. ಆದರೆ, ಅವರು ಹಾಕುವ ದಿರಿಸಿನ ಕಾರಣಕ್ಕಾಗಿ ಕೆಲವೊಮ್ಮೆ ಅಭಿಮಾನಿಗಳಿಂದ ಚಿತ್ರ-ವಿಚಿತ್ರ ಪ್ರಶ್ನೆಗಳನ್ನು ಎದುರಿಸಿ ಪೇಚಿಗೀಡಾಗುತ್ತಾರೆ. ಈ ರೀತಿ ಪ್ರಶ್ನೆ ಕೇಳುವವರಿಗೆ ಕೆಲವರು ಧೈರ್ಯದಿಂದ ತಿರುಗೇಟು ನೀಡಿದರೆ, ಇನ್ನೂ ಕೆಲವರು ತಮಗೇಕೆ ಎಂದು ಸುಮ್ಮನಾಗುತ್ತಾರೆ. ಈಗ ಹಿಂದಿ ಕಿರುತೆರೆ ನಟಿ ಸಾಯಂತನಿ ಘೋಷ್ಗೂ ಇದೇ ರೀತಿಯ ವಿಚಿತ್ರ ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ತಕ್ಕ ಉತ್ತರ ನೀಡಿದ್ದಾರೆ.
ಸಾಯಂತನಿ ಘೋಷ್ ಈ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಈ ಪೋಸ್ಟ್ನಲ್ಲಿ ತಮಗಾದ ಕಹಿ ಅನುಭವ ಹಾಗೂ ಅದಕ್ಕೆ ನೀಡಿದ ಉತ್ತರದ ಬಗ್ಗೆ ಬರೆದುಕೊಂಡಿದ್ದಾರೆ. ನಿನ್ನೆ ಅಭಿಮಾನಿಗಳ ಜತೆ ಮಾತುಕತೆ ನಡೆಸುವಾಗ ಓರ್ವ ನನ್ನ ಬ್ರಾ ಸೈಜ್ ಕೇಳಿದೆ. ಆತನಿಗೆ ನಾನು ಸೂಕ್ತ ಉತ್ತರ ನೀಡಿದ್ದೇನೆ. ಆದಾಗ್ಯೂ ಈ ಬಗ್ಗೆ ಸಾಕಷ್ಟು ಮಾತಾಡುವುದು ಇದೆ ಎಂದು ನನಗೆ ಅನ್ನಿಸುತ್ತಿದೆ. ಬಾಡಿ ಶೇಮಿಂಗ್ ಮಾಡುವುದು ತಪ್ಪು. ಈ ರೀತಿಯ ಅಸಭ್ಯ ಪ್ರಶ್ನೆ ಕೇಳುವವರ ಮೆಂಟಾಲಿಟಿಯನ್ನು ಅಳತೆ ಮಾಡೋಕೆ ಪ್ರಯತ್ನ ಮಾಡಿದ್ದೇನೆ ಎಂದು ಸಾಯಂತನಿ ಹೇಳಿದ್ದಾರೆ.
ಮುಂದೆ ಬರಬಹುದಾದ ಟ್ರೋಲ್ಗಳ ಬಗ್ಗೆಯೂ ಸಾಯಂತನಿ ಘೋಷ್ ಈಗಲೇ ಉತ್ತರಿಸಿದ್ದಾರೆ. ಮುಂದಿನ ಸಲ ಯಾರಾದರೂ ನನ್ನ ಕಪ್ ಸೈಜ್ ಕೇಳಿದರೆ ನಾನು ಏನು ಉತ್ತರಿಸಬೇಕು ಎಂಬುದು ನನಗೆ ಗೊತ್ತಿದೆ. ನನಗೆ ದೊಡ್ಡ ಕಪ್ ಎಂದರೆ ಇಷ್ಟ. ಕಾಫಿ ಲವರ್ ಎಂದಮೇಲೆ ದೊಡ್ಡ ಕಪ್ಅನ್ನೇ ಇಷ್ಟಪಡಬೇಕಲ್ಲವೆ ಎಂದು ವಿಡಂಬನಾತ್ಮಕವಾಗಿ ಸಾಯಂತನಿ ಮಾತನಾಡಿದ್ದಾರೆ.
ಸಾಯಂತನಿ ಹಿಂದಿಯಲ್ಲಿ ಮನೆಮಾತಾಗಿದ್ದಾರೆ. ಅವರು, ಸಾಕಷ್ಟು ಹಿಂದಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಂಕುಮ್-ಏಕ್ ಪ್ಯಾರ್ ಸಾ ಬಂಧನ್, ನಾಮಕರಣ್, ಬ್ಯಾರಿಸ್ಟರ್ ಬಾಬು, ಸಂತೋಷಿ ಮಾ, ಮಹಾಭಾರತ್, ನಾಗಿಣ್ 4 ಸೇರಿ ಹಲವು ಧಾರಾವಾಹಿಗಳಲ್ಲಿ ಅವರು ಬಣ್ಣ ಹಚ್ಚಿದ್ದಾರೆ. ರಾಜು ಅಂಕಲ್, ಸೇರಿ ಸಾಕಷ್ಟು ಬೆಂಗಾಳಿ ಸಿನಿಮಾಗಳಲ್ಲೂ ಸಾಯಂತನಿ ನಟಿಸಿದ್ದಾರೆ.
Published On - 4:38 pm, Fri, 9 April 21