
ರಾಣಾ ದಗ್ಗುಬಾಟಿ, ತೆಲುಗು ಚಿತ್ರರಂಗದ ಖ್ಯಾತ ನಟನಾಗಿರುವ ಜೊತೆಗೆ ನಿರ್ಮಾಪಕ ಹಾಗೂ ವಿತರಕರೂ ಸಹ ಹೌದು. ತೆಲುಗು ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಸಹ ರಾಣಾ ದಗ್ಗುಬಾಟಿ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಲೇ ಇರುತ್ತಾರೆ. ಇದೀಗ ರಾಣಾ ದಗ್ಗುಬಾಟಿ ಹೊಸದೊಂದು ಸಿನಿಮಾ ಘೋಷಣೆ ಮಾಡಿದ್ದು, ಬಾಲಿವುಡ್ ನಟಿ, ಸಂಸದೆ ಕಂಗನಾ ರಣೌತ್ ಅವರು ನಾಯಕಿಯಾಗಿ ನಟಿಸಲಿರುವ ಹಾರರ್ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.
ದೆಹಲಿಯಲ್ಲಿ ನಡೆದ ‘ಹೊರರ್‌ಕಾನ್ ಇಂಡಿಯಾ 2026’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಣಾ ದಗ್ಗುಬಾಟಿ ಅವರು ಹಾಲೋವೀನ್ ದಿನದಂದು ತಮ್ಮ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅವರು ನಿರ್ಮಾಣ ಮಾಡಲಿರುವ ಈ ಸಿನಿಮಾ ಸಿನಿಮಾವನ್ನು ತೆಲುಗಿನ ರವಿ ಬಾಬು ನಿರ್ದೇಶನ ಮಾಡಲಿದ್ದಾರೆ. ಕಂಗನಾ ರಣಾವತ್ ನಟಿಸಿ ರಾಣಾ ನಿರ್ಮಾಣ ಮಾಡಲಿರುವ ಸಿನಿಮಾಕ್ಕೆ ‘ಸ್ಕೇರಿ ಪಿಕ್ಚರ್’ ಎಂದು ಹೆಸರಿಡಲಾಗಿದೆ. ರಾಣಾ ದಗ್ಗುಬಾಟಿ ಸಿನಿಮಾ ಘೋಷಿಸಿದ ಕೆಲವೇ ಸಮಯದಲ್ಲಿ ಸಿನಿಮಾದ ಪೋಸ್ಟರ್ ಅನ್ನು ನಟಿ ಕಂಗನಾ ರಣೌತ್ ಹಂಚಿಕೊಂಡಿದ್ದರು.
ರಾಜಕೀಯದಲ್ಲಿ ಬ್ಯುಸಿ ಆಗಿರುವ ಕಂಗನಾ ರನೌತ್, ಸಿನಿಮಾಗಳಲ್ಲಿ ನಟಿಸುವುದನ್ನೂ ಸಹ ಮುಂದುವರೆಸಿದ್ದಾರೆ. ಬಾಲಿವುಡ್ನ ಅತ್ಯುತ್ತಮ ನಟಿಯರಲ್ಲಿ ಒಬ್ಬರಾಗಿರುವ ಕಂಗನಾ ರನೌತ್, ಈ ಹಿಂದೆ ‘ಚಂದ್ರಮುಖಿ 2’ ಸಿನಿಮಾನಲ್ಲಿ ನಟಿಸಿದ್ದು, ಅದು ಅವರು ನಟಿಸಿದ್ದ ಏಕೈಕ ಹಾರರ್ ಸಿನಿಮಾ ಅಗಿತ್ತು. ಆದರೆ ಕಂಗನಾ ರನೌತ್ ಇತ್ತೀಚೆಗೆ ನಟಿಸಿದ ಯಾವೊಂದು ಸಿನಿಮಾ ಸಹ ಹಿಟ್ ಆಗಿಲ್ಲ. ಇದರ ನಡುವೆ ರಾಣಾ ದಗ್ಗುಬಾಟಿ ಅವರು ಕಂಗನಾ ಅನ್ನು ನಾಯಕಿಯನ್ನಾಗಿ ಹಾಕಿಕೊಂಡಿದ್ದಾರೆ.
ಇದನ್ನೂ ಓದಿ:175 ಕೋಟಿ ರೂಪಾಯಿಗೆ ‘ಕಿಂಗ್’ ಸಿನಿಮಾದ ವಿದೇಶಿ ವಿತರಣಾ ಹಕ್ಕುಗಳು ಸೇಲ್
ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ರಾಣಾ, ‘ಇದು ಒಂದು ಹಾರರ್ ಸಿನಿಮಾ ಆಗಿದ್ದು. ನನ್ನ ಸ್ನೇಹಿತರಾದ ರವಿ ಬಾಬು ಇದನ್ನು ನಿರ್ದೇಶಿಸುತ್ತಿದ್ದಾರೆ. ಅವರು ತೆಲುಗಿನಲ್ಲಿ ಅನೇಕ ಹಾರರ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದು ಅವರ ಮೊದಲ ಹಿಂದಿ ಚಲನಚಿತ್ರವಾಗಿದೆ. ಈ ಚಿತ್ರದ ಶೀರ್ಷಿಕೆಯನ್ನು ಮೊದಲು ಇಲ್ಲಿಯೇ ಘೋಷಿಸಲಾಗಿದೆ’ ಎಂದರು. ರವಿ ಬಾಬು ಅವರು ದಿವಂಗತ ಹಿರಿಯ ತೆಲುಗು ನಟ ಚಲಪತಿ ರಾವ್ ಅವರ ಪುತ್ರರಾಗಿದ್ದು, 1998ರಿಂದ ನಟರಾಗಿ ಮತ್ತು 2002ರಿಂದ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ತಮ್ಮ ವಿಶಿಷ್ಟ, ಪ್ರಯೋಗಾತ್ಮಕ ಮತ್ತು ಭಿನ್ನ ಪ್ರಕಾರದ ಚಲನಚಿತ್ರ ನಿರ್ಮಾಣ ಶೈಲಿಗೆ ಹೆಸರುವಾಸಿಯಾಗಿದ್ದಾರೆ. 2023ರಲ್ಲಿ ಅವರು ಹಂದಿಯ ಮರಿಯನ್ನು ಮುಖ್ಯ ಪಾತ್ರವಾಗಿಟ್ಟುಕೊಂಡು ‘ಅದುಗೋ’ ಎಂಬ ವಿಭಿನ್ನ ಚಿತ್ರ ನಿರ್ದೇಶಿಸಿದ್ದರು.
ರವಿ ಅವರು ತಮ್ಮ ವೃತ್ತಿಜೀವನದಲ್ಲಿ ಹದಿಹರೆಯದವರ ಕಥೆಗಳಿಂದ ಹಿಡಿದು ಥ್ರಿಲ್ಲರ್‌ಗಳವರೆಗೆ ವಿವಿಧ ಪ್ರಕಾರದ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕಳೆದ ವರ್ಷ ‘ಕಾಫಿ ವಿದ್ ಎ ಕಿಲ್ಲರ್’ ಚಿತ್ರದಲ್ಲಿ ನಟಿಸಿದ್ದ ಅವರು, ಈ ವರ್ಷ ‘ರೇಜರ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನು ಕಂಗನಾ ಅವರು ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಆಗಿದ್ದಾರೆ. ರಾಜಕೀಯ ಮತ್ತು ಸಿನಿಮಾಗಳನ್ನು ಒಟ್ಟಿಗೆ ನಿರ್ವಹಿಸುತ್ತಿದ್ದಾರೆ. ಈ ವರ್ಷ ಬಿಡುಗಡೆಯಾದ ‘ಭಾರತ್ ಭಾಗ್ಯವಿಧಾತ’ ಚಿತ್ರದಲ್ಲಿ ಅವರು ಕೊನೆಯದಾಗಿ ನಟಿಸಿದ್ದರು ಹಾಗೂ ಅದನ್ನು ನಿರ್ಮಿಸಿದ್ದರು ಕೂಡ. ಆ ಸಿನಿಮಾ ಬಾಕ್ಸ್ ಆಫೀಸ್ನಲಲಿ ಫ್ಲಾಫ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ