ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​

| Updated By: ಮದನ್​ ಕುಮಾರ್​

Updated on: Apr 22, 2021 | 8:17 AM

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು.

ಶಮಂತ್​ ತ್ಯಾಗಕ್ಕೆ ನಿಬ್ಬೆರಗಾದ ಮನೆಮಂದಿ; ತೆಗಳುತ್ತಿದ್ದವರು ಗಪ್​-ಚುಪ್​
ಶಮಂತ್​ ಬ್ರೋ ಗೌಡ
Follow us on

ಬಿಗ್​ ಬಾಸ್​ ಮನೆಯಲ್ಲಿ ಅತಿ ಹೆಚ್ಚು ತೆಗಳಿಕೆಗೆ ಒಳಗಾದ ಸ್ಪರ್ಧಿ ಎಂದರೆ ಅದು ಶಮಂತ್​ ಬ್ರೋ ಗೌಡ. ಆರಂಭದಲ್ಲಿ ಎರಡು ಬಾರಿ ಕ್ಯಾಪ್ಟನ್​ ಆದ ವಿಚಾರದಿಂದ ಹಿಡಿದು ಸಾಕಷ್ಟು ವಿಷಯಗಳಲ್ಲಿ ಶಮಂತ್​ ಮನೆಯವರಿಂದ ಬೈಸಿಕೊಂಡಿದ್ದಾರೆ. ಆದರೆ, ಈಗ ಶಮಂತ್​ ಮಾಡಿದ ತ್ಯಾಗಕ್ಕೆ ಎಲ್ಲರೂ ನಿಬ್ಬೆರಗಿದ್ದಾರೆ. ಅಷ್ಟೇ ಅಲ್ಲ, ಸಿಕ್ಕ ಸಿಕ್ಕ ವಿಚಾರಕ್ಕೆ ಶಮಂತ್​ ಅವರನ್ನು ಬಯ್ಯುತ್ತಿದ್ದವರು ಈಗ ಸುಮ್ಮನಾಗಿದ್ದಾರೆ. 

ಶಮಂತ್​ ಮೈಕ್​ ಇಲ್ಲದೆ ಮಾತನಾಡಿದ್ದಕ್ಕೆ ಸುದೀಪ್​ ಶಿಕ್ಷೆ ಒಂದನ್ನು ನೀಡಿದ್ದರು. ಅವರು ನೇರವಾಗಿ ಎಲಿಮಿನೇಷನ್​ಗೆ ನಾಮಿನೇಟ್​ ಆಗಬೇಕು ಅಥವಾ ಮನೆಯ ಎಲ್ಲಾ ಸದಸ್ಯರು ಬೆಡ್​​ ರೂಂ ಬಿಟ್ಟುಕೊಡಬೇಕು. ಆಗ ಎಲ್ಲರ ಬಳಿ ಹೋಗಿ​  ಬೆಡ್​ರೂಂ ಬಿಟ್ಟುಕೊಡುವಂತೆ ಶಮಂತ್ ಕನ್ವಿನ್ಸ್​ ಮಾಡಿದ್ದರು. ಈ ಮೂಲಕ ಎಲಿಮಿನೇಷನ್​ನಿಂದ ತಾತ್ಕಾಲಿಕವಾಗಿ ಪಾರಾಗಿದ್ದರು. ಈ ವಿಚಾರಕ್ಕೆ  ಶಮಂತ್​ ಸಾಕಷ್ಟು ತೆಗಳಿಕೆ ಒಳಗಾಗಿದ್ದರು. ಈಗ ಶಮಂತ್​ ಹೀರೋ ಆಗಿದ್ದಾರೆ.

ಬಿಗ್​ ಬಾಸ್​ ಎಲ್ಲಾ ಸೌಲಭ್ಯಗಳನ್ನು ಹಿಂಪಡೆದಿದ್ದಾರೆ. ನಿದ್ರಿಸಲು ಹಾಸಿಗೆ ಇಲ್ಲ. ಹಾಕಿಕೊಳ್ಳೋಕೆ ಬಟ್ಟೆ ಇಲ್ಲ. ಸ್ನಾನ ಮಾಡೋಕೆ ಸಾಮಗ್ರಿ ಇಲ್ಲ. ಟಾಸ್ಕ್​ ಮೂಲಕ ಮನೆಯ ಸೌಲಭ್ಯಗಳನ್ನು ಹಿಂಪಡೆಯಬೇಕು. ಆದರೆ ಸೂಟ್​ಕೇಸ್​ ಪಡೆದುಕೊಳ್ಳುವ ಟಾಸ್ಕ್​ನಲ್ಲಿ ಮನೆಯ ಸದಸ್ಯರು ಸೋತಿದ್ದರು. ಈ ವೇಳೆ ಬಿಗ್​ ಬಾಸ್​ ಆಯ್ಕೆ ಒಂದನ್ನು ನೀಡಿದ್ದರು.

ಮನೆಯ ಒಬ್ಬ ಸದಸ್ಯ  ಸೂಟ್​ಕೇಸ್​ ತ್ಯಾಗ ಮಾಡೋಕೆ ರೆಡಿ ಇದ್ದರೆ ಮನೆ ಉಳಿದ ಸದಸ್ಯರಿಗೆ ಸೂಟ್​ಕೇಸ್​ ಸಿಗಲಿದೆ ಎಂದು ಬಿಗ್​ ಬಾಸ್​ ಹೇಳಿದ್ದರು. ಈ ವೇಳೆ ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ತ್ಯಾಗಕ್ಕೆ ಮುಂದಾದರು. ನನ್ನಿಂದಾಗಿ ನೀವೆಲ್ಲರೂ ಲೀವಿಂಗ್​ ಏರಿಯಾ ಬಿಟ್ಟುಕೊಟ್ಟಿದ್ದಿರಿ. ಹೀಗಾಗಿ, ನಾನು ಈ ಬಾರಿ ತ್ಯಾಗ ಮಾಡುತ್ತೇನೆ. ಈ ಮೂಲಕ ನನ್ನ ಮೇಲಿರುವ ಋಣ ತೀರಿಸುತ್ತೇನೆ ಎಂದರು. ಇದನ್ನು ಕೇಳಿ ಬಿಗ್​ ಬಾಸ್​ ಮನೆ ಸದಸ್ಯರು ತುಂಬಾನೇ ಖುಷಿಪಟ್ಟರು. ಈ ಮೂಲಕ ಎಲ್ಲಾ ಸದಸ್ಯರಿಗೆ ಸೂಟ್​ಕೇಸ್​ ಸಿಕ್ಕಿದೆ.

ಇದನ್ನೂ ಓದಿ: ಯಾವ ಬಾಯಲ್ಲಿ ಅಕ್ಕ ಅಂತೀಯಾ? ಅದೇ ಬಾಯಲ್ಲಿ ಏನೇನೋ ಹೇಳಿದ್ದೀಯ! ಶಮಂತ್​ಗೆ ದಿವ್ಯಾ ಪಂಚ್​!

Kichcha Sudeep Salary: ಬಿಗ್​ ಬಾಸ್​ ಸೀಸನ್​ 8ಗೆ ಕಿಚ್ಚ ಸುದೀಪ್​ ಪಡೆದ ಸಂಭಾವನೆ ಎಷ್ಟು?