
ಮುಕೇಶ್ ಖನ್ನಾ (Mukesh Khanna) ಅವರು ಶಕ್ತಿಮಾನ್ (Shaktimaan) ಮೂಲಕ ಫೇಮಸ್ ಆಗಿದ್ದರು ಅನ್ನೋದು ಎಲ್ಲರಿಗೂ ಗೊತ್ತು. 90ರ ದಶಕದಲ್ಲಿ ಈ ಶೋ ಸಾಕಷ್ಟು ಮನ್ನಣೆ ಪಡೆದಿತ್ತು. ಈ ಶೋ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದಿದ್ದಂತೂ ಸತ್ಯ. ಈ ಶೋ ಮೇಲೆ ಅವರು ವಿಶೇಷ ಪ್ರೀತಿಯನ್ನು ಇಟ್ಟುಕೊಂಡಿದ್ದಾರೆ. ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಮುಕೇಶ್ ಹೇಳಿದ್ದರು. ಈಗ ಈ ಶೋ ಮತ್ತೆ ಬರೋಕೆ ರೆಡಿ ಆಗಿದೆ. ಆದರೆ, ಇದನ್ನು ನೋಡೋಕೆ ಆಗೋದಿಲ್ಲ. ಏಕೆಂದರೆ, ಆಡಿಯೋ ರೀತಿಯಲ್ಲಿ ಈ ಶೋ ಬರಲಿದೆಯಂತೆ.
ಪಾಕೆಟ್ ಎಫ್ಎಂನಲ್ಲಿ ಒರಿಜಿನಲ್ ಆಡಿಯೋ ಸೀರಿಸ್ ಆಗಿ ‘ಶಕ್ತಿಮಾನ್’ ಬರಲಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಶಕ್ತಿಮಾನ್ ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಲಕ್ಷಾಂತರ ಜನರ ಹೃದಯಗಳಲ್ಲಿರುವ ಒಂದು ಭಾವನೆ. ಶಕ್ತಿಮಾನ್ ಧ್ವನಿ ಮೂಲಕ ಹೊಸ ಪೀಳಿಗೆಯ ಕೇಳುಗರೊಂದಿಗೆ ಸಂಪರ್ಕ ಸಾಧಿಸಲು ನಾನು ರೋಮಾಂಚನಗೊಂಡಿದ್ದೇನೆ. ಈ ವೇದಿಕೆಯು ಶಕ್ತಿಮಾನ್ ಹಾಗೂ ಆತನ ಮೌಲ್ಯಗಳು, ಶಕ್ತಿ ಮತ್ತು ಪುನಃ ಪರಿಚಯಿಸಲು ಉತ್ತಮ ಮಾರ್ಗ ಇದು. ಇಂದಿನ ಯುವಕರಿಗೆ ಅವರು ಇಷ್ಟಪಡುವ ಸ್ವರೂಪದಲ್ಲಿ ಹೊಸ ಕಥೆಗಳೊಂದಿಗೆ ಬರುತ್ತೇನೆ’ ಎಂದು ಅವರು ಹೇಳಿದ್ದಾರೆ.
ಶಕ್ತಿಮಾನ್ ಅನ್ನೋದು ವೀಕ್ಷಣೆಗೆ ಸಿಕ್ಕರೆ ಚೆನ್ನಾಗಿ ಇರುತ್ತದೆ. ಆದರೆ, ಈ ಕಥೆಗಳನ್ನು ಕೇವಲ ಕೇಳಬೇಕು ಎಂದರೆ ಫ್ಯಾನ್ಸ್ ಥ್ರಿಲ್ ಆಗಿ ಬಿಡುತ್ತಾರೆ ಎಂದು ಹೇಳೋಕೆ ಆಗುವುದಿಲ್ಲ. ಹೀಗಾಗಿ, ಈ ಸೂಪರ್ ಹೀರೋ ಕಥೆ ಹಿಟ್ ಆಗಿಯೇ ಬಿಡುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ ಎನ್ನುವ ಮಾತು ವ್ಯಕ್ತವಾಗಿದೆ.
ಕಳೆದ ವರ್ಷ ಈ ಶೋನ ಮತ್ತೆ ತರೋದಾಗಿ ಅವರು ಹೇಳಿದ್ದರು. ‘ಈ ಬಟ್ಟೆ ನನ್ನಲ್ಲೇ ಇದೆ. ನನ್ನಲ್ಲೇ ಬೆರೆತು ಹೋಗಿದೆ. ಶಕ್ತಿಮಾನ್ನಲ್ಲಿ ನಾನು ಉತ್ತಮವಾಗಿ ನಟಿಸಿದ್ದೆ. ಶೂಟಿಂಗ್ ಮಾಡುವಾಗ ಕ್ಯಾಮೆರಾ ಇದೆ ಎಂಬುದನ್ನೇ ಮರೆತಿದ್ದೆ. 1997ರಿಂದ 20005ರವರೆಗೆ ಶೋ ನಡೆದಿತ್ತು. ಈ ಪಾತ್ರ ಈಗಿನ ಜನರೇಷನ್ ತಲುಪಬೇಕು’ ಎಂದಿದ್ದರು. 2027ರ ವೇಳೆಗೆ ಈ ಶೋ ಪ್ರಸಾರ ಕಾಣುವ ಭರವಸೆಯನ್ನು ಅವರು ಹೊರಹಾಕಿದ್ದರು.
‘ಶಕ್ತಿಮಾನ್’ ಹೆಸರಲ್ಲಿ ಸಿನಿಮಾ ಒಂದು ಮೂಡಿ ಬರುತ್ತಿದೆ ಎನ್ನುವ ಸುದ್ದಿ ಇದೆ. ಇದನ್ನು ರಣವೀರ್ ಸಿಂಗ್ ಮಾಡುತ್ತಾರೆ ಎಂದು ಈ ಮೊದಲು ವರದಿ ಆಗಿದೆ. ಈ ಬಗ್ಗೆ ಮುಕೇಶ್ಗೆ ಅಸಮಾಧಾನ ಇದೆ. ರಣವೀರ್ ಬೆತ್ತಲೆ ಆಗಿ ಕಾಣಿಸಿಕೊಂಡಿದ್ದರು. ಇಂಥವರಿಂದ ಸಿನಿಮಾ ಮಾಡಿಸಬಾರದು ಎಂದು ಅವರು ಆಗ್ರಹಿಸಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Wed, 21 May 25