‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್​ ಶಿವನ್​ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್

Nayanthara: ವಿಘ್ನೇಶ್ ಶಿವನ್ ಅವರು ಅಟ್ಲಿ ಬಗ್ಗೆ, ನಯನತಾರಾ ಬಗ್ಗೆ ಹಾಗೂ ಶಾರುಖ್ ಬಗ್ಗೆ ಮೆಚ್ಚುಗೆ ಸೂಚಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರ ಸ್ಕ್ರೀನ್​​ಶಾಟ್ ಹಂಚಿಕೊಂಡು ಟ್ವೀಟ್ ಮಾಡಿರುವ ಶಾರುಖ್ ಫನ್ನಿ ಎಚ್ಚರಿಕೆ ನೀಡಿದ್ದಾರೆ.

‘ನಯನತಾರಾ ಮೊದಲಿನಂತಿಲ್ಲ’; ವಿಘ್ನೇಶ್​ ಶಿವನ್​ಗೆ ವಾರ್ನಿಂಗ್ ಕೊಟ್ಟ ಶಾರುಖ್ ಖಾನ್
ಶಾರುಖ್​, ನಯನತಾರಾ, ವಿಘ್ನೇಶ್ ಶಿವನ್

Updated on: Jul 13, 2023 | 7:08 AM

ನಯನತಾರಾ (Nayanthara) ಹಾಗೂ ವಿಘ್ನೇಶ್ ಶಿವನ್ ಮದುವೆ ಆಗಿ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇಬ್ಬರೂ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಸದ್ಯ ನಯನತಾರಾ ಅವರು ಅಟ್ಲೀ ನಿರ್ದೇಶನದ ‘ಜವಾನ್’ ಸಿನಿಮಾದಲ್ಲಿ (Jawan Movie) ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅವರು ಆ್ಯಕ್ಷನ್ ಮೆರೆದಿದ್ದಾರೆ ಎಂಬುದಕ್ಕೆ ಟೀಸರ್​ನಲ್ಲಿ ಸಾಕ್ಷಿ ಸಿಕ್ಕಿದೆ. ಈ ವಿಚಾರದಲ್ಲಿ ವಿಘ್ನೇಶ್ ಶಿವನ್​ಗೆ ಶಾರುಖ್ ಖಾನ್ ಅವರು ಪ್ರೀತಿಯಿಂದ ಎಚ್ಚರಿಕೆ ನೀಡಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದೆ. ಶಾರುಖ್ ಹಾಸ್ಯಪ್ರಜ್ಞೆಯ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.

ಶಾರುಖ್ ಖಾನ್ ಅವರು ಚಿತ್ರರಂಗದವರ ಜೊತೆಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಸಹೋದ್ಯೋಗಿಗಳನ್ನು ಅವರು ನೋಡಿಕೊಳ್ಳುವ ರೀತಿಯ ಬಗ್ಗೆ ಅನೇಕರಿಂದ ಮೆಚ್ಚುಗೆಯ ಮಾತು ಕೇಳಿ ಬಂದಿದೆ. ಈಗ ಶಾರುಖ್ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ.

ವಿಘ್ನೇಶ್ ಶಿವನ್ ಅವರು ಅಟ್ಲಿ ಬಗ್ಗೆ, ನಯನತಾರಾ ಬಗ್ಗೆ ಹಾಗೂ ಶಾರುಖ್ ಬಗ್ಗೆ ಮೆಚ್ಚುಗೆ ಸೂಚಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರ ಸ್ಕ್ರೀನ್​​ಶಾಟ್ ಹಂಚಿಕೊಂಡು ಟ್ವೀಟ್ ಮಾಡಿರುವ ಶಾರುಖ್, ‘ಎಲ್ಲಾ ಪ್ರೀತಿಗೆ ಧನ್ಯವಾದಗಳು. ನಯನತಾರಾ ಅವರು ಅದ್ಭುತ. ಆದರೆ ಅವರ ಬಗ್ಗೆ ನೀವು ಹುಷಾರಾಗಿರಿ. ಅವರು ಈಗ ಕೆಲವು ಪ್ರಮುಖ ಫೈಟ್​ಗಳನ್ನು ಕಲಿತಿದ್ದಾರೆ’ ಎಂದು ಶಾರುಖ್ ಬರೆದುಕೊಂಡಿದ್ದಾರೆ. ಇದಕ್ಕೆ ಉತ್ತರಿಸಿರುವ ವಿಘ್ನೇಶ್ ಶಿವನ್, ‘ಧನ್ಯವಾದಗಳು ಸರ್. ಸಿನಿಮಾದಲ್ಲಿ ನಿಮ್ಮ ಮಧ್ಯೆ ತುಂಬಾ ಒಳ್ಳೆಯ ರೊಮ್ಯಾನ್ಸ್ ಇದೆ ಎಂದು ನಾನು ಕೇಳಿದ್ದೇನೆ. ಇದನ್ನು ಅವಳು ಪ್ರಣಯ ರಾಜನಿಂದ ಕಲಿತಿದ್ದಾಳೆ. ಜವಾನ್ ಸೂಪರ್ ಹಿಟ್ ಆಗಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನವೇ ‘ಜವಾನ್​’ ಚಿತ್ರವನ್ನು ಬ್ಲಾಕ್​ ಬಸ್ಟರ್​ ಎಂದು ಘೋಷಿಸಿದ ಕರಣ್​ ಜೋಹರ್​

ಶಾರುಖ್ ಖಾನ್ ಅವರು ‘ಪಠಾಣ್’ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ‘ಜವಾನ್’ ಸಿನಿಮಾ ಮೂಲಕ ಅವರಿಗೆ ಮತ್ತೊಂದು ಗೆಲುವು ಸಿಗುವ ಸೂಚನೆ ಸಿಕ್ಕಿದೆ. ಅಟ್ಲಿ ನಿರ್ದೇಶನದ ಮೊದಲ ಹಿಂದಿ ಸಿನಿಮಾ ಇದು. ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ ಮೊದಲಾದ ಸ್ಟಾರ್​ ಕಲಾವಿದರು ಸಿನಿಮಾದಲ್ಲಿದ್ದಾರೆ. ಚಿತ್ರಕ್ಕೆ ನೀಡಿರುವ ಸಂಗೀತ ಗಮನ ಸೆಳೆಯುತ್ತಿದೆ. ಶಾರುಖ್​ ಹೋಂ ಬ್ಯಾನರ್ ‘ರೆಡ್ ಚಿಲ್ಲೀಸ್ ಎಂಟರ್​ಟೇನ್​ಮೆಂಟ್’ ಮೂಲಕ ಗೌರಿ ಖಾನ್ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ