ಈ ಏಳು ಸ್ಟಾರ್​ ನಟರ ಬಳಿ ಇದೆ ಪ್ರೈವೇಟ್​ ಜೆಟ್​; ಯಾರ್ಯಾರು? ಇಲ್ಲಿದೆ ಮಾಹಿತಿ

ಈ ಏಳು ಸ್ಟಾರ್​ ನಟರ ಬಳಿ ಇದೆ ಪ್ರೈವೇಟ್​ ಜೆಟ್​; ಯಾರ್ಯಾರು? ಇಲ್ಲಿದೆ ಮಾಹಿತಿ
ಏಳು ಸ್ಟಾರ್​ ನಟರ ಬಳಿ ಇದೆ ಪ್ರೈವೇಟ್​ ಜೆಟ್

ಟಾಲಿವುಡ್​ನ 7 ಸ್ಟಾರ್​ ನಟರ ಬಳಿ ಖಾಸಗಿ ಜೆಟ್​ ಇದೆ. ಸಿನಿಮಾ ಪ್ರಚಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಅವರು ಇದೇ ವಿಮಾನವನ್ನು ಬಳಕೆ ಮಾಡಿಕೊಳ್ಳುತ್ತಾರೆ.

TV9kannada Web Team

| Edited By: Rajesh Duggumane

Dec 25, 2021 | 1:39 PM

ಸ್ಟಾರ್​ ನಟರ ಸಂಭಾವನೆ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುತ್ತದೆ. ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಪಡೆದುಕೊಳ್ಳುವ ಅವರು, ಅದನ್ನು ಬೇರೆಬೇರೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುತ್ತಾರೆ. ಈ ಕಾರಣಕ್ಕೆ ಹಲವು ಸ್ಟಾರ್​ ನಟರ ಆಸ್ತಿ ನೂರಾರು ಕೋಟಿ ರೂಪಾಯಿ ಮೇಲಿದೆ. ಇನ್ನು, ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗೆ ಕಾರ್​ ಕ್ರೇಜ್​ ಇದೆ. ಹಲವು ಐಷಾರಾಮಿ ಕಾರನ್ನು ಖರೀದಿ ಮಾಡಿ, ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಅದೇ ರೀತಿ ಟಾಲಿವುಡ್​ನ 7 ಸ್ಟಾರ್​ (Tollywood Stars) ನಟರ ಬಳಿ ಖಾಸಗಿ ಜೆಟ್​ ಇದೆ. ಸಿನಿಮಾ ಪ್ರಚಾರಕ್ಕಾಗಿ ಒಂದು ಕಡೆಯಿಂದ ಮತ್ತೊಂದು ಕಡೆ ತೆರಳಲು ಅವರು ಇದೇ ವಿಮಾನವನ್ನು ಬಳಕೆ ಮಾಡಿಕೊಳ್ಳುತ್ತಾರೆ.

ಅಲ್ಲು ಅರ್ಜುನ್​ ಸ್ಟೈಲಿಶ್​ ಸ್ಟಾರ್​ ಅಲ್ಲು ಅರ್ಜುನ್​ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಇವರ ಬಳಿ ಪ್ರೈವೇಟ್​ ಜೆಟ್​ ಇದೆ. ಅಲ್ಲು ಸ್ನೇಹಾ ರೆಡ್ಡಿ ಮದುವೆ ಆದ ನಂತರದಲ್ಲಿ ಪ್ರೈವೇಟ್​ ಜೆಟ್​ಅನ್ನು ಅಲ್ಲು ಖರೀದಿ ಮಾಡಿದ್ದಾರೆ. ‘ರೇಸ್​ ಗುರಮ್​’ ಸಿನಿಮಾ ಪ್ರಮೋಷನ್​ ಸಂದರ್ಭದಲ್ಲಿ ಅವರು ಇದೇ ವಿಮಾನದಲ್ಲಿ ಹಾರಾಟ ನಡೆಸಿದ್ದರು. ‘ಪುಷ್ಪ’ ಸಿನಿಮಾ ಪ್ರಚಾರಕ್ಕೆ ಇದೇ ವಿಮಾನ ಬಳಕೆ ಮಾಡಿಕೊಂಡಿದ್ದರು.

ಅಕ್ಕಿನೇನಿ ನಾಗಾರ್ಜುನ ಅಕ್ಕಿನೇನಿ ನಾಗಾರ್ಜುನ ಟಾಲಿವುಡ್​ನ ದೊಡ್ಡ ಸ್ಟಾರ್​. ಸಿನಿಮಾ ರಂಗದಲ್ಲಿ ಅಕ್ಕಿನೇನಿ ಕುಟುಂಬಕ್ಕೆ ಹೆಚ್ಚು ಗೌರವ ಇದೆ. ಅವರು ತಮ್ಮದೇ ವಿಮಾನ ಹೊಂದಿದ್ದಾರೆ. ಫ್ಯಾಮಿಲಿ ಜತೆ ಅವರು ಇದೇ ವಿಮಾನದಲ್ಲಿ ರಜೆಯ ಮಜ ಕಳೆಯೋಕೆ ಹಲವು ಕಡೆಗಳಲ್ಲಿ ತಿರುಗಾಡಿದ ಉದಾಹರಣೆ ಇದೆ.

ಚಿರಂಜೀವಿ ಮೆಗಾಸ್ಟಾರ್​ ಚಿರಂಜೀವಿ ಅವರು ನಟನೆ ಜತೆಗೆ ರಾಜಕೀಯದಲ್ಲೂ ಗುರುತಿಸಿಕೊಂಡಿದ್ದರು. ಈಗ ರಾಜಕೀಯ ತೊರೆದು ಚಿತ್ರರಂಗದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದಾರೆ. ಅವರ ಬಳಿಯೂ ಚಾರ್ಟರ್​ ಪ್ಲೇನ್​ ಇದೆ. ಸಿನಿಮಾ ಪ್ರಚಾರಕ್ಕೆ ಹಾಗೂ ಕುಟುಂಬದ ಜತೆ ಸಮಯ ಕಳೆಯೋಕೆ ಅವರು ಈ ವಿಮಾನ ಬಳಕೆ ಮಾಡಿಕೊಳ್ಳುತ್ತಾರೆ.

ಪವನ್​ ಕಲ್ಯಾಣ್​  ಪವನ್​ ಕಲ್ಯಾಣ್​ ಸಿನಿಮಾ ಹಾಗೂ ರಾಜಕೀಯ ಎರಡಲ್ಲೂ ತೊಡಗಿಕೊಂಡಿದ್ದಾರೆ. ಅವರು ಖಾಸಗಿ ವಿಮಾನ ಹೊಂದಿದ್ದಾರೆ.

ಜ್ಯೂ.ಎನ್​ಟಿಆರ್  ಜ್ಯೂ.ಎನ್​ಟಿಆರ್​ ಬಳಿ 80 ಕೋಟಿ ಮೌಲ್ಯದ ವಿಮಾನ ಇದೆ. ಇದನ್ನು ಹೈದರಾಬಾದ್​ನ ಶಮ್ಶಾಬಾದ್​ ವಿಮಾನ ನಿಲ್ದಾಣದಲ್ಲಿ ಪಾರ್ಕ್​ ಮಾಡಿರಲಾಗುತ್ತದೆ. ಹಲವು ಬಾರಿ ಅವರು ಈ ವಿಮಾನದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಮ್​ ಚರಣ್​  ರಾಮ್​ ಚರಣ್​ ಅವರು ಪ್ರೈವೇಟ್​ ಜೆಟ್​ನಲ್ಲಿ ಪ್ರಯಾಣಿಸೋಕೆ ಇಷ್ಟಪಡುತ್ತಾರೆ. ಪತ್ನಿ ಉಪಾಸನಾ ಕೊನಿಡೆಲ್ಲಾ ಜತೆ ಅವರು ಸಾಕಷ್ಟು ಬಾರಿ ಈ ವಿಮಾನದಲ್ಲಿ ಸುತ್ತಾಟ ನಡೆಸಿದ್ದಾರೆ.

ಮಹೇಶ್​ ಬಾಬು  ಮಹೇಶ್​ ಬಾಬು ಅವರು ಟಾಲಿವುಡ್​ನ ಬೇಡಿಕೆಯ ನಟ. ಅವರು ಸಿನಿಮಾ ಜತೆಗೆ ಕುಟುಂಬಕ್ಕೂ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ತಮ್ಮದೇ ವಿಮಾನದಲ್ಲಿ ಅವರು ಹಲವು ಕಡೆಗಳಲ್ಲಿ ಕುಟುಂಬದ ಜತೆ ಸುತ್ತಾಟ ನಡೆಸಿದ್ದಿದೆ.

ಇದನ್ನೂ ಓದಿ: Pushpa The Rise: ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಅಲ್ಲು ಅರ್ಜುನ್; ‘ಪುಷ್ಪ’ ಚಿತ್ರದ ಬಾಕ್ಸಾಫೀಸ್ ಗಳಿಕೆ ಎಷ್ಟು ಗೊತ್ತಾ?

ಮಹೇಶ್​ ಬಾಬು ಅಭಿಮಾನಿಗಳಿಗೆ ಮತ್ತೆ ಬ್ಯಾಡ್​ ನ್ಯೂಸ್; ಈ ಬಾರಿ ಏನಾಯ್ತು?​

Follow us on

Related Stories

Most Read Stories

Click on your DTH Provider to Add TV9 Kannada